ಈ ಆಪರೇಷನ್ ಟೈಗರ್ ಯೋಜನೆ ಕೇವಲ ಮಹಾರಾಷ್ಟ್ರ ಸರ್ಕಾರದ ಇಬ್ಬರು ಸಚಿವರು ಸೇರಿದಂತೆ ಕೆಲವೇ ಕೆಲವು ನಾಯಕರಿಗೆ ಮಾತ್ರ ಗೊತ್ತಿತ್ತು ಎಂದು ತಿಳಿದುಬಂದಿದ್ದು, ಜೂನ್ 16 ರಂದು ಅತ್ಯಂತ ರಹಸ್ಯವಾಗಿ ಸಂಸದರನ್ನು ಖಾಸಗಿ ವಿಮಾನದ ಮೂಲಕ ದೆಹಲಿಗೆ ಕರೆತರಲಾಗಿತ್ತು. ನೋಯ್ಡಾದ ಹೋಟೆಲ್ನಲ್ಲಿ ವಾಸ್ತವ್ಯ ಹೂಡಿದ್ದ ಬಂಡಾಯ ಸಂಸದರು, ಮರುದಿನವೇ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರನ್ನು ಭೇಟಿ ಮಾಡಿ ತಾವೇ ಅಸಲಿ ಶಿವಸೇನೆ ಎಂದು ಪತ್ರ ನೀಡಿದ್ದರು. ಈ ಇಡೀ ಕಾರ್ಯಾಚರಣೆಯನ್ನು ಶ್ರೀಕಾಂತ್ ಶಿಂಧೆ ಮುಂಚೂಣಿಯಲ್ಲಿ ನಿಂತು ಯಶಸ್ವಿಗೊಳಿಸಿದ್ದರು ಎನ್ನಲಾಗಿದೆ.