ಹೆತ್ತ ತಂದೆಯ ಅಂತ್ಯಸಂಸ್ಕಾರಕ್ಕೂ ಮುನ್ನ ಖಾಲಿ ಕಾಗದದ ಮೇಲೆ ಹೆಬ್ಬೆಟ್ಟು ಒತ್ತಿಸಿಕೊಂಡ ಮಗ! Blank Papers

ಹೆತ್ತ ತಂದೆಯ ಅಂತ್ಯಸಂಸ್ಕಾರಕ್ಕೂ ಮುನ್ನ ಖಾಲಿ ಕಾಗದದ ಮೇಲೆ ಹೆಬ್ಬೆಟ್ಟು ಒತ್ತಿಸಿಕೊಂಡ ಮಗ! Blank Papers
ಹೆತ್ತ ತಂದೆಯ ಅಂತ್ಯಸಂಸ್ಕಾರಕ್ಕೂ ಮುನ್ನ ಖಾಲಿ ಕಾಗದದ ಮೇಲೆ ಹೆಬ್ಬೆಟ್ಟು ಒತ್ತಿಸಿಕೊಂಡ ಮಗ! Blank Papers
Published on

ಪ್ರಮುಖ ಮುಖ್ಯಾಂಶಗಳು

  • ಉತ್ತರ ಪ್ರದೇಶದ ಲಖನೌನಲ್ಲಿ ಆಸ್ತಿಗಾಗಿ ಅಮಾನವೀಯ ಕೃತ್ಯ
  • ಮೃತನ ಅಂತ್ಯಸಂಸ್ಕಾರಕ್ಕೂ ಮುನ್ನ ಖಾಲಿ ಕಾಗದದ ಮೇಲೆ ಹೆಬ್ಬೆಟ್ಟು ಪಡೆದ ಮಗ
  • ತಂದೆಯ ಶವದ ಮೇಲೆ ಬಲವಂತವಾಗಿ ಹೆಬ್ಬೆರಳಿನ ಮುದ್ರೆ ಒತ್ತಿಸಿಕೊಂಡ ಮಹೇಂದ್ರ
  • ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಆಘಾತಕಾರಿ ವಿಡಿಯೋ ದೃಶ್ಯಗಳು
ಲಖನೌ: ಈ ಜಗತ್ತಿನಲ್ಲಿ ಸಂಬಂಧಗಳಿಗೆ ಹಾಗೂ ಮಾನವೀಯತೆಗೆ ಬೆಲೆನೇ ಇಲ್ಲ ಅನ್ನೋ ಮಾತಿಗೆ ತಾಜಾ ಸಾಕ್ಷಿಯಾಗಿ ಉತ್ತರ ಪ್ರದೇಶದ ರಾಜಧಾನಿ ಲಖನೌದಲ್ಲಿ ಒಂದು ಘಟನೆ ( Blank Papers ) ನಡೆದಿದೆ. ಲಖನೌದ ರಹೀಮಾಬಾದ್ ಪ್ರದೇಶದ ಖಾದುಹಾ ಗ್ರಾಮದಲ್ಲಿ 75 ವರ್ಷ ವಯಸ್ಸಿನ ಛತ್ರಪಾಲ್ ಎಂಬ ವ್ಯಕ್ತಿ ಮೃತಪಟ್ಟಿದ್ದಾರೆ. ಅವರ ಅಂತ್ಯಸಂಸ್ಕಾರಕ್ಕೂ ಮುಂಚೆ ಹೆತ್ತ ಮಗನೇ ಆಸ್ತಿಗಾಗಿ ಎಸಗಿರುವ ಒಂದು ಕೃತ್ಯ ಎಲ್ಲೆಡೆ ಆಕ್ರೋಶಕ್ಕೆ ಕಾರಣವಾಗಿದೆ.
ತಂದೆಯ ಮರಣದ ನಂತರ ಅವರ ಮಗ ಮಹೇಂದ್ರ ಹಾಗೂ ಆತನ ಸೋದರಮಾವ ಅಥವಾ ಸಂಬಂಧಿಕನೊಬ್ಬ ಸೇರಿಕೊಂಡು ಆಸ್ತಿಯನ್ನು ತಮ್ಮ ಹೆಸರಿಗೆ ಬರೆಸಿಕೊಳ್ಳಲು ಈ ಹೀನ ಕೃತ್ಯ ಎಸಗಿದ್ದಾರೆ. ಅಂತಿಮ ವಿಧಿ-ವಿಧಾನಗಳು ಮತ್ತು ಅಂತ್ಯಸಂಸ್ಕಾರಕ್ಕೂ ಮುನ್ನ, ಬದುಕಿನಿಂದ ಅಗಲಿದ ತಂದೆಯ ಶವದ ಬಳಿ ತೆರಳಿ ಆತನ ಹೆಬ್ಬೆರಳನ್ನು ಬಲವಂತವಾಗಿ ಖಾಲಿ ಬಿಳಿ ಕಾಗದಗಳ ಮೇಲೆ ಒತ್ತಿಸಿಕೊಂಡಿದ್ದಾರೆ.
ಈ ಅಮಾನವೀಯ ಹಾಗೂ ಅಕ್ಷಮ್ಯ ಕೃತ್ಯವನ್ನು ಸ್ಥಳದಲ್ಲಿದ್ದ ಗ್ರಾಮಸ್ಥರು ಕಣ್ಣಾರೆ ಕಂಡು ಬೆಚ್ಚಿಬಿದ್ದಿದ್ದಾರೆ. ಮೃತದೇಹದೊಂದಿಗೆ ಈ ರೀತಿಯ ಕ್ರೌರ್ಯ ಮೆರೆಯುವುದನ್ನು ಸಹಿಸದ ಸ್ಥಳೀಯರೊಬ್ಬರು ತಮ್ಮ ಮೊಬೈಲ್ ಫೋನ್‌ನಲ್ಲಿ ಈ ಸಂಪೂರ್ಣ ಕೃತ್ಯವನ್ನು ವಿಡಿಯೋ ಸೆರೆಹಿಡಿದಿದ್ದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಮಾಡಿದ್ದಾರೆ. ಆ ಬಳಿಕ ಈ ಆಘಾತಕಾರಿ ದೃಶ್ಯಗಳು ಜಾಲತಾಣಗಳಲ್ಲಿ ವೈರಲ್ ಆಗಿವೆ.
ಮೃತ ತಂದೆಯ ಸಾವಿನ ನೋವು ಮರೆಯುವ ಮುನ್ನವೇ ಆಸ್ತಿಗಾಗಿ ಸ್ವಂತ ಮಗನೇ ಇಂತಹ ನೀಚ ಕೃತ್ಯ ಮಾಡಿರುವುದನ್ನು ಕಂಡು ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹೆತ್ತವರ ಋಣ ತೀರಿಸಬೇಕಾದ ಜಾಗದಲ್ಲಿ ಆಸ್ತಿಗಾಗಿ ಶವದ ಜೊತೆ ಮಾನವೀಯತೆ ಬಿಟ್ಟು ವರ್ತನೆ ಮಾಡಿರುವುದು ಸಾರ್ವಜನಿಕ ವಲಯದಿಂದ ತೀವ್ರ ಖಂಡನೆ ವ್ಯಕ್ತವಾಗುತ್ತಿದೆ.
ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತ ಸ್ಥಳೀಯ ಪೊಲೀಸರು ಪ್ರಕರಣದ ಗಂಭೀರತೆಯನ್ನು ಪರಿಗಣಿಸಿ ತನಿಖೆಯನ್ನು ಆರಂಭಿಸಿದ್ದಾರೆ. ಮೃತನ ಹೆಬ್ಬೆರಳನ್ನು ಯಾವ ಉದ್ದೇಶಕ್ಕಾಗಿ ಪಡೆdಕೊಳ್ಳಲಾಗಿದೆ ಮತ್ತು ಅದನ್ನು ಆಸ್ತಿ ದಾಖಲೆಗಳಿಗೆ ದುರುಪಯೋಗಪಡಿಸಿಕೊಳ್ಳಲಾಗುತ್ತಿದೆಯೇ ಎಂಬ ಸಂಪೂರ್ಣ ಕೋನದಲ್ಲಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net