ಕೇವಲ ಯುಕೆಜಿಗೆ ಇಷ್ಟೊಂದು ಶುಲ್ಕನಾ? ಜಾಲತಾಣದಲ್ಲಿ ಭಾರೀ ಚರ್ಚೆ ಹುಟ್ಟುಹಾಕಿದ ಶಾಲಾ ಶುಲ್ಕದ ರಶೀದಿ! UKG School Fee

ಕೇವಲ ಯುಕೆಜಿಗೆ ಇಷ್ಟೊಂದು ಶುಲ್ಕನಾ? ಜಾಲತಾಣದಲ್ಲಿ ಭಾರೀ ಚರ್ಚೆ ಹುಟ್ಟುಹಾಕಿದ ಶಾಲಾ ಶುಲ್ಕದ ರಶೀದಿ! UKG School Fee
ಕೇವಲ ಯುಕೆಜಿಗೆ ಇಷ್ಟೊಂದು ಶುಲ್ಕನಾ? ಜಾಲತಾಣದಲ್ಲಿ ಭಾರೀ ಚರ್ಚೆ ಹುಟ್ಟುಹಾಕಿದ ಶಾಲಾ ಶುಲ್ಕದ ರಶೀದಿ! UKG School Fee
Published on

ಪ್ರಮುಖ ಮುಖ್ಯಾಂಶಗಳು

  • ಒಂದು ಕಾಲದಲ್ಲಿ ಶಿಕ್ಷಣವನ್ನು ಪವಿತ್ರ ಕೆಲಸ ಹಾಗೂ ಸೇವೆ ಎಂದು ಪರಿಗಣಿಸಲಾಗಿತ್ತು
  • ಇಂದು ಶಿಕ್ಷಣವೂ ಒಂದು ವ್ಯವಹಾರವಾಗಿ ಬದಲಾಗಿದೆ
  • ಹೊಸ ಹೊಸ ನಿಯಮಗಳನ್ನು ಪರಿಚಯಿಸುವ ಮೂಲಕ ಪೋಷಕರಿಂದ ಲಕ್ಷಗಟ್ಟಲೆ ಹಣ ಪೀಕುತ್ತಿದ್ದಾರೆ
UKG School Fee : ಒಂದು ಕಾಲದಲ್ಲಿ ಶಿಕ್ಷಣವನ್ನು ಪವಿತ್ರ ಕೆಲಸ ಹಾಗೂ ಸೇವೆ ಎಂದು ಪರಿಗಣಿಸಲಾಗಿತ್ತು. ಆದರೆ, ಇಂದು ಶಿಕ್ಷಣವೂ ಒಂದು ವ್ಯವಹಾರವಾಗಿ ಬದಲಾಗಿದೆ. ಹೊಸ ಹೊಸ ನಿಯಮಗಳನ್ನು ಪರಿಚಯ ಮಾಡುವ ಮೂಲಕ ಪೋಷಕರಿಂದ ಲಕ್ಷಗಟ್ಟಲೆ ಹಣ ಪೀಕುತ್ತಿದ್ದಾರೆ. ನರ್ಸರಿ, ಎಲ್​ಕೆಜಿ ಹಾಗೂ ಯುಕೆಜಿ ಮುಂತಾದ ಆರಂಭಿಕ ತರಗತಿಗಳಿಗೆ 50 ಸಾವಿರ ರೂ.ಗಳಿಂದ 1 ಲಕ್ಷ ರೂ.ಗಳವರೆಗೆ ಶುಲ್ಕ ವಿಧಿಸುತ್ತಿದ್ದಾರೆ. ಕೆಲವು ಪ್ರತಿಷ್ಠಿತ ಶಾಲೆಗಳಲ್ಲಿ ಸೀಟು ಪಡೆಯಲು ಲಕ್ಷಗಟ್ಟಲೆ ಖರ್ಚು ಮಾಡಬೇಕಾಗುತ್ತದೆ.
ಇದೇ ಸಂದರ್ಭದಲ್ಲಿ, ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಲಾದ ಫೋಟೋ ಒಂದು ವೈರಲ್ ಆಗುತ್ತಿದೆ. ಫೋಟೋದಲ್ಲಿ, ಯುಕೆಜಿ ವಿದ್ಯಾರ್ಥಿಗೆ ಶಾಲಾ ಆಡಳಿತ ಮಂಡಳಿಯು ವಾರ್ಷಿಕ ಶುಲ್ಕವಾಗಿ 2.25 ಲಕ್ಷ ರೂ.ಗಳನ್ನು ವಿಧಿಸಿದೆ. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ತೀವ್ರ ಚರ್ಚೆಯಾಗುತ್ತಿದೆ. ಖಾಸಗಿ ಶಾಲೆಗಳು ಶುಲ್ಕವನ್ನು ನಿರ್ಧರಿಸುವ ವಿಧಾನದ ಬಗ್ಗೆಯೂ ಇದು ಮತ್ತೊಮ್ಮೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಯುಕೆಜಿಯಲ್ಲಿ ಮಕ್ಕಳಿಗೆ ಓದು, ಗಣಿತ ಮತ್ತು ಸಾಮಾಜಿಕ ಕೌಶಲ್ಯಗಳನ್ನು ಮಾತ್ರ ಕಲಿಸಲಾಗುತ್ತದೆ. ಇಷ್ಟಕ್ಕೆ 2 ಲಕ್ಷಕ್ಕೂ ಹೆಚ್ಚು ಶುಲ್ಕ ತೆಗೆದುಕೊಳ್ಳುತ್ತಾರಾ ಎಂದು ನೆಟ್ಟಿಗರು ತಮ್ಮ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇದೊಂದು ರೀತಿಯಲ್ಲಿ  ಕಾನೂನುಬದ್ಧ ಶೋಷಣೆ ಎಂದು ಟೀಕಿಸುತ್ತಿದ್ದಾರೆ.
ಮೆಟ್ರೋ ನಗರಗಳಲ್ಲಿ ಈ ರೀತಿಯ ಮುಕ್ತ ಶೋಷಣೆ ಮುಂದುವರೆದಿದೆ. ಕೇವಲ ಅಗ್ರ 1 ಪ್ರತಿಶತ ಜನರು ಮಾತ್ರ ಈ ಶುಲ್ಕವನ್ನು ಭರಿಸಬಲ್ಲರು. ಉಳಿದ 99 ಪ್ರತಿಶತ ಜನರು ಗುಣಮಟ್ಟದ ಶಿಕ್ಷಣ ಅಥವಾ ದೈನಂದಿನ ವೆಚ್ಚಗಳ ನಡುವೆ ರಾಜಿ ಮಾಡಿಕೊಳ್ಳಬೇಕಾಗುತ್ತದೆ. ಹಾಗಿದ್ದರೂ, ಈ ಶೋಷಣೆ ನಿಲ್ಲುವುದಿಲ್ಲ. ಏಕೆಂದರೆ, ಈ ಶಾಲೆಗಳನ್ನು ರಾಜಕಾರಣಿಗಳು ನಡೆಸುತ್ತಿದ್ದಾರೆ ಎಂದು ತಮ್ಮ ಅಭಿಪ್ರಾಯವನ್ನು ನೆಟ್ಟಿಗರೊಬ್ಬರು ವ್ಯಕ್ತಪಡಿಸಿದ್ದಾರೆ.
ಯುಕೆಜಿಗೆ ವರ್ಷಕ್ಕೆ 2.25 ಲಕ್ಷ ರೂ. ಆಶ್ಚರ್ಯಕರವೆನಿಸಬಹುದು. ಆದರೆ, ದೊಡ್ಡ ನಗರಗಳಲ್ಲಿರುವ ಇತರ ಖಾಸಗಿ ಶಾಲೆಗಳಿಗೆ ಹೋಲಿಸಿದರೆ ಇದು ಕಡಿಮೆ. ಪ್ರೀಮಿಯಂ ಮೆಟ್ರೋ ಶಾಲೆಗಳು ಸಾಮಾನ್ಯವಾಗಿ 3 ರಿಂದ 5 ಲಕ್ಷ ಅಥವಾ 10 ಲಕ್ಷಕ್ಕೂ ಹೆಚ್ಚು ಶುಲ್ಕ ವಿಧಿಸುತ್ತವೆ ಎಂದು ಮತ್ತೊಬ್ಬ ಬಳಕೆದಾರರು ಪ್ರತಿಕ್ರಿಯಿಸಿದ್ದಾರೆ.
ಅಂದಹಾಗೆ, ವೈರಲ್​ ಆಗಿರುವ ಶಾಲಾ ಶುಲ್ಕ ರಶೀದಿಯಲ್ಲಿ ಶಾಲಾ ಬೋಧನಾ ಶುಲ್ಕ, ಗ್ರಂಥಾಲಯ ಶುಲ್ಕ, ಜಿಮ್ ಶುಲ್ಕ ಇವೆಲ್ಲವೂ ಸೇರಿ ವರ್ಷಕ್ಕೆ 2,24,718 ರೂ.ಗಳ ಮೊತ್ತ ಬರುತ್ತದೆ. ಇವುಗಳ ಜೊತೆಗೆ, ಶಾಲಾ ಆಡಳಿತ ಮಂಡಳಿಯು 15 ಸಾವಿರ ರೂ.ಗಳ ಹೆಚ್ಚುವರಿ ಪ್ರವೇಶ ಶುಲ್ಕ ಮತ್ತು 33 ಸಾವಿರ ರೂ.ಗಳ ಎಚ್ಚರಿಕೆ ಹಣ (ರೀಫಂಡೇಬಲ್​) ಅಡಿಯಲ್ಲಿ ಸಂಗ್ರಹಿಸುತ್ತಿದೆ. ಈ ಶಾಲಾ ಶುಲ್ಕದ ಬಗ್ಗೆ ನಿಮ್ಮ ಅಭಿಪ್ರಾಯ ಏನೆಂಬುದನ್ನು ಕಾಮೆಂಟ್​ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net