ಟಿಆರ್ಎಸ್ ಹೆಸರಿನ ಬಗ್ಗೆ ವಿವಿಧ ಪಕ್ಷಗಳ ನಾಯಕರ ಆಕ್ಷೇಪಣೆ ಹಿನ್ನೆಲೆ, ಕವಿತಾ ಅವರಿಗೆ ಚುನಾವಣೆ ಆಯೋಗ ಪತ್ರ ಬರೆದಿದ್ದು, 15 ದಿನಗಳೊಳಗೆ ಪಕ್ಷಕ್ಕೆ ಮೂರು ಪರ್ಯಾಯ ಹೆಸರುಗಳನ್ನು ಸಲ್ಲಿಸುವಂತೆ ಕೇಳಿಕೊಂಡಿದೆ. ಜೊತೆಗೆ ನಿಗದಿತ ಅವಧಿಯೊಳಗೆ ಈ ಬಗ್ಗೆ ಪ್ರತಿಕ್ರಿಯಿಸಲು ವಿಫಲವಾದರೆ, ಪಕ್ಷದ ನೋಂದಣಿ ಅರ್ಜಿಯನ್ನು ಯಾವುದೇ ಸೂಚನೆಯಿಲ್ಲದೇ ತಿರಸ್ಕರಿಸಲಾಗುವುದು ಎಂದು ಎಚ್ಚರಿಕೆ ನೀಡಿದೆ.