ಇನ್ನೊಂದೆಡೆ, ಈ ಪ್ರಕರಣದ ಕುರಿತು ಮಾತನಾಡಿರುವ ಭೋಪಾಲ್ ಪೊಲೀಸ್ ಆಯುಕ್ತ ಸಂಜಯ್ ಕುಮಾರ್, ಇದುವರೆಗಿನ ಪ್ರಾಥಮಿಕ ತನಿಖೆ ಮತ್ತು ಸಾಕ್ಷ್ಯಗಳು ಇದು ಕೊಲೆಯಲ್ಲ, ಬದಲಿಗೆ ಆತ್ಮಹತ್ಯೆ ಎಂಬುದರ ಕಡೆಗೆ ಬೆರಳು ಮಾಡುತ್ತಿವೆ. ಆದರೂ ಕುಟುಂಬದ ಅನುಮಾನ ಹಾಗೂ ಬೇಡಿಕೆಯನ್ನು ನಾವು ಕೇಸ್ ಡೈರಿಯಲ್ಲಿ ದಾಖಲಿಸಿಕೊಂಡಿದ್ದೇವೆ ಎಂದು ಸ್ಪಷ್ಟಪಡಿಸಿದ್ದಾರೆ.