ಜೀವದ ಹಂಗು ತೊರೆದು ದುರಂತ ತಪ್ಪಿಸಿದ ಸ್ಮಿತ್ ಮಚ್ಚಾರ್ ಹಾಗೂ ಸಿಬ್ಬಂದಿಗೆ ಆರ್ಡರ್ ಆಫ್ ಜಾಯೆದ್ ಪ್ರಶಸ್ತಿ ಪ್ರದಾನ!| Smit Machchhar

ಸ್ಮಿತ್ ಮಚ್ಚಾರ್​ಗೆ ಆರ್ಡರ್ ಆಫ್ ಜಾಯೆದ್ ಪ್ರಶಸ್ತಿ ಪ್ರದಾನ!
ಸ್ಮಿತ್ ಮಚ್ಚಾರ್​ಗೆ ಆರ್ಡರ್ ಆಫ್ ಜಾಯೆದ್ ಪ್ರಶಸ್ತಿ ಪ್ರದಾನ!
Published on: 

Captain Smit Machchhar: ಸೆಪ್ಟೆಂಬರ್ 30ರಂದು ಫ್ಲೈದುಬೈ ವಿಮಾನದಲ್ಲಿ ನಡೆದ ಆಕ್ರಮಣದ ವೇಳೆ ಜೀವದ ಹಂಗು ತೊರೆದು ಪ್ರಯಾಣಿಕರ ಜೀವ ಉಳಿಸಿದ್ದ ಭಾರತೀಯ ಪೈಲಟ್ ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ಹಾಗೂ ಫ್ಲೈದುಬೈ ವಿಮಾನ ಸಿಬ್ಬಂದಿಗೆ ಯುನೈಟೆಡ್ ಅಬ್ ಎಮಿರೇಟ್ಸ್ ಸರ್ಕಾರವು ಅತ್ಯುನ್ನತ ಆರ್ಡರ್ ಆಫ್ ಜಾಯೆದ್ II (Order of Zayed II) ಪ್ರಶಸ್ತಿ ನೀಡಿ ಗೌರವಿಸಿದೆ.

ದೊಡ್ಡ ದುರಂತವನ್ನು ತಪ್ಪಿಸಿ ಪ್ರಯಾಣಿಕರ ರಕ್ಷಣೆಗಾಗಿ ಮತ್ತು ವಿಮಾನದ ಭದ್ರತೆಗಾಗಿ ಸಿಬ್ಬಂದಿ ತೋರಿದ ಅಪ್ರತಿಮ ಧೈರ್ಯ ಹಾಗೂ ವೃತ್ತಿಪರತೆಯನ್ನು ಯುಎಇ ನಾಯಕತ್ವ ಮುಕ್ತಕಂಠದಿಂದ ಕೊಂಡಾಡಿದೆ. ದುಬೈನ ಕಿರಿಯ ರಾಜಕುಮಾರ ಹಾಗೂ ಉಪ ಪ್ರಧಾನಿ ಶೇಖ್ ಹಮ್ದಾನ್ ಬಿನ್ ಮೊಹಮ್ಮದ್ ಬಿನ್ ರಶೀದ್ ಅಲ್ ಮಕ್ತೌಮ್ ಅವರು ಮಂಗಳವಾರ ಈ ಗೌರವಗಳನ್ನು ಅಧಿಕೃತವಾಗಿ ವಿತರಿಸಿದರು.

ಘಟನೆ ನಡೆದ ತಕ್ಷಣವೇ ಎಚ್ಚೆತ್ತುಕೊಂಡಿದ್ದ ಯುಎಇ ನಾಯಕರು, ಅಕ್ಟೋಬರ್ 3ರಂದೇ ಚಿಕಿತ್ಸೆ ಪಡೆಯುತ್ತಿದ್ದ ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ಅವರನ್ನು ಆಸ್ಪತ್ರೆಗೆ ಭೇಟಿ ಮಾಡಿ ಧೈರ್ಯ ತುಂಬಿದ್ದರು. ‘ಕ್ಯಾಪ್ಟನ್ ಸ್ಮಿತ್ ಮಚ್ಚರ್ ಅತ್ಯಂತ ಹೆಚ್ಚಿನ ಜವಾಬ್ದಾರಿ, ಕಾಳಜಿ ಮತ್ತು ಧೈರ್ಯವನ್ನು ಪ್ರದರ್ಶಿಸಿದ್ದಾರೆ. ರಾಷ್ಟ್ರದ ನಾಯಕತ್ವದಿಂದ ಅವರಿಗೆ ನಮ್ಮ ಸಂಪೂರ್ಣ ಮೆಚ್ಚುಗೆಯಿದೆ ಎಂದು ಶೇಖ್ ಹ ಹಮ್ದಾನ್ ಸಾಮಾಜಿಕ ಜಾಲತಾಣದಲ್ಲಿ ಬಣ್ಣಿಸಿದ್ದರು. ಯುಎಇಯ ಸಾಮಾನ್ಯ ನಾಗರಿಕ ವಿಮಾನಯಾನ ಪ್ರಾಧಿಕಾರ (GCAA) ಕೂಡ ಪೈಲಟ್, ಸಿಬ್ಬಂದಿ ಮತ್ತು ಪ್ರಯಾಣಿಕರ ಸಮಯೋಚಿತ ಕಾರ್ಯಾಚರಣೆಯನ್ನು ತೀವ್ರವಾಗಿ ಶ್ಲಾಘಿಸಿತ್ತು.

Also Read
ನೀವು ಭಾರತ, ಇಸ್ರೇಲ್ ಹಾಗೂ ಜಗತ್ತಿನ ನೈಜ ಹೀರೋ!...ಮಚ್ಚಾರ್​​ ಸ್ವಾಗತಕ್ಕೆ ಜೆರುಸಲೆಮ್‌ ಎದುರು ನೋಡುತ್ತಿದೆ ಎಂದ ಇಸ್ರೇಲ್ ಅಧ್ಯಕ್ಷ | Smit Machchhar
ಸ್ಮಿತ್ ಮಚ್ಚಾರ್​ಗೆ ಆರ್ಡರ್ ಆಫ್ ಜಾಯೆದ್ ಪ್ರಶಸ್ತಿ ಪ್ರದಾನ!

ಈ ಅಪರೂಪದ ಸಾಹಸಕ್ಕೆ ಕೇವಲ ಯುಎಇ ಮಾತ್ರವಲ್ಲದೆ ಜಾಗತಿಕ ಮಟ್ಟದಲ್ಲೂ ಭಾರೀ ಪ್ರಶಂಸೆ ವ್ಯಕ್ತವಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ಅವರನ್ನು ನಾಯಕ (Hero) ಎಂದು ಕರೆದು ಗೌರವಿಸಿದ್ದಾರೆ. ಹಾಗೆಯೇ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಹಾಗೂ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೂಡ, ತೀವ್ರ ಗಾಯಗೊಂಡಿದ್ದರೂ ಧೈರ್ಯದಿಂದ ಕಾಕ್‌ಪಿಟ್ ಬಾಗಿಲು ತೆರೆದು ಪ್ರಯಾಣಿಕರ ಪ್ರಾಣ ಉಳಿಸಿದ ಭಾರತೀಯ ಪೈಲಟ್‌ನ ಸಾಹಸವನ್ನು ಮುಕ್ತಕಂಠದಿಂದ ಕೊಂಡಾಡಿದ್ದಾರೆ. ವಿಶೇಷವಾಗಿ ಇಸ್ರೇಲ್ ಸರ್ಕಾರವು ಕ್ಯಾಪ್ಟನ್ ಮಚ್ಚಾರ್ ಸಂಪೂರ್ಣವಾಗಿ ಗುಣಮುಖರಾದ ಬಳಿಕ ನಾಗರಿಕ ಧೈರ್ಯಶಾಲಿ ಪ್ರಶಸ್ತಿ ನೀಡಿ ಗೌರವಿಸುವುದಾಗಿ ಘೋಷಿಸಿದೆ.

ಒಟ್ಟಾರೆಯಾಗಿ, ಕ್ಯಾಪ್ಟನ್ ಸ್ಮಿತ್ ಮಚ್ಚರ್ ಮತ್ತು ಫ್ಲೈದುಬೈ ಸಿಬ್ಬಂದಿಯ ಈ ಸಾಹಸಮಯ ಕಾರ್ಯವು ಜಾಗತಿಕ ವಲಯದಲ್ಲಿ ಭಾರತದ ಕೀರ್ತಿಯನ್ನು ಹೆಚ್ಚಿಸಿದೆ. ಮಾನವೀಯತೆ ಮತ್ತು ವೃತ್ತಿಪರತೆಗೆ ಅತ್ಯುತ್ತಮ ಉದಾಹರಣೆಯಾಗಿರುವ ಈ ಘಟನೆಯು ಎಂದೆಂದಿಗೂ ಸ್ಮರಣೀಯವಾಗಿ ಉಳಿಯಲಿದೆ.

Also Read
ಫ್ಲೈದುಬೈ ವೀರ ಪೈಲಟ್ ಸ್ಮಿತ್ ಮಚ್ಚಾರ್​​‌ರನ್ನು ಭೇಟಿಯಾದ ದುಬೈ ಕ್ರೌನ್ ಪ್ರಿನ್ಸ್: ನೀವು ನಮ್ಮ ರಾಷ್ಟ್ರದ ಹೆಮ್ಮೆ ಬಣ್ಣನೆ! | Smit Machchhar
ಸ್ಮಿತ್ ಮಚ್ಚಾರ್​ಗೆ ಆರ್ಡರ್ ಆಫ್ ಜಾಯೆದ್ ಪ್ರಶಸ್ತಿ ಪ್ರದಾನ!

ಘಟನೆಯ ಹಿನ್ನಲೆ!

ಸೆಪ್ಟೆಂಬರ್ 30 ರಂದು ದುಬೈನಿಂದ ಟೆಲ್ ಅವೀವ್‌ಗೆ ಹೊರಟಿದ್ದ ಫ್ಲೈದುಬೈ ವಿಮಾನದಲ್ಲಿ ಈ ಭದ್ರತಾ ಬಿಕ್ಕಟ್ಟು ಸಂಭವಿಸಿತ್ತು. ಒಮಾನ್ ಮೂಲದ ಸಹ-ಪೈಲಟ್ ವಿಮಾನವನ್ನು ಕೆಳಗೆ ತರುವ ಉದ್ದೇಶದಿಂದ ಕಮಾಂಡರ್ ಮೇಲೆ ಕತ್ತಿಯಿಂದ ಹಲ್ಲೆ ನಡೆಸಿದ್ದರಿಂದ ವಿಮಾನವು ಕೇವಲ ಎರಡು ನಿಮಿಷಗಳಲ್ಲಿ ಸರಿಸುಮಾರು 16,000 ಅಡಿಗಳಷ್ಟು ಕೆಳಗೆ ಧುಮುಕಿತ್ತು. ತೀವ್ರ ಗಾಯಗಳಾಗಿದ್ದರೂ ಮಚ್ಚಾರ್ ದಾಳಿಕೋರನನ್ನು ಪ್ರತಿರೋಧಿಸಿದರು. ತಕ್ಷಣ ವಿಮಾನ ಸಿಬ್ಬಂದಿ ಮತ್ತು ಪ್ರಯಾಣಿಕರು ಕಾಕ್‌ಪಿಟ್‌ಗೆ ನುಗ್ಗಿ ದಾಳಿಕೋರನನ್ನು ನಿಯಂತ್ರಿಸಿದರು. ಬಳಿಕ ಕರ್ತವ್ಯದಲ್ಲಿಲ್ಲದ ಇಬ್ಬರು ವಾಯುಯಾನ ತಜ್ಞರ ಸಹಾಯದಿಂದ ವಿಮಾನವನ್ನು ಸೌದಿ ಅರೇಬಿಯಾದ ತಬುಕ್‌ನಲ್ಲಿ ಸುರಕ್ಷಿತವಾಗಿ ತುರ್ತು ಭೂಸ್ಪರ್ಶ ಮಾಡಿಸಲಾಯಿತು. ಇದರಿಂದ ವಿಮಾನದಲ್ಲಿದ್ದ ಎಲ್ಲಾ 180 ಮಂದಿ ಯಾವುದೇ ಪ್ರಾಣಾಪಾಯವಿಲ್ಲದೆ ಪಾರಾದರು.

ಈ ಘಟನೆಯ ಕುರಿತು ಅಂತರರಾಷ್ಟ್ರೀಯ ತನಿಖೆ ಮುಂದುವರಿದಿದ್ದು, ದಾಳಿಕೋರನನ್ನು ಯುಎಇಗೆ ಕರೆತರಲಾಗಿದೆ. ಈ ದಾಳಿಯ ಹಿಂದೆ ಹೊರಗಿನವರ ಕೈವಾಡವಿದೆಯೇ ಎಂಬುದನ್ನು ಪತ್ತೆಹಚ್ಚಲು ಇಸ್ರೇಲಿ ತನಿಖಾ ಸಿಬ್ಬಂದಿಯನ್ನು ಸಹ ಯುಎಇಗೆ ಕಳುಹಿಸಲಾಗಿದೆ ಎಂದು ವರದಿಯಾಗಿದೆ(ಏಜೆನ್ಸೀಸ್).

Related Stories

ಮೊದಲ ಬಾರಿ ರೋಚಕ ಸಂಗತಿ ಬಿಚ್ಚಿಟ್ಟ ಕ್ಯಾಪ್ಟನ್
The moments of the terrifying attack inside the cockpit of the Flydubai flight, and Captain Smith Machar’s escape from the brink of death.
ಪೈಲಟ್ ಸ್ಮಿತ್ ಮಚ್ಚಾರ್ ಸಾಹಸದ ಬಗ್ಗೆ ಮಾಜಿ ಸಹೋದ್ಯೋಗಿ ಶಾಕಿಂಗ್​ ಹೇಳಿಕೆ
ಸ್ಮಿತ್ ಮಚ್ಚಾರ್ ಮೇಲಿನ ಹಲ್ಲೆ ಬಗ್ಗೆ ಪತ್ನಿ ಸೋನಲ್ ಹೇಳಿದ್ದಿಷ್ಟು
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net