ವಾರ್ನರ್ ರೆಕಾರ್ಡ್ ಇನ್ಮುಂದೆ ಹಿಸ್ಟರಿ!... ಐಪಿಎಲ್ ಇತಿಹಾಸದಲ್ಲಿ ಮತ್ತೊಂದು ವಿಶ್ವದಾಖಲೆ ಬರೆದ ಸೂರ್ಯವಂಶಿ! | Vaibhav Sooryavanshi

Vaibhav Sooryavanshi | ಐಪಿಎಲ್ ಇತಿಹಾಸದಲ್ಲಿ ಮತ್ತೊಂದು ವಿಶ್ವದಾಖಲೆ ಬರೆದ ಸೂರ್ಯವಂಶಿ!
Vaibhav Sooryavanshi | ಐಪಿಎಲ್ ಇತಿಹಾಸದಲ್ಲಿ ಮತ್ತೊಂದು ವಿಶ್ವದಾಖಲೆ ಬರೆದ ಸೂರ್ಯವಂಶಿ!
Published on
Vaibhav Sooryavanshi: ರಾಜಸ್ಥಾನ್ ರಾಯಲ್ಸ್ ತಂಡದ ರನ್‌ ಮಷಿನ್, 15 ವರ್ಷದ ಆಟಗಾರ ವೈಭವ್ ಸೂರ್ಯವಂಶಿ ಗುಜರಾತ್ ಟೈಟನ್ಸ್ ವಿರುದ್ಧದ ಕ್ವಾಲಿಫೈಯರ್ 2ನೇ ಪಂದ್ಯದಲ್ಲಿ ದಾಖಲೆಯೊಂದನ್ನು ಬರೆದಿದ್ದು, ಐಪಿಎಲ್​ನ ಇತಿಹಾಸದಲ್ಲಿ, ಒಂದೇ ಸೀಸನ್‌ನ ಪವರ್‌ಪ್ಲೇನಲ್ಲಿ 500+ ರನ್ ಸಿಡಿಸಿದ ಜಗತ್ತಿನ ಏಕೈಕ ಬ್ಯಾಟರ್ ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ.
ಇದಕ್ಕೂ ಮುನ್ನ 2016 ರ ಐಪಿಎಲ್ ಆವೃತ್ತಿಯಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಪರ ಆಡಿದ್ದ ಡೇವಿಡ್ ವಾರ್ನರ್ ಪವರ್‌ಪ್ಲೇನಲ್ಲಿ 467 ರನ್ ಗಳಿಸಿದ್ದು ಇದುವರೆಗಿನ ದಾಖಲೆಯಾಗಿತ್ತು. ಇದೀಗ ವಾರ್ನರ್​ ಅವರ ಹತ್ತು ವರ್ಷಗಳ ಹಳೆಯ ದಾಖಲೆಯನ್ನು ವೈಭವ್​ ಧೂಳೀಪಟ ಮಾಡಿದ್ದಾನೆ.

ವಿಕೆಟ್ ಉರುಳಿದರೂ ನಿಲ್ಲದ ರನ್ ಬೇಟೆ!

ಕ್ವಾಲಿಫೈಯರ್ 2 ರಂತಹ ಹೈ-ಪ್ರೆಶರ್ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ಆರಂಭದಲ್ಲೇ ಯಶಸ್ವಿ ಜೈಸ್ವಾಲ್ ಮತ್ತು ಧ್ರುವ್ ಜುರೆಲಲ್​ರ ವಿಕೆಟ್‌ಗಳನ್ನು ಕಳೆದುಕೊಂಡು ಆತಂಕಕ್ಕೆ ಸಿಲುಕಿತ್ತು. ಆದರೆ, ಇದರಿಂದ ಎದೆಗುಂದದ ಎಡಗೈ ಬ್ಯಾಟರ್ ವೈಭವ್, ತಮ್ಮ ಎಂದಿನ ಆಕ್ರಮಣಕಾರಿ ಶೈಲಿಯ ಆಟವನ್ನು ಮುಂದುವರಿಸಿದರು. ಪಂದ್ಯದ ಮೂರನೇ ಓವರ್‌ನಲ್ಲಿ ಗುಜರಾತ್ ಬೌಲರ್ ಮೊಹಮ್ಮದ್ ಸಿರಾಜ್​ರನ್ನು ಟಾರ್ಗೆಟ್ ಮಾಡಿದ ಸೂರ್ಯವಂಶಿ, ಬೌಂಡರಿಗಳ ಸುರಿಮಳೆಗೈದು ತಂಡದ ರನ್ ಗತಿಯನ್ನು ಕಾಯ್ದುಕೊಂಡರು.

ಜವಾಬ್ದಾರಿಯುತ ಆಟ, ನಿಧಾನಗತಿಯ ಅರ್ಧಶತಕ

ಒಂದೆಡೆ ವಿಕೆಟ್‌ಗಳು ಉರುಳುತ್ತಿದ್ದ ಕಾರಣ ಪರಿಸ್ಥಿತಿಗೆ ತಕ್ಕಂತೆ ಬ್ಯಾಟ್ ಮಾಡಿದ ವೈಭವ್, 31 ಎಸೆತಗಳಲ್ಲಿ ತಮ್ಮ ಅರ್ಧಶತಕವನ್ನು ಪೂರ್ಣಗೊಳಿಸಿದರು. ಆರಂಭದಲ್ಲಿ ಅಬ್ಬರಿಸಿದರೂ, ನಂತರದ ಓವರ್‌ಗಳಲ್ಲಿ ತಂಡದ ಹಿತದೃಷ್ಟಿಯಿಂದ ಜವಾಬ್ದಾರಿಯುತವಾಗಿ ಆಡಿ 13ನೇ ಓವರ್‌ನಲ್ಲಿ ಈ ಮೈಲಿಗಲ್ಲು ತಲುಪಿದರು. ವಿಶೇಷವೆಂದರೆ, ಈ ಬಾರಿಯ ಟೂರ್ನಿಯಲ್ಲಿ ವೈಭವ್ ಸೂರ್ಯವಂಶಿ ಗಳಿಸಿದ ಅತ್ಯಂತ ನಿಧಾನಗತಿಯ ಅರ್ಧಶತಕ ಇದಾಗಿದೆ. ಸದ್ಯ 17 ಓವರ್‌ಗಳ ಮುಕ್ತಾಯಕ್ಕೆ ರಾಜಸ್ಥಾನ್ ರಾಯಲ್ಸ್ 171 ರನ್​ಗಳಿಸಿದ್ದು, ವೈಭವ್ ಸೂರ್ಯವಂಶಿ ಮತ್ತು ಅನುಭವಿ ರವೀಂದ್ರ ಜಡೇಜಾ ಕ್ರೀಸ್‌ನಲ್ಲಿದ್ದಾರೆ(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net