ಶಾಲೆಯಲ್ಲಿ ನೈತಿಕತೆ ಪಾಠ ತೆರೆಮರೆಯಲ್ಲಿ ಮನೆ ಹಾಳು ಮಾಡೋ ದಂಧೆ ಮಾಡುತ್ತಿದ್ದ ಶಿಕ್ಷಕಿಗೆ ಸಿಕ್ತು ಬಿಗ್​ ರಿಲೀಫ್! Teacher ​

ಕಾವ್ಯಾಗೆ ಕೇರಳ ಹೈಕೋರ್ಟ್ ಕಟ್ಟುನಿಟ್ಟಿನ ನಿಬಂಧನೆಗಳೊಂದಿಗೆ ಜಾಮೀನು ನೀಡಿದೆ. ವಶಪಡಿಸಿಕೊಂಡ ಎಂಡಿಎಂಎಯು ವಾಣಿಜ್ಯ ಪ್ರಮಾಣದಲ್ಲಿಲ್ಲ ಎಂಬ ವಾದವನ್ನು ಹೈಕೋರ್ಟ್ ಪರಿಗಣಿಸಿದೆ.
Teacher ​
ಡ್ರಗ್ಸ್​ ಡೀಲ್​ ಆರೋಪಿ ಶಿಕ್ಷಕಿ ಕಾವ್ಯಾ
Published on

ತಿರುವನಂತಪುರಂ : ಇದೇ ತಿಂಗಳ ಆರಂಭದಲ್ಲಿ ರಾಜ್ಯಾದ್ಯಂತ ಭಾರಿ ಸಂಚಲನ ಮೂಡಿಸಿದ್ದ ವಡಕರ ಎಂಡಿಎಂಎ (Vadakara MDMA) ಪ್ರಕರಣದಲ್ಲಿ ಬಂಧಿತಳಾಗಿದ್ದ ಮೂರನೇ ಆರೋಪಿ, ಶಾಲಾ ಶಿಕ್ಷಕಿ ( Teacher ) ಕಾವ್ಯಾಗೆ ಕೇರಳ ಹೈಕೋರ್ಟ್ ಕಟ್ಟುನಿಟ್ಟಿನ ಷರತ್ತುಗಳೊಂದಿಗೆ ಜಾಮೀನು ಮಂಜೂರು ಮಾಡಿದೆ. ನೈತಿಕತೆಯ ಪಾಠ ಹೇಳಿಕೊಡಬೇಕಾದ ಶಿಕ್ಷಕಿಯೊಬ್ಬಳು ತೆರೆಮರೆಯಲ್ಲಿ ಡ್ರಗ್ಸ್ ದಂಧೆ ಹಾಗೂ ಹಣಕಾಸು ವ್ಯವಹಾರದಲ್ಲಿ ಭಾಗಿಯಾಗಿದ್ದಳು ಎಂಬ ಆರೋಪವು ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು.

ಕಾವ್ಯಾಗೆ ಕೇರಳ ಹೈಕೋರ್ಟ್ ಕಟ್ಟುನಿಟ್ಟಿನ ನಿಬಂಧನೆಗಳೊಂದಿಗೆ ಜಾಮೀನು ನೀಡಿದೆ. ವಶಪಡಿಸಿಕೊಂಡ ಎಂಡಿಎಂಎಯು ವಾಣಿಜ್ಯ ಪ್ರಮಾಣದಲ್ಲಿಲ್ಲ ಎಂಬ ವಾದವನ್ನು ಹೈಕೋರ್ಟ್ ಪರಿಗಣಿಸಿದೆ. ಅಲ್ಲದೆ, ಇನ್ನು ಮುಂದೆ ಕಾವ್ಯಾಳನ್ನು ಕಸ್ಟಡಿಯಲ್ಲಿಟ್ಟು ವಿಚಾರಣೆ ನಡೆಸುವ ಅಗತ್ಯವಿಲ್ಲ ಎಂಬ ಅಂಶವನ್ನು ಆಧರಿಸಿ ನ್ಯಾಯಾಲಯವು ಈ ಆದೇಶ ಹೊರಡಿಸಿದೆ. ಈ ಪ್ರಕರಣದಲ್ಲಿ ಈ ಹಿಂದೆ ಮತ್ತೊಬ್ಬ ಆರೋಪಿಯಾದ ಕೀರ್ತನಾ ಕೂಡ ಜಾಮೀನು ಪಡೆದಿದ್ದಳು.

ಈ ಮೂವರು ಶಿಕ್ಷಕಿಯರಿಗೆ ಕಾಲೇಜು ವಿದ್ಯಾರ್ಥಿಗಳೇ ಟಾರ್ಗೆಟ್​: ಪ್ರೀತಿಯ ಬಲೆಗೆ ಬೀಳಿಸಿ ಮಾದಕ ಸುಳಿಗೆ ಸಿಲುಕಿಸುತ್ತಿದ್ದರು! Teachers
ಈ ಮೂವರು ಶಿಕ್ಷಕಿಯರಿಗೆ ಕಾಲೇಜು ವಿದ್ಯಾರ್ಥಿಗಳೇ ಟಾರ್ಗೆಟ್​: ಪ್ರೀತಿಯ ಬಲೆಗೆ ಬೀಳಿಸಿ ಮಾದಕ ಸುಳಿಗೆ ಸಿಲುಕಿಸುತ್ತಿದ್ದರು! Teachers
Also Read
ನನ್ನನ್ನು ಯಾರೋ ಬೇಕಂತಲೇ... ಶಾಲೆಯಲ್ಲಿ ನೈತಿಕತೆ ಪಾಠ ಮಾಡಿ ತೆರೆಮರೆಯಲ್ಲಿ ಮನೆ ಹಾಳು ಮಾಡ್ತಿದ್ದ ಶಿಕ್ಷಕಿಯ ಹೊಸ ವರಸೆ! Teacher
Teacher ​

ಕಳೆದ ಜುಲೈ 25 ರಂದು ಕೇರಳ ಪೊಲೀಸರು ಕಾವ್ಯಾಳನ್ನು ಡ್ರಗ್ಸ್​ ಪ್ರಕರಣದಲ್ಲಿ ಬಂಧಿಸಿದ್ದರು. ತನಿಖಾ ತಂಡದ ಪ್ರಾಥಮಿಕ ಮಾಹಿತಿಯ ಪ್ರಕಾರ, ಎಂಡಿಎಂಎ ಮಾರಾಟದ ಹಣಕಾಸು ವ್ಯವಹಾರದಲ್ಲಿ ಕಾವ್ಯಾಗೆ ನೇರ ಮತ್ತು ಸ್ಪಷ್ಟ ಪಾತ್ರವಿತ್ತು. ಬ್ಯಾಂಕ್ ಖಾತೆಗಳ ಮೂಲಕ ನಡೆದ ಹಣ ವರ್ಗಾವಣೆಯಲ್ಲಿ ಈ ಶಿಕ್ಷಕಿ ಪ್ರಮುಖ ಪಾತ್ರವಹಿಸಿದ್ದಾಳೆ ಎಂದು ಪೊಲೀಸರು ನ್ಯಾಯಾಲಯದ ಗಮನಕ್ಕೆ ತಂದಿದ್ದರು. ಶಾಲೆಯಲ್ಲಿ ಮಕ್ಕಳ ಭವಿಷ್ಯ ರೂಪಿಸಬೇಕಾದವರು ಇಂತಹ ಕೃತ್ಯಗಳಲ್ಲಿ ತೊಡಗಿಸಿಕೊಂಡಿರುವುದು ಸಮಾಜಕ್ಕೆ ದೊಡ್ಡ ಆಘಾತ ತಂದಿದೆ.

ಈ ಕುಖ್ಯಾತ ಡ್ರಗ್ಸ್ ಜಾಲದ ಪ್ರಕರಣದಲ್ಲಿ ಇನ್ನುಳಿದ ಆರೋಪಿಗಳ ಪಾತ್ರದ ಬಗ್ಗೆಯೂ ತನಿಖೆ ಮುಂದುವರಿದಿದೆ. ಪ್ರಕರಣದ ನಾಲ್ಕನೇ ಆರೋಪಿ ನೀಷ್ಮಾ ಹಾಗೂ ಐದನೇ ಆರೋಪಿ ಜಿಜಿಲ್ ಕುರಿಯಕೋಸ್ ಸದ್ಯ ನ್ಯಾಯಾಂಗ ಬಂಧನದಲ್ಲಿದ್ದಾರೆ. ಮುಂಬರುವ ದಿನಗಳಲ್ಲಿ ಇವರ ಜಾಮೀನು ಅರ್ಜಿಗಳನ್ನೂ ಸಹ ಹೈಕೋರ್ಟ್ ವಿಚಾರಣೆಗೆ ಕೈಗೆತ್ತಿಕೊಳ್ಳುವ ಸಾಧ್ಯತೆಯಿದೆ ಎಂದು ವರದಿಯಾಗಿದೆ. 'ಆಪರೇಷನ್ ತೂಫಾನ್' ಕಾರ್ಯಾಚರಣೆಯ ಭಾಗವಾಗಿ ಪೊಲೀಸರು ಈ ಜಾಲದ ಬೇರುಗಳನ್ನು ಅಗೆಯುತ್ತಿದ್ದಾರೆ.

ಮಕ್ಕಳಿಗೆ ಉತ್ತಮ ಮೌಲ್ಯಗಳು ಮತ್ತು ನೈತಿಕತೆಯನ್ನು ಬೋಧಿಸಬೇಕಾದ ಶಿಕ್ಷಕಿಯರೇ ಇಂತಹ ವಿನಾಶಕಾರಿ ಡ್ರಗ್ಸ್ ದಂಧೆಯಲ್ಲಿ ತೊಡಗಿಸಿಕೊಂಡಿರುವುದು ಕೇರಳ ಮಾತ್ರವಲ್ಲದೆ ಇಡೀ ದೇಶದ ಶಿಕ್ಷಣ ವಲಯ ತಲೆತಗ್ಗಿಸುವಂತೆ ಮಾಡಿದೆ. ಮೇಲ್ನೋಟಕ್ಕೆ ಮಾದರಿ ಶಿಕ್ಷಕಿಯಂತೆ ಕಾಣುತ್ತಿದ್ದವರು ತೆರೆಮರೆಯಲ್ಲಿ 'ಲೇಡಿ ಡಾನ್' ರೀತಿಯಲ್ಲಿ ಜಾಲ ನಡೆಸಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಸಮಾಜದ ಸ್ವಾಸ್ಥ್ಯವನ್ನು ಹಾಳುಮಾಡುತ್ತಿರುವ ಇಂತಹ ಕೃತ್ಯಗಳ ವಿರುದ್ಧ ಕಠಿಣ ಕಾನೂನು ಕ್ರಮಗಳು ಮುಂದುವರಿಯಬೇಕಾದ ಅಗತ್ಯವಿದೆ ಎಂದು ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ.

ಸೈಕಾಲಜಿ ಪದವೀಧರೆ

ಅಂದಹಾಗೆ, ಕೇರಳದ ಪೆರಂಬ್ರ ಬಿಆರ್‌ಸಿ ವ್ಯಾಪ್ತಿಯ ಚೆರುವೆಲ್ಲೂರ್ ಸರ್ಕಾರಿ ಎಲ್‍ಪಿ ಶಾಲೆಗೆ ಸಂಯೋಜಿತವಾಗಿರುವ ಆಟಿಸಂ ಶಾಲೆಯಲ್ಲಿ ಆರೋಪಿ ಕಾವ್ಯಾ, 2016 ರಿಂದ ಸ್ಪೆಷಲ್ ಎಜುಕೇಟರ್ ಆಗಿ ಗುತ್ತಿಗೆ ಆಧಾರದ ಮೇಲೆ ಕರ್ತವ್ಯ ನಿರ್ವಹಿಸುತ್ತಿದ್ದಳು. ಎಂಎ ಸೈಕಾಲಜಿ ಪದವೀಧರೆಯಾಗಿದ್ದ ಈಕೆ ವಾರಕ್ಕೆ ಮೂರು ದಿನ ಮಾತ್ರ ಶಾಲೆಗೆ ಆಗಮಿಸುತ್ತಿದ್ದಳು. ಕಳೆದ ವರ್ಷ ಕಾರು ಅಪಘಾತಕ್ಕೊಳಗಾಗಿದ್ದ ಈಕೆಯ ಚಿಕಿತ್ಸೆಗಾಗಿ ಶಾಲೆಯ ಶಿಕ್ಷಕರು ಹಾಗೂ ಎಸ್‌ಎಸ್‌ಕೆ ಸಿಬ್ಬಂದಿ ವರ್ಗದವರು ಹಣ ಸಂಗ್ರಹಿಸಿ ಆರ್ಥಿಕ ನೆರವು ನೀಡಿದ್ದರು.

ದಿಢೀರ್​ ಶ್ರೀಮಂತಿಕೆ

ಆದರೆ, ಚಿಕಿತ್ಸೆಗೆ ಕಷ್ಟಪಡುತ್ತಿದ್ದ ಈಕೆ ಇತ್ತೀಚೆಗೆ ದಿಢೀರನೆ ಅತ್ಯಂತ ದುಬಾರಿ ಐಷಾರಾಮಿ ಕಾರನ್ನು ಖರೀದಿಸಿದ್ದಳು. ವಿದೇಶದಲ್ಲಿರುವ ತನ್ನ ಸಹೋದರನ ವಾಹನ ಇದು ಎಂದು ಕಾವ್ಯಾ ನಂಬಿಸಲು ಯತ್ನಿಸಿದ್ದರೂ ಆಕೆಯ ಈ ದಿಢೀರ್ ಶ್ರೀಮಂತಿಕೆ ಶಾಲೆಯ ಶಿಕ್ಷಕರಲ್ಲಿ ಹಾಗೂ ಸ್ಥಳೀಯರಲ್ಲಿ ತೀವ್ರ ಅನುಮಾನ ಹುಟ್ಟುಹಾಕಿತ್ತು. ಕೊನೆಗೆ ಪೊಲೀಸರ 'ಆಪರೇಷನ್ ತೂಫಾನ್' ಕಾರ್ಯಾಚರಣೆಯಲ್ಲಿ ಈಕೆಯ ಅಸಲಿ ಬಣ್ಣ ಬಯಲಾಗಿದೆ.

ಪೊಲೀಸ್ ತನಿಖೆಯ ವೇಳೆ ಈ ಜಾಲವು ಮಾದಕ ವಸ್ತು ಪೂರೈಕೆಗೆ ಅತ್ಯಂತ ಯೋಜಿತ ಹಾಗೂ ಹೈಟೆಕ್ ಮಾರ್ಗವನ್ನು ಬಳಸುತ್ತಿದ್ದುದು ಪತ್ತೆಯಾಗಿದೆ. ಗ್ರಾಹಕರು ನಿಗದಿತ ಖಾತೆಗೆ 2 ಸಾವಿರ ರೂಪಾಯಿ ಹಣವನ್ನು ಆನ್‌ಲೈನ್ ಮೂಲಕ ವರ್ಗಾಯಿಸಿದ ತಕ್ಷಣ ಡ್ರಗ್ಸ್ ಅಡಗಿಸಿಟ್ಟಿರುವ ನಿರ್ದಿಷ್ಟ ಸ್ಥಳದ ಜಿಪಿಎಸ್ ಲೋಕೇಶನ್ ಅನ್ನು ಅವರ ಮೊಬೈಲ್‌ಗೆ ಕಳುಹಿಸಲಾಗುತ್ತಿತ್ತು. ತದನಂತರ ಗ್ಯಾಂಗ್‌ನ ಇನ್ನೊಬ್ಬ ಸದಸ್ಯ ಆ ಸ್ಥಳಕ್ಕೆ ತಲುಪಿ ಮಾದಕ ವಸ್ತುವನ್ನು ತಲುಪಿಸುತ್ತಿದ್ದ.

Also Read
ಶಾಲೆಯಲ್ಲಿ ನೈತಿಕತೆ ಪಾಠ ತೆರೆಮರೆಯಲ್ಲಿ ಮನೆ ಹಾಳು ಮಾಡೋ ದಂಧೆ: ಶಿಕ್ಷಕಿಯರ ನೆಟ್​ವರ್ಕ್​ ಕಂಡು ಪೊಲೀಸರೇ ಶಾಕ್​! Teachers
Teacher ​

ತನಿಖಾ ಸಂಸ್ಥೆಗಳ ಕಣ್ಣು ತಪ್ಪಿಸಲು ಈ ಜಾಲವು ಹಣದ ವಹಿವಾಟಿಗೆ ತಂತ್ರ ರೂಪಿಸಿತ್ತು. ಡ್ರಗ್ಸ್ ಖರೀದಿದಾರರು ಮೊದಲು ಕಾವ್ಯಾಳ ಆಪ್ತ ಗೆಳತಿ ಕೀರ್ತನಾ ಖಾತೆಗೆ ಹಣ ಕಳುಹಿಸುತ್ತಿದ್ದರು. ಈ ಖಾತೆಯಲ್ಲಿ ದೊಡ್ಡ ಮೊತ್ತದ ಹಣ ಸಂಗ್ರಹವಾಗುತ್ತಿದ್ದಂತೆ ಅದನ್ನು ಕಾವ್ಯಾಳ ಬ್ಯಾಂಕ್ ಖಾತೆಗೆ ವರ್ಗಾಯಿಸಲಾಗುತ್ತಿತ್ತು. ಕೀರ್ತನಾ ನೇರವಾಗಿ ಡ್ರಗ್ಸ್ ಬಳಕೆದಾರರ ಸಂಪರ್ಕದಲ್ಲಿ ಇಲ್ಲದಿದ್ದರೂ ದೊಡ್ಡ ಮಟ್ಟದ ಡ್ರಗ್ಸ್ ಡೀಲರ್‌ಗಳ ಜೊತೆ ನಿಕಟ ಸಂಪರ್ಕ ಹೊಂದಿರುವುದು ಪೊಲೀಸ್ ತನಿಖೆಯಲ್ಲಿ ದೃಢಪಟ್ಟಿದೆ.

ವಡಕರ ಮೂಲದ ಯುವಕನೊಬ್ಬ ಎಂಡಿಎಂಎ ಸಮೇತ ಸಿಕ್ಕಿಬಿದ್ದ ಪ್ರಕರಣದ ಬೆನ್ನುಹತ್ತಿದ ಪೊಲೀಸರಿಗೆ ಕೀರ್ತನಾಳ ಬ್ಯಾಂಕ್ ಖಾತೆಯ ಸುಳಿವು ಸಿಕ್ಕಿತ್ತು. ಈ ಆಧಾರದ ಮೇಲೆ ಜುಲೈ 11 ರಂದು ಕೀರ್ತನಾ (28) ಜಿಲೆಯನ್ನು ಬಂಧಿಸಿದ ಪೊಲೀಸರು ಬಳಿಕ ಆಕೆಯ ನೀಡಿದ ಮಾಹಿತಿಯಂತೆ ಕಾವ್ಯಾ (29) ಎಂಬಾಕೆಯನ್ನು ಬಂಧಿಸಿದರು. ಇದೀಗ ಇಬ್ಬರು ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ, (ಏಜೆನ್ಸೀಸ್​).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net