ಹಿರೋಗಳ ಸಿನಿಮಾ ಮೇಲೆ ಕೋಟಿ-ಕೋಟಿ ಹಣ: ಸ್ತ್ರೀ ಪ್ರಧಾನ ಸಿನಿಮಾಗಳಿಗೆ ನಾಕಾಣೆ ಸಿಗಲ್ಲ; ಬಾಲಿವುಡ್​​ನ ಕರಾಳ ಮುಖ ಬಿಚ್ಚಿಟ್ಟ ಹುಮಾ ಖುರೇಶಿ! Huma Qureshi on Bollywood

ಸ್ತ್ರೀ ಪ್ರಧಾನ ಸಿನಿಮಾಗಳಿಗೆ ಬಜೆಟ್​ ದೊರೆಯಲ್ಲ: ಹುಮಾ ಖುರೇಶಿ
ಸ್ತ್ರೀ ಪ್ರಧಾನ ಸಿನಿಮಾಗಳಿಗೆ ಬಜೆಟ್​ ದೊರೆಯಲ್ಲ: ಹುಮಾ ಖುರೇಶಿ
Published on
ಮುಂಬೈ: ಬಾಲಿವುಡ್​ನಲ್ಲಿ ನಟ ಮತ್ತು ನಟಿಯ ನಡುವೆ ಭೇದ-ಭಾವವನ್ನು ಮಾಡಲಾಗುತ್ತದೆ ಎಂಬ ಗುಮಾನಿ ಬಹಳ ವರ್ಷಗಳಿಂದ ಕೇಳಿಬರುತ್ತಿದೆ. ಈಗ ಇದಕ್ಕೆ ನಿದರ್ಶನ ಎಂಬಂತೆ ನಟಿ ಹುಮಾ ಖುರೇಶಿ (Huma Qureshi on Bollywood) ಇದರ ಕುರಿತು ಮನ ಬಿಚ್ಚಿ ಮಾತನಾಡಿದ್ದಾರೆ.

ಸ್ತ್ರೀ ಪ್ರಧಾನ ಸಿನಿಮಾಗೆ ಬಜೆಟ್​ ದೊರೆಯಲ್ಲ!

ಖಾಸಗಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ನಟಿ ಹುಮಾ ಖುರೇಶಿ, ಪುರುಷ ಪ್ರಧಾನ ಅಥವಾ ಹಿರೋಯಿಸಂ ಸಿನಿಮಾಗಳಿಗೆ ದೊರೆಯುವಷ್ಟು ಬಜೆಟ್​ ಸ್ತ್ರೀ ಪ್ರಧಾನ ಪಾತ್ರದಲ್ಲಿ ಕಾಣಿಸಿಕೊಳ್ಳುವ ಸಿನಿಮಾಗಳಿಗೆ ದೊರೆಯುವುದಿಲ್ಲ ಎಂಬ ಹೇಳಿಕೆ ನೀಡಿದ್ದಾರೆ.
ಈ ಕಟು ಸತ್ಯ ತಿಳಿದಿದ್ದರೂ ಸಹ ನಮ್ಮ ಬಾಲಿವುಡ್​ನ ಬಹುತೇಕ ನಟಿಯರು ಈ ಸ್ಟಿರಿಯೋಟೈಪ್​ನ್ನು ಮುರಿಯಲು ಪ್ರಯತ್ನಿಸುತ್ತಿದ್ದಾರೆ. ಆದರೆ ಇದರಲ್ಲಿ ನಮ್ಮ ಹೋರಾಟ ಸಂಪೂರ್ಣ ಜನ ಕಂಡಿದೆ ಎಂದು ನನಗೆ ಅನ್ನಿಸುವುದಿಲ್ಲ ಎಂದು ಹುಮಾ ಹೇಳಿದ್ದಾರೆ.

ರಿಮೇಕ್​ಗೆ ನನ್ನ ಬೆಂಬಲವಿಲ್ಲ

ಇದೇ ಸಂದರ್ಶನದಲ್ಲಿ ಮಾತನಾಡಿದ ಹುಮಾ, ನನಗೆ ರಿಮೇಕ್​ ಸಿನಿಮಾ ಮಾಡುವುದು ಇಷ್ಟವಿಲ್ಲ, ನಾವು ಏನಾದರೂ ಹೊಸದನ್ನು ಕೊಟ್ಟರೆ ಮಾತ್ರ ಜನ ಅದನ್ನು ಇಷ್ಟ ಪಡುತ್ತಾರೆ ಎಂದು ನಾನು ನಂಬಿದ್ದೇನೆಂದು ಅವರು ಹೇಳಿದರು.
ನಮ್ಮ ದೇಶ ವಿವಿಧತೆಯಿಂದ ಕೂಡಿದೆ. ನಾವು ಒಂದೇ ರೀತಿಯ ಸಿನಿಮಾ ಮಾಡುವುದರಲ್ಲಿ ಅರ್ಥವಿಲ್ಲ, ವಿವಿಧ ಸಂಸ್ಕೃತಿ, ಪುರಾಣ ಇವೆಲ್ಲದರ ಕುರಿತು ಸಿನಿಮಾ ಮಾಡಬೇಕು. ಹಾಗೆಯೇ ನಟಿಯರನ್ನು ನಂಬಿ ಸಿನಿಮಾ ಮೇಲೆ ಹಣವನ್ನು ವೆಚ್ಚ ಮಾಡುವ ನಿರ್ಮಾಪಕರು ಮುಂದೆ ಬರಬೇಕೆಂದು ನಟಿ ವಿನಂತಿಸಿ ಕೊಂಡಿದ್ದಾರೆ, (ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net