ಇ-20 ನೀತಿ ವಿರೋಧಿಸಿ ಸಚಿವರ ಟ್ರೋಲಿಂಗ್​: ಮಾನಹಾನಿಕರ ಪೋಸ್ಟ್​ಗಳನ್ನು ಕೂಡಲೇ ಡಿಲೀಟ್​ ಮಾಡಿ; ನಿತಿನ್​ ಗಡ್ಕರಿ ಪರ ಬಾಂಬೆ ಹೈಕೋರ್ಟ್​ ಆದೇಶ! Bombay High Court on Nitin Gadkari

ಮಾನಹಾನಿಕರ ಪೋಸ್ಟ್ ಗಳನ್ನು ಕೂಡಲೇ ಡಿಲೀಟ್ ಮಾಡಲು ಬಾಂಬೆ ಹೈಕೋರ್ಟ್ ಆದೇಶ
ಮಾನಹಾನಿಕರ ಪೋಸ್ಟ್ ಗಳನ್ನು ಕೂಡಲೇ ಡಿಲೀಟ್ ಮಾಡಲು ಬಾಂಬೆ ಹೈಕೋರ್ಟ್ ಆದೇಶ
Published on

ಪ್ರಮುಖ ಮುಖ್ಯಾಂಶಗಳು

  • ಇ-20 ಇಂಧನ ನೀತಿ ವಿರೋಧಿಸಿ ಕೇಂದ್ರ ಸಚಿವ ನಿತಿನ್ ಗಡ್ಕರಿ ವಿರುದ್ಧ ಟ್ರೋಲಿಂಗ್​
  • ಮಾನಹಾನಿಕರ ಪೋಸ್ಟ್ ಗಳನ್ನು ಕೂಡಲೇ ಡಿಲೀಟ್ ಮಾಡಲು ಬಾಂಬೆ ಹೈಕೋರ್ಟ್ ಆದೇಶ
  • ಎಕ್ಸ್​, ಗೂಗಲ್​ ಹಾಗೂ ಮೆಟಾ ಕಂಪನಿಗಳಿಗೆ ನಿರ್ದೇಶನ ನೀಡಿದ ನ್ಯಾಯಪೀಠ
ಮುಂಬೈ: ಇ-20 ಪೆಟ್ರೋಲ್​ ನೀತಿಯನ್ನು ವಿರೋಧಿಸುವ ಹಿನ್ನಲೆ ಕೇಂದ್ರ ಸಚಿವ ನಿತಿನ್​ ಗಡ್ಕರಿ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿರುವ ನೀಚ, ನಿಂದನಾತ್ಮಕ ಹಾಗೂ ಅಶ್ಲೀಲವಾದ ವಿಷಯಗಳನ್ನು ಕೂಡಲೇ ತೆಗೆದು ಹಾಕಬೇಕೆಂದು ಬುಧವಾರ (ಆ.5 ) ಬಾಂಬೆ ಹೈಕೋರ್ಟ್​ (Bombay High Court on Nitin Gadkari) ನಿರ್ದೇಶಿಸಿದೆ.
ಪೆಟ್ರೋಲ್​ನಲ್ಲಿ ಎಥೆನಾಲ್​​ ಅನ್ನು ಮಿಶ್ರಣ ಮಾಡಿ ಮಾರಾಟ ಮಾಡುವ ಇ-20 ನೀತಿಯನ್ನು ವಿರೋಧಿಸುವ ಸಲುವಾಗಿ ಸೋಷಿಯಲ್​ ಮೀಡಿಯಾನಲ್ಲಿ ನಿತಿನ್ ಗಡ್ಕರಿ ಅವರನ್ನು ಟ್ರೋಲ್​ ಮಾಡಲಾಗಿತ್ತು. ಈ ತೇಜೋವಧೆ ಹಾಗೂ ಅಶ್ಲೀಲ ಪೋಸ್ಟ್​ಗಳನ್ನು ಪ್ರಶ್ನಿಸಿ ಸಚಿವರು ನ್ಯಾಯಾಲಯದ ಮೊರೆ ಹೋಗಿದ್ದರು.

ಕೂಡಲೇ ಇವುಗಳನ್ನು ತೆಗೆದುಹಾಕಿ!

ಟ್ರೋಲ್​ ಹಾಗೂ ರೋಷ್ಟ್​​ ವಿಡಿಯೋ ಹಾಗೂ ಪೋಸ್ಟ್​ಗಳ ವಿರುದ್ಧ ಸಚಿವರು ಸಲ್ಲಿಸಿದ್ದ ಸಿವಿಲ್​ ಮೊಕದ್ದಮೆಯನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಆರೀಫ್​ ಡಾಕ್ಟರ್​, ಸಚಿವರ ವಿರುದ್ಧ ಈ ರೀತಿ ಅಶ್ಲೀಲ, ನಿಂದನಾತ್ಮಕ ಹಾಗೂ ತೇಜೋವಧೆ ಉಂಟುಮಾಡುವ ಪೋಸ್ಟ್​ಗಳನ್ನು ಕೂಡಲೇ ತಮ್ಮ ವೇದಿಕೆಗಳಿಂದ ತೆಗೆದು ಹಾಕಬೇಕೆಂದು, ಎಕ್ಸ್​ (ಟ್ವಿಟರ್​), ಮೆಟಾ ಹಾಗೂ ಗೂಗಲ್​ ಕಂಪನಿಗಳಿಗೆ ನ್ಯಾಯಪೀಠ ಆದೇಶಿಸಿದೆ.

ಹಾಗೂ ಕೇವಲ ಸಚಿವರು, ಪ್ರಭಾವಿಗಳು ಮಾತ್ರವಲ್ಲ, ಯಾವುದೇ ವ್ಯಕ್ತಿಯನ್ನು ಟೀಕಿಸುವ ಭರದಲ್ಲಿ ತೇಜೋವಧೆ ವ್ಯಾಪ್ತಿಗೆ ಬರುವ ವಿಷಯಗಳನ್ನು ನಿಮ್ಮ ವೇದಿಕೆಗಳಲ್ಲಿ ಹಂಚಿಕೊಳ್ಳದಂತೆ ತಡೆಯಲು ವ್ಯವಸ್ಥೆಯೊಂದನ್ನು ನಿರ್ಮಿಸುವುದು ಸೂಕ್ತ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.


ಈ ಎಥೆನಾಲ್​ ನೀತಿಯಿಂದ ನಿತಿನ್​ ಗಡ್ಕರಿ ಅವರ ಕುಟುಂಬ ವರ್ಗ ನೇರವಾಗಿ ಲಾಭ ಪಡೆಯುತ್ತಿದೆ ಎಂನ ರೀತಿಯಲ್ಲಿ ಕೃತಕ ಬುದ್ಧಿಮತ್ತೆ ಹಾಗೂ ಡೀಪ್​ಫೇಕ್​ ತಂತ್ರಜ್ಞಾನವನ್ನು ಬಳಸಿಕೊಂಡು ಅಶ್ಲೀಲ, ನಿಂದನಾತ್ಮಕ ಹಾಗೂ ಸುಳ್ಳು ಸುದ್ದಿಯನ್ನು ಹರಡಲಾಗುತ್ತಿದೆ ಎಂದು ಸಚಿವರು ನ್ಯಾಯಾಲಯದಲ್ಲಿ ದೂರನ್ನು ದಾಖಲಿಸಿದ್ದರು.
ಇಂದು ಇದರ ವಿಚಾರಣೆ ನಡೆಸಿದೆ, ನ್ಯಾಯಪೀಠ ವಿವಾದಾತ್ಮಕ ಪೋಸ್ಟ್​ಗಳನ್ನು ತೆಗೆದುಹಾಕಬೇಕೆಂದು ನಿರ್ದೇಶನ ನೀಡಿ, ಪ್ರಕರಣದ ಮುಂದಿನ ವಿಚಾರಣೆಯನ್ನು ನಾಲ್ಕು ವಾರಗಳಿಗೆ ಮುಂದೂಡಿ ಅದೇಶಿಸಿದೆ, (ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net