ಫೆ. 28ರಂದು ಬಿಡುಗಡೆಯಾದ ಅಧಿಕೃತ ಮಾಹಿತಿಯ ಪ್ರಕಾರ, ಕಳೆದ ವರ್ಷ ನವೆಂಬರ್ನಲ್ಲಿ SIR ಪ್ರಕ್ರಿಯೆಯು ಪ್ರಾರಂಭವಾದಾಗಿನಿಂದ ಒಟ್ಟು 63.66 ಲಕ್ಷ ಹೆಸರುಗಳು ಅಂದರೆ ಮತದಾರ ಪಟ್ಟಿಯ ಸುಮಾರು 8.3% ಮತದಾರರ ಹೆಸರನ್ನು ಅಳಿಸಲಾಗಿದೆ ಎನ್ನಲಾಗಿದೆ. ಈ 60.06 ಲಕ್ಷಕ್ಕೂ ಹೆಚ್ಚು ಮತದಾರರನ್ನು "ಅಂಡರ್ ಜಡ್ಜ್ಯೂಡೇಶನ್" ವರ್ಗದ ಅಡಿಯಲ್ಲಿ ಇರಿಸಲಾಗಿದೆ, ಅಂದರೆ ಮುಂಬರುವ ವಾರಗಳಲ್ಲಿ ಕಾನೂನು ಪರಿಶೀಲನೆಯ ಮೂಲಕ ಅವರ ಅರ್ಹತೆಯನ್ನು ನಿರ್ಧರಿಸಲಾಗುತ್ತದೆ ಎಂದು ಆಯೋಗ ಹೇಳಿದೆ (ಏಜೆನ್ಸೀಸ್).