_1787313884620.webp?w=480&auto=format%2Ccompress&fit=max)
_1787313884620.webp?w=480&auto=format%2Ccompress&fit=max)
ತಮಿಳುನಾಡು ವಿಧಾನಸಭೆಯಲ್ಲಿ ಪ್ರತಿಪಕ್ಷ ನಾಯಕ ಉದಯನಿಧಿ ಸ್ಟಾಲಿನ್ ಹಾಗೂ ಟಿವಿಕೆ ನಾಯಕ ಸಿಟಿಆರ್ ನಿರ್ಮಲ್ ಕುಮಾರ್ ನಡುವೆ ತೀವ್ರ ವಾಕ್ಸಮರ ನಡೆಯಿತು. ಉದಯನಿಧಿ ಸ್ಟಾಲಿನ್ ಅವರು ನಿರ್ಮಲ್ ಕುಮಾರ್ರನ್ನು ಸಂಘಿ ಸಚಿವ ಎಂದು ಕರೆದಾಗ, ಅದಕ್ಕೆ ಪ್ರತಿಯಾಗಿ ನಿರ್ಮಲ್ ಕುಮಾರ್, ಉದಯನಿಧಿಯನ್ನು ಬಾತ್ರೂಮ್ ಲೀಡರ್ (Bathroom Leader Jibe) ಎಂದು ವ್ಯಂಗ್ಯವಾಡಿದರು.
ಏನಿದು ಬಾತ್ರೂಮ್ ಲೀಡರ್ ವಿವಾದ..?
ತಮಿಳುನಾಡು ಶಾಸಕರಿಗೆ ಹೊಸ ವಾಹನ ಹಾಗೂ ಇತರ ಸೌಲಭ್ಯಗಳನ್ನು ಘೋಷಿಸಿದ್ದಕ್ಕೆ ಧನ್ಯವಾದ ಅರ್ಪಿಸಲು, ಟಿವಿಕೆ ಶಾಸಕಿ ಕೆ. ಸಿಂಧು ಅವರು ವಿಧಾನಸಭೆಯಲ್ಲಿ ಎಂಜಿಆರ್ ಅವರ ಕೊಡುತ್ ತದೆಲ್ಲಾಮ್ ಕೊಡುತ್ ತಾನ್ ಎಂಬ ಜನಪ್ರಿಯ ಗೀತೆಯನ್ನು ಹಾಡಿದ್ದರು. ಇದನ್ನು ಉಲ್ಲೇಖಿಸಿ ಟೀಕಿಸಿದ ಪ್ರತಿಪಕ್ಷ ನಾಯಕ ಉದಯನಿಧಿ ಸ್ಟಾಲಿನ್, ಶಾಸಕರು ವಿಧಾನಸಭೆಯ ಕಲಾಪಗಳನ್ನು ಸೂಪರ್ ಸಿಂಗರ್ ಇವೆಂಟ್ನಂತೆ ಮಾಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.
ಪಂಚ್ ಡೈಲಾಗ್ ಬಿಟ್ಟು ಫೈಲ್ ತೆಗೀರಿ!...