ಎರಡು ಬಸ್ಗಳ ಭೀಕರ ಅಪಘಾತ; ಸ್ಥಳದಲ್ಲೇ 10 ಮಂದಿ ಸಾವು; 32 ಪ್ರಯಾಣಿಕರಿಗೆ ಗಾಯ | Accident
ಘಟನೆಯ ಸ್ಥಳ
Published on:
Copied
Follow Us
ರಾಯ್ಪುರ: ಛತ್ತೀಸ್ಗಢದ ಬಲೋಡಾ ಬಜಾರ್ ಮತ್ತು ಜಶ್‌ಪುರ ಜಿಲ್ಲೆಗಳಲ್ಲಿ ಶುಕ್ರವಾರ(ಮಾ. 06) ಎರಡು ಪ್ರತ್ಯೇಕ ಬಸ್ಗಳ ಭೀಕರ ಅಪಘಾತ(Accident) ಸಂಭವಿಸಿದ್ದು, ಘಟನೆಯಲ್ಲಿ 10 ಮಂದಿ ಸ್ಥಳದಲ್ಲಿ ಮೃತಪಟ್ಟರೆ, 32 ಪ್ರಯಾಣಿಕರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
ರಾಜಧಾನಿ ರಾಯಪುರ್ನಿಂದ ಸುಮಾರು 50 ಕಿ.ಮೀ ದೂರದಲ್ಲಿರುವ ಬಲೋಡಾ ಬಜಾರ್ ಜಿಲ್ಲೆಯ ಭಟಪರ ಸಿಮ್ಗಾದಲ್ಲಿ ಅತಿ ವೇಗವಾಗಿ ಬಂದ್ ಟ್ರಕ್ವೊಂದು ಆರ್‌ಬಿಎಸ್ ಕಂಪನಿಯ ಬಸ್‌ಗೆ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಐದು ಪ್ರಯಾಣಿಕರು ಸಾವನ್ನಪ್ಪಿದ್ದು, 29 ಪ್ರಯಾಣಿಕರು ಗಾಯಗೊಂಡಿದ್ದಾರೆ.
ತಕ್ಷಣ ಸ್ಥಳದಲ್ಲಿ ಸ್ಥಳೀಯ ನಿವಾಸಿಗಳು, ಪೊಲೀಸ್ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆ ನಡೆಸಿದ್ದು, ಗಾಯಾಳುಗಳನ್ನು ರಕ್ಷಿಸಿ ರಾಯ್‌ಪುರದ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಸಾಗಿಸಲಾಗಿಸಿದ್ದಾರೆ.
ಇನ್ನೂ ಜಶ್‌ಪುರ ಜಿಲ್ಲೆಯ ತಪ್ಕಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಎರಡನೇ ಬಸ್ ಅಪಘಾತ ದುರಂತ ಸಂಭವಿಸಿದ್ದು, ಬಸ್ ರಸ್ತೆಯಿಂದ ಆಯ ತಪ್ಪಿ ಉರುಳಿದ ಪರಿಣಾಮ ಐದು ಜನರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ ಎನ್ನಲಾಗಿದೆ.
ಪಲ್ಟಿಯಾದ ವಾಹನದೊಳಗೆ ಸಿಲುಕಿದ್ದ ಪ್ರಯಾಣಿಕರನ್ನು ಸ್ಥಳೀಯರು ಮತ್ತು ಪೊಲೀಸರು ರಕ್ಷಿಸಿದ್ದು, ಗಾಯಾಳುಗಳನ್ನು ಕುಂಕುರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಿದ್ದಾರೆ. ಎರಡು ಅಪಘಾತ ಪ್ರಕರಣದ ಬಗ್ಗೆ ಪೊಲೀಸರು ಪ್ರತ್ಯೇಕ ಎಫ್ಐಆರ್ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
ಎರಡು ಅಪಘಾತ ಪ್ರಕರಣಗಳಲ್ಲಿ ಮೃತಪಟ್ಟವರಿಗೆ ದುಃಖ ವ್ಯಕ್ತಪಡಿಸಿರುವ ಸಿಎಂ ವಿಷ್ಣುದೇವ್ ಸಾಯಿ, ಮೃತರ ಕುಟುಂಬಗಳಿಗೆ ಸಂತಾಪ ಸೂಚಿಸಿದ್ದಾರೆ. ಗಾಯಾಳುಗಳಿಗೆ ಸಾಧ್ಯವಾದಷ್ಟು ಉತ್ತಮ ವೈದ್ಯಕೀಯ ಚಿಕಿತ್ಸೆ ಒದಗಿಸುವಂತೆ ಆಯಾ ಜಿಲ್ಲಾಡಳಿತಗಳಿಗೆ ನಿರ್ದೇಶನ ನೀಡಿದ್ದಾರೆ (ಏಜೆನ್ಸೀಸ್).