

ಪ್ರಮುಖ ಮುಖ್ಯಾಂಶಗಳು
ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (CWMA), ತಮಿಳುನಾಡಿಗೆ ನೀರು ಬಿಡಬೇಕೆಂದು ಹೇಳಿದರೂ ಕರ್ನಾಟಕ ಸರ್ಕಾರ ನೀರನ್ನು ಬಿಡುತ್ತಿಲ್ಲ. ನಮ್ಮ ರೈತರು ನೀರಿಲ್ಲದೆ ಸಾಯುತ್ತಿದ್ದಾರೆ, ಆದರೆ ಇದರ ಬಗ್ಗೆ ಮುಖ್ಯಮಂತ್ರಿ ವಿಜಯ್ ಯಾವುದೇ ಕ್ರಮ ಕೈಗೊಳ್ಳದೆ ಕುಳಿತ್ತಿದ್ದಾರೆ ಎಂದು ಉದಯಕುಮಾರ್ ಆಕ್ರೋಶ ಹೊರಹಾಕಿದ್ದಾರೆ.
ಉದಯಕುಮಾರ್ ಅವರ ಈ ಹೇಳಿಕೆ ರಾಜ್ಯದಲ್ಲಿ ಕೋಲಾಹಲಕ್ಕೆ ಕಾರಣವಾಗಿದ್ದು, ತ್ರಿಷಾ ಅಭಿಮಾನಿಗಳು ಮುಧುರೈನಲ್ಲಿ ಉದಯಕುಮಾರ್ ನೀಡಿದ್ದ ಹೇಳಿಕೆಯನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ. ತ್ರಿಷಾಳನ್ನು ನಿಮ್ಮ ರಾಜಕೀಯ ಡಾಳವಾಗಿ ಬಳಸಿಕೊಳ್ಳಬೇಡಿ, ವಿಜಯ್ ಅವರನ್ನು ವಿರೋಧಿಸುವಾಗ ಅವರನ್ನಷ್ಟೇ ವಿರೋಧಿಸಿ, ಎಲ್ಲದಕ್ಕೂ ತ್ರಿಷಾ ಹೆಸರನ್ನು ಎಳೆದು ತರುವುದು ಸರಿಯಲ್ಲ ಎನ್ನುವುದು ಅಭಿಮಾನಿಗಳ ಮಾತಾಗಿದೆ.