ಈ ಸಮೀಕ್ಷೆ ಚೆನ್ನೈ, ಚೆಂಗಲ್ಪಟ್ಟು, ಧರ್ಮಪುರಿ, ಮಧುರೈ, ಪುದುಕೊಟ್ಟೈ, ರಾಣಿಪೇಟ್, ತೆಂಕಶಿ, ತಿರುಪತ್ತೂರ್, ತಿರುವಾರೂರ್, ತೂತುಕುಡಿ, ತಿರುಪ್ಪೂರ್, ತಿರುವಳ್ಳೂರು ಮತ್ತು ಕಡಲೂರು ಸೇರಿದಂತೆ ಹಲವಾರು ಜಿಲ್ಲೆಗಳಾದ್ಯಂತ ಟಿವಿಕೆ ಭದ್ರಕೋಟೆಗಳನ್ನು ಗುರುತಿಸಿದೆ. ಆಂತರಿಕ ಸಮೀಕ್ಷೆಯ ಸೀಟುಗಳನ್ನು ನೋಡುವುದಾದರೆ ಡಿಎಂಕೆ 104 ಸ್ಥಾನಗಳೊಂದಿಗೆ ಮುನ್ನಡೆ ಸಾಧಿಸಿದ್ದು, ಟಿವಿಕೆ 74 ಮತ್ತು ಎಐಎಡಿಎಂಕೆ 56 ಸ್ಥಾನ ಪಡೆಯುವ ಮೂಲಕ ಮೂರನೇ ಸ್ಥಾನ ಪಡೆದುಕೊಂಡಿದೆ. ಕಾಂಗ್ರೆಸ್ ನಾಯಕರೊಬ್ಬರು ನಡೆಸಿದ ಮತ್ತೊಂದು ಸಮೀಕ್ಷೆಯು ಟಿವಿಕೆ ಶೇ 26 ರಷ್ಟು ಮತಪಡೆಯಲಿದೆ ಎಂದು ಅಂದಾಜಿಸಿದ್ದು, ಇದು ವಿಭಿನ್ನ ಮೌಲ್ಯಮಾಪನಗಳಲ್ಲಿನ ವ್ಯತ್ಯಾಸಗಳನ್ನು ತಿಳಿಸುತ್ತದೆ(ಏಜೆನ್ಸೀಸ್).