ಸೀಸನ್ ಮುಂದುವರಿದಂತೆ ಈ ಭಿನ್ನಾಭಿಪ್ರಾಯ ತಾರಕಕ್ಕೇರಿದ್ದು, ವಿವಿಧ ಮೂಲಗಳಿಂದ ಬರುವ ಅತಿಯಾದ ಇನ್‌ಪುಟ್‌ಗಳ ಬಗ್ಗೆ ಪಂತ್ ಅಸಮಾಧಾನ ವ್ಯಕ್ತಪಡಿಸಿದರೆ, ಥಿಂಕ್ ಟ್ಯಾಂಕ್ ಸದಸ್ಯರು ತಂಡದ ನಾಯಕತ್ವ ಮತ್ತು ಪ್ರದರ್ಶನವನ್ನು ಸಾರ್ವಜನಿಕವಾಗಿ ಪ್ರಶ್ನಿಸುತ್ತಿದ್ದರು. ಒಂದು ಹಂತದಲ್ಲಿ, ಯೋಚನೆಗಳನ್ನು ಮಾಡುವುದು ಸುಲಭ, ಆದರೆ ಮೈದಾನದಲ್ಲಿ ಅದನ್ನು ಕಾರ್ಯಗತಗೊಳಿಸುವುದು ತುಂಬಾ ಕಷ್ಱ ಎಂದು ಪಂತ್ ಹೇಳಿದ್ದು, ತಂಡದ ಒಳಗಿನ ಭಿನ್ನಾಭಿಪ್ರಾಯಗಳ ಪ್ರತಿಬಿಂಬವಾಗಿತ್ತು ಎನ್ನಲಾಗಿದೆ.