ಅವನ ಜೀವನ 'ನೀರ ಮೇಲಿನ ಗುಳ್ಳೆಯಂತೆ': 'ಜಿರಳೆ' ಪಾರ್ಟಿ ಸ್ಥಾಪಕನಿಗೆ 'ಜೈಲು ಯೋಗ'ವಿದೆ? ಅಭಿಜಿತ್​ ದೀಪ್ಕೆ ಬಗ್ಗೆ ಭವಿಷ್ಯ ನುಡಿದ ಜ್ಯೋತಿಷಿ ವಿಡಿಯೋ ವೈರಲ್​! Astrologer on Abhijit Dipke

ಅಭಿಜಿತ್ ದೀಪ್ಕೆ ಜೀವನ ನೀರ ಮೇಲಿನ ಗುಳ್ಳೆಯಂತೆ ಎಂದು ಜ್ಯೋತಿಷಿ ಭವಿಷ್ಯ
ಅಭಿಜಿತ್ ದೀಪ್ಕೆ ಜೀವನ ನೀರ ಮೇಲಿನ ಗುಳ್ಳೆಯಂತೆ ಎಂದು ಜ್ಯೋತಿಷಿ ಭವಿಷ್ಯ
Published on

ಪ್ರಮುಖ ಮುಖ್ಯಾಂಶಗಳು

  • ನೀಟ್ ಪ್ರತಿಭಟನೆ ಖ್ಯಾತಿಯ 'ಕಾಕ್ರೋಚ್ ಜನತಾ ಪಾರ್ಟಿ' ಸ್ಥಾಪಕ ಅಭಿಜಿತ್ ದೀಪ್ಕೆ
  • ಅಭಿಜಿತ್ ದೀಪ್ಕೆ ಜೀವನ ನೀರ ಮೇಲಿನ ಗುಳ್ಳೆಯಂತೆ ಎಂದು ಜ್ಯೋತಿಷಿ ಭವಿಷ್ಯ
  • ಇವರಿಗೆ ಜೈಲು ಯೋಗವಿದೆ ಎನ್ನುವ ವೈರಲ್ ವಿಡಿಯೋ
ವೈರಲ್​: ನೀಟ್ ಪರೀಕ್ಷೆಯಲ್ಲಿ ನಡೆದಿದ್ದ ಅಕ್ರಮದ ವಿರುದ್ಧ ದೆಹಲಿಯಲ್ಲಿ ಹೋರಾಟ ನಡೆಸಿ ದೇಶದ ಗಮನ ಸೆಳೆದಿದ್ದ ಕಾಕ್ರೋಚ್ ಜನತಾ ಪಾರ್ಟಿ (CJP) ಸಂಸ್ಥಾಪಕ ಅಭಿಜಿತ್​ ದೀಪ್ಕೆ ಈಗ ಮತ್ತೆ ಮುನ್ನಲೆಗೆ ಬಂದಿದ್ದಾರೆ.
ಅಂದು ಸೋಷಿಯಲ್ ಮೀಡಿಯಾದಲ್ಲಿ ಸಣ್ಣದಾಗಿ ಶುರುವಾದ ಪ್ರತಿಭಟನೆ ದೆಹಲಿಯ ಜಂತರ್ ಮಂತರ್ ವರೆಗೆ ಮುಂದುವರಿದು ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು.

ಆದರೆ ಈಗ ಇವರ ಭವಿಷ್ಯದ ಬಗ್ಗೆ ಜ್ಯೋತಿಷಿ (Astrologer on Abhijit Dipke) ಯೊಬ್ಬರು ನುಡಿದಿರುವ ಭವಿಷ್ಯವಾಣಿ ಸೋಷಿಯಲ್​ ಮೀಡಿಯಾನಲ್ಲಿ ಸಕ್ಕತ್ ವೈರಲ್ ಆಗಿದ್ದು, ಭಾರಿ ಚರ್ಚೆಗೆ ಗ್ರಾಸವಾಗಿದೆ.

ಬೋಸ್ಟನ್‌ನಿಂದ ಬಂದು ಬಿರುಗಾಳಿ ಎಬ್ಬಿಸಿದ ದಿಪ್ಕೆ!

ಅಭಿಜಿತ್ ದಿಪ್ಕೆ ಈ ಅಭಿಯಾನವನ್ನು ಶುರು ಮಾಡಿದಾಗ ಅವರು ಅಮೆರಿಕದ ಬೋಸ್ಟನ್‌ನಲ್ಲಿದ್ದರು. ಆನ್‌ಲೈನ್‌ನಲ್ಲಿ ಶುರುವಾದ ಈ ಚಳುವಳಿಗೆ ಸಿಕ್ಕ ಜನಮನ್ನಣೆ ನೋಡಿ ಸ್ವದೇಶಕ್ಕೆ ಮರಳಿದರು.

ದೇಶಾದ್ಯಂತ ಬೆಂಬಲ ಹೆಚ್ಚಾಗುತ್ತಿದ್ದಂತೆ ಭಾರತಕ್ಕೆ ವಾಪಸ್ ಬಂದು ಸ್ವತಃ ತಾವೇ ಪ್ರತಿಭಟನೆಯನ್ನು ಮುಂಚೂಣಿಯಲ್ಲಿ ನಿಂತು ನಡೆಸಿದರು. ಜಂತರ್​-ಮಂತರ್​ನಲ್ಲಿ ನಡೆದ ಪ್ರತಿಭಟನೆ ದೇಶದಾದ್ಯಂತ ಸಾಕಷ್ಟು ಸದ್ದುಮಾಡಿ, ಸರ್ಕಾರಕ್ಕೆ ಈ ಪ್ರತಿಭಟನೆಗೆ ಮಣಿಯಬೇಕಾದ ಸ್ಥಿತಿ ಎದುರಾಯಿತು.

ಸಂಖ್ಯಾಶಾಸ್ತ್ರದ ಆಘಾತಕಾರಿ ಭವಿಷ್ಯ ವೈರಲ್!

ಪ್ರತಿಭಟನೆ ನಡೆದು ತಿಂಗಳು ಕಳೆದ ಬಳಿಕ, ಈಗ ಅಭಿಜಿತ್ ದೀಪ್ಕೆ ಅವರ ಭವಿಷ್ಯದ ಬಗ್ಗೆ ಜ್ಯೋತಿಷಿಯೊಬ್ಬರು ಆಡಿರುವ ಮಾತುಗಳು ಸಾಮಾಜಿಕ ಜಾಲತಾಣದಲ್ಲಿ ಬೆಂಕಿ ಹಚ್ಚಿವೆ. ಇನ್‌ಸ್ಟಾಗ್ರಾಮ್‌ನಲ್ಲಿ ಸಂದೀಪ್​ ಬಜಾಜ್​ ಎಂಬ ಖಾತೆಯಿಂದ ಹಂಚಿಕೊಳ್ಳಲಾದ ವಿಡಿಯೋದಲ್ಲಿ ಜ್ಯೋತಿಷಿ ದೀಪ್ಕೆ ಅವರ ಮುಂದಿನ ದಿನಗಳ ಬಗ್ಗೆ ಭವಿಷ್ಯ ನುಡಿದಿದ್ದಾರೆ.
ದೀಪ್ಕೆ ಅವರ ಭವಿಷ್ಯ ಬಹಳಷ್ಟು ಕಷ್ಟಗಳಿಂದ ಕೂಡಿದೆ ಎಂದು ಹೇಳಿರುವ ಜ್ಯೋತಿಷಿ, ಇವರದು ಗುಳ್ಳೆಯಂತಹ ಜೀವನ. ನೀರಿನ ಗುಳ್ಳೆ ಹೇಗೆ ಮೇಲಕ್ಕೆ ಏರಿ ಕ್ಷಣಮಾತ್ರದಲ್ಲಿ ಒಡೆದುಹೋಗುತ್ತದೋ, ಹಾಗೆಯೇ ಇವರ ಯಶಸ್ಸು ಕೂಡ ಬೇಗನೇ ಕರಗಿ ಹೋಗುತ್ತದೆ ಎಂದು ವಿವರಿಸಿದ್ದಾರೆ. ಸಂಖ್ಯಾಶಾಸ್ತ್ರದ ಪ್ರಕಾರ 2, 4 ಮತ್ತು 8 ಸಂಖ್ಯೆಗಳನ್ನು ಹೊಂದಿರುವವರ ಜೀವನದಲ್ಲಿ ಏಳುಬೀಳುಗಳು ಜಾಸ್ತಿ ಇರುತ್ತವೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಮುಂಬರುವ ವರ್ಷದಲ್ಲಿ ಜೈಲು ಯೋಗದ ಎಚ್ಚರಿಕೆ!

ಇಷ್ಟು ಮಾತ್ರವಲ್ಲದೆ, ಅಭಿಜಿತ್ ದೀಪ್ಕೆಗೆ ಮುಂದಿನ ವರ್ಷ ಭಾರೀ ಸಂಕಷ್ಟ ಎದುರಾಗಲಿದೆ ಎಂದು ಜ್ಯೋತಿಷಿ ಎಚ್ಚರಿಕೆ ನೀಡಿದ್ದಾರೆ. ಮುಂದಿನ ವರ್ಷ ಇವರಿಗೆ ಅತ್ಯಂತ ಒತ್ತಡದಿಂದ ಕೂಡಿರುತ್ತದೆ. ಪರಿಸ್ಥಿತಿ ಹೀಗೆಯೇ ಮುಂದುವರೆದರೆ ಇವರಿಗೆ ಜೈಲು ಪಾಲಾಗುವ ಯೋಗವೂ ಇದೆ ಎಂದು ಗಂಭೀರ ಭವಿಷ್ಯ ನುಡಿದಿದ್ದಾರೆ.
ಸಂಖ್ಯಾಶಾಸ್ತ್ರದ ಲೆಕ್ಕಾಚಾರದ ಪ್ರಕಾರ ಇವರ ವೈಯಕ್ತಿಕ ವರ್ಷವು 4 ಆಗಲಿದ್ದು, ಇದು ಇವರ ಜಾತಕಕ್ಕೆ ಹೊಂದಿಕೊಳ್ಳುವುದಿಲ್ಲ. ಪ್ರಸ್ತುತ ವರ್ಷ ಸ್ವಲ್ಪ ಪರವಾಗಿಲ್ಲ ಎನಿಸಿದರೂ, ಮುಂದಿನ ದಿನಗಳಲ್ಲಿ ಸವಾಲುಗಳು ಬೆಟ್ಟದಷ್ಟು ಎದುರಾಗಲಿವೆ ಎಂದಿದ್ದಾರೆ, (ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net