ಫ್ಲೈದುಬೈ ವೀರ ಪೈಲಟ್ ಸ್ಮಿತ್ ಮಚ್ಚಾರ್​​‌ರನ್ನು ಭೇಟಿಯಾದ ದುಬೈ ಕ್ರೌನ್ ಪ್ರಿನ್ಸ್: ನೀವು ನಮ್ಮ ರಾಷ್ಟ್ರದ ಹೆಮ್ಮೆ ಬಣ್ಣನೆ! | Smit Machchhar

Smit Machchhar: ದುಬೈ ಕ್ರೌನ್ ಪ್ರಿನ್ಸ್ ಮತ್ತು ಯುಎಇಯ ಉಪ ಪ್ರಧಾನ ಮಂತ್ರಿ ಹಮ್ದಾನ್ ಬಿನ್ ಮೊಹಮ್ಮದ್ ಅಲ್ ಮಕ್ತೌಮ್ ಅವರು ಶನಿವಾರ ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿರುವ ಭಾರತೀಯ ವೀರ ಪೈಲಟ್ ಸ್ಮಿತ್ ಮಚ್ಚಾರ್​ ಅವರನ್ನು ಭೇಟಿಯಾಗಿದ್ದಾರೆ.
ಫ್ಲೈದುಬೈ ವೀರ ಪೈಲಟ್ ಸ್ಮಿತ್ ಮಚ್ಚಾರ್​​‌ರನ್ನು ಭೇಟಿಯಾದ ದುಬೈ ಕ್ರೌನ್ ಪ್ರಿನ್ಸ್
ಫ್ಲೈದುಬೈ ವೀರ ಪೈಲಟ್ ಸ್ಮಿತ್ ಮಚ್ಚಾರ್​​‌ರನ್ನು ಭೇಟಿಯಾದ ದುಬೈ ಕ್ರೌನ್ ಪ್ರಿನ್ಸ್
Published on: 

Smit Machchhar: ದುಬೈ ಕ್ರೌನ್ ಪ್ರಿನ್ಸ್ ಮತ್ತು ಯುಎಇಯ ಉಪ ಪ್ರಧಾನ ಮಂತ್ರಿ ಹಮ್ದಾನ್ ಬಿನ್ ಮೊಹಮ್ಮದ್ ಅಲ್ ಮಕ್ತೌಮ್ ಅವರು ಶನಿವಾರ ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿರುವ ಭಾರತೀಯ ವೀರ ಪೈಲಟ್ ಸ್ಮಿತ್ ಮಚ್ಚಾರ್​ ಅವರನ್ನು ಭೇಟಿಯಾಗಿದ್ದಾರೆ.

ಈ ಭೇಟಿಯ ಬಳಿಕ ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್​ ಹಂಚಿಕೊಂಡಿರುವ ಹಮ್ದಾನ್ ಬಿನ್ ಮೊಹಮ್ಮದ್, ಈ ಧೈರ್ಯ, ಜವಾಬ್ದಾರಿ ಮತ್ತು ಮಾನವ ಜೀವದ ಬಗ್ಗೆ ಅತ್ಯುನ್ನತ ಕಾಳಜಿಯನ್ನು ತೋರಿದ ಫ್ಲೈದುಬೈ ಪೈಲಟ್ ಕ್ಯಾಪ್ಟನ್ ಸ್ಮಿತ್ ಮಚ್ಛರ್ ಅವರ ಭೇಟಿಯ ಸಂದರ್ಭದಲ್ಲಿ, ನಮ್ಮಿಂದ ಮತ್ತು ರಾಷ್ಟ್ರದ ನಾಯಕತ್ವದಿಂದ ಅವರಿಗೆ ಸಂಪೂರ್ಣ ಮೆಚ್ಚುಗೆ ಹಾಗೂ ಪ್ರಶಂಸೆ ಇದೆ. ಅವರು ನಮ್ಮ ತಂಡದ ಭಾಗವಾಗಿದ್ದಾರೆ, ನಮ್ಮ ರಾಷ್ಟ್ರದ ಕಥೆಯ ಭಾಗವಾಗಿದ್ದಾರೆ ಮತ್ತು ಯುಎಇ ನಿಲ್ಲುವ ಮೌಲ್ಯಗಳ ಭಾಗವಾಗಿದ್ದಾರೆ ಎಂಬ ಹೆಮ್ಮೆ ನಮಗಿದೆ. ಕರುಣೆಯ ರಾಷ್ಟ್ರ. ಶಾಂತಿಯ ರಾಷ್ಟ್ರ ಮತ್ತು ಜೀವನದ ರಾಷ್ಟ್ರ ಎಂದು ಅವರು ಬರೆದುಕೊಂಡಿದ್ದಾರೆ.

ದುಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ 180 ಜನರೊಂದಿಗೆ ಟೆಲ್ ಅವೀವ್ ಕಡೆಗೆ ಹಾರುತ್ತಿದ್ದ ಫ್ಲೈದುಬೈ ವಿಮಾನ ಎಫ್‌ಝೆಡ್ 1073 (FZ1073) ರಲ್ಲಿ ಒಮಾನ್ ಮೂಲದ ಸಹ-ಪೈಲಟ್ ಕ್ಯಾಪ್ಟನ್ ಮಚ್ಛರ್ ಮೇಲೆ ಹಲ್ಲೆ ನಡೆಸಿದ್ದನು. ವಿಮಾನವು ಸೌದಿ ಅರೇಬಿಯಾ ಮೇಲೆ ಅಂದಾಜು 34,000 ಅಡಿ ಎತ್ತರದಲ್ಲಿ ಹಾರುತ್ತಿದ್ದಾಗ ಈ ಘಟನೆ ಸಂಭವಿಸಿದೆ. ತೀವ್ರ ಗಾಯಗೊಂಡಿದ್ದರೂ ಸಹ, ಕ್ಯಾಪ್ಟನ್ ಮಚ್ಛರ್ ದಾಳಿಕೋರನ ಪ್ರಯತ್ನಗಳನ್ನು ವಿಫಲಗೊಳಿಸಿ ಕಾಕ್‌ಪಿಟ್ ಬಾಗಿಲುಗಳನ್ನು ತೆರೆಯುವಲ್ಲಿ ಯಶಸ್ವಿಯಾದರು. ಪ್ರಯಾಣಿಕರು ಮತ್ತು ಸಿಬ್ಬಂದಿ ಸದಸ್ಯರು ಕಾಕ್‌ಪಿಟ್‌ಗೆ ಪ್ರವೇಶಿಸಿ ದಾಳಿಕೋರನನ್ನು ನಿಯಂತ್ರಣಕ್ಕೆ ತೆಗೆದುಕೊಂಡರು, ಈ ಮಧ್ಯೆ ವಿಮಾನವನ್ನು ಸೌದಿ ಅರೇಬಿಯಾದ ತಬುಕ್ ನಗರಕ್ಕೆ ತಿರುಗಿಸಲಾಯಿತು.

ಇದನ್ನೂ ಓದಿ:ಭೀಕರ ಪರಿಸ್ಥಿತಿಯಲ್ಲಿ ಮಗನ ಒಳಗೆ ಕೆಲಸ ಮಾಡಿದ್ದ ಆ ರಹಸ್ಯ ಶಕ್ತಿ ಯಾವುದು...? ಸಾಹಸಿ ಪೈಲಟ್ ತಂದೆಯ ಹೆಮ್ಮೆಯ ನುಡಿಗಳು ಹೀಗಿವೆ! | Smit Machchhar Father

ಪ್ರಯಾಣಿಕರ ಜೀವ ಉಳಿಸಲು ತಮ್ಮ ಜೀವವನ್ನೇ ಪಣಕ್ಕಿಟ್ಟ ಮಚ್ಚಾರ್​ ಅವರ ಸಾಹಸಕ್ಕೆ ಪ್ರಧಾನಿ ನರೇಂದ್ರ ಮೋದಿ, ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಹಾಗೂ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಂದ ಪ್ರಶಂಸೆ ವ್ಯಕ್ತವಾಗಿದ್ದು, ಮಚ್ಚಾರ್​ ಅವರು ಅತ್ಯುತ್ತಮ ವೈದ್ಯಕೀಯ ಆರೈಕೆಯಲ್ಲಿದ್ದಾರೆ ಮತ್ತು ಯುಎಇಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಖಚಿತಪಡಿಸಿದೆ.

ಒಮಾನ್ ಮೂಲದ ದಾಳಿಕೋರನ ಗುರುತು ಪತ್ತೆ

ಕ್ಯಾಪ್ಟನ್ ಮೇಲೆ ಹಲ್ಲೆ ನಡೆಸಿದ ಶಂಕೆ ವ್ಯಕ್ತವಾಗಿರುವ ಸಹ-ಪೈಲಟ್ ಅನ್ನು ಒಮಾನ್ ಪ್ರಜೆ ಹಮಾಮ್ ಅಲ್-ಹಮ್ಮಮಿ ಎಂದು ಗುರುತಿಸಲಾಗಿದೆ. ಅಸೋಸಿಯೇಟೆಡ್ ಪ್ರೆಸ್ ವರದಿ ಮಾಡಿರುವಂತೆ, ಈ ಸಹ-ಪೈಲಟ್‌ನ ಉಗ್ರವಾದಿ ನಿಲುವುಗಳ ಬಗ್ಗೆ ಕಳಳವಳ ವ್ಯಕ್ತಪಡಿಸಿ ಒಮಾನ್ ದೇಶವು ಈ ಹಿಂದೆ ಆತನಿಗೆ ಹಾರಾಟ ನಡೆಸುವುದನ್ನು ನಿಷೇಧಿಸಿತ್ತು, ಆದರೆ ನಂತರ ಯುಎಇ ಮೂಲದ ವಿಮಾನಯಾನ ಸಂಸ್ಥೆಯು ಆತನನ್ನು ನೇಮಕ ಮಾಡಿಕೊಂಡಿತ್ತು.

Also Read
ಭೀಕರ ಪರಿಸ್ಥಿತಿಯಲ್ಲಿ ಮಗನ ಒಳಗೆ ಕೆಲಸ ಮಾಡಿದ್ದ ಆ ರಹಸ್ಯ ಶಕ್ತಿ ಯಾವುದು...? ಸಾಹಸಿ ಪೈಲಟ್ ತಂದೆಯ ಹೆಮ್ಮೆಯ ನುಡಿಗಳು ಹೀಗಿವೆ! | Smit Machchhar Father
ಫ್ಲೈದುಬೈ ವೀರ ಪೈಲಟ್ ಸ್ಮಿತ್ ಮಚ್ಚಾರ್​​‌ರನ್ನು ಭೇಟಿಯಾದ ದುಬೈ ಕ್ರೌನ್ ಪ್ರಿನ್ಸ್

ಅಶೋಕ ಚಕ್ರ ನೀಡುವಂತೆ ಪ್ರಧಾನಿ ಮೋದಿಗೆ ಪತ್ರ ಬರೆದ ಶಿವಸೇನೆ ಸಂಸದ

ಈ ಅಸಾಧಾರಣ ಸಾಹಸ ಮೆರೆದ ಮಚ್ಚಾರ್​ ಅವರಿಗೆ ಭಾರತದ ಅತ್ಯುನ್ನತ ಶೌರ್ಯ ಪ್ರಶಸ್ತಿಯಾದ ಅಶೋಕ ಚಕ್ರವನ್ನು ನೀಡಬೇಕು ಎಂದು ಶಿವಸೇನೆಯ ರಾಜ್ಯಸಭಾ ಸದಸ್ಯ ಮಿಲಿಂದ್ ದಿಯೋರಾ ಮಹಾರಾಷ್ಟ್ದ ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರ ಪರವಾಗಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ. ಪ್ರಧಾನಿ ಮೋದಿ ಅವರಿಗೆ ಬರೆದ ಪತ್ರದಲ್ಲಿ ದಿಯೋರಾ ಅವರು, ಸಹ-ಪೈಲಟ್ ವಿಮಾನದ ನಿಯಂತ್ರಣವನ್ನು ತೆಗೆದುಕೊಳ್ಳಲು ಪ್ರಯತ್ನಿಸಿದಾಗ ಕಾಕ್‌ಪಿಟ್‌ನಲ್ಲಿ ಗಂಭೀರವಾಗಿ ಗಾಯಗೊಂಡಿದ್ದರೂ ಸಹ, 174 ಜೀವಗಳನ್ನು ಉಳಿಸಲು ಸಹಾಯ ಮಾಡಿದ ಅಸಾಧಾರಣ ಧೈರ್ಯವನ್ನು ಮಚ್ಚಾರ್ ಪ್ರದರ್ಶಿಸಿದರು ಎಂದು ಹೇಳಿದರು. ಮಚ್ಚಾರ್ ಮಾಡಿದ್ದು ಅವರ ವೃತ್ತಿಯ ಜವಾಬ್ದಾರಿಗಳನ್ನು ಮೀರಿದ್ದು ಎಂದು ಶಿವಸೇನೆಯ ಸಂಸದರು ಅಭಿಪ್ರಾಯಪಟ್ಟಿದ್ದಾರೆ.

ಮಚ್ಚಾರ್​ಗೆ ಗುಜರಾತ್ ರಾಜ್ಯ ಪ್ರಶಸ್ತಿ!...

ಇದಕ್ಕೂ ಮುನ್ನ ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಕೂಡ ಮಚ್ಚಾರ್‌ಗೆ ವಿಶಿಷ್ಟ ಗುಜರಾತ್ ಗರಿಮಾ ಪ್ರಶಸ್ತಿ ಘೋಷಿಸಿದ್ದಾರೆ. ಮಚ್ಚಾರ್ ಅವರನ್ನು ಗುಜರಾತ್‌ನ ಶೂರ ಪುತ್ರ ಎಂದು ಕರೆಯುತ್ತಾ ಇಡೀ ಜಗತ್ತು ಅವರ ಧೈರ್ಯಕ್ಕೆ ಸಲಾಂ ಹೇಳುತ್ತಿದೆ ಎಂದು ಅವರು ಹೇಳಿದರು. ಮಚ್ಚಾರ್ ಗುಜರಾತ್‌ನವರು, ಆದರೆ ಅವರ ಕುಟುಂಬ ನಂತರ ಮುಂಬೈಗೆ ಸ್ಥಳಾಂತರಗೊಂಡಿತು. ಅವರ ಕುಟುಂಬ ಈಗ ಯುನೈಟೆಡ್ ಅಬ್ ಎಮಿರೇಟ್ಸ್ (UAE) ನಲ್ಲಿ ನೆಲೆಸಿದೆ(ಏಜೆನ್ಸೀಸ್​).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net