ವಿದ್ಯಾರ್ಥಿನಿ ಮೇಲೆ ಅತ್ಯಾ*ಚಾರ ಆರೋಪ: ಡೆಲ್ಲಿ ಕ್ಯಾಪಿಟಲ್ಸ್​​ತಂಡದ ಅಭಿಷೇಕ್​ ಪೊರೆಲ್​ ಬಂಧನ! Abhishek Porel

ಡೆಲ್ಲಿ ಕ್ಯಾಪಿಟಲ್ಸ್ ಆಟಗಾರ ಅಭಿಷೇಕ್ ಪೊರೆಲ್ ಬಂಧನ
ಡೆಲ್ಲಿ ಕ್ಯಾಪಿಟಲ್ಸ್ ಆಟಗಾರ ಅಭಿಷೇಕ್ ಪೊರೆಲ್ ಬಂಧನ
Published on

ಪ್ರಮುಖ ಮುಖ್ಯಾಂಶಗಳು

  • ವಿದ್ಯಾರ್ಥಿ ಮೇಲೆ ಅತ್ಯಾಚಾರ ಆರೋಪ
  • ಡೆಲ್ಲಿ ಕ್ಯಾಪಿಟಲ್ಸ್ ಆಟಗಾರ ಅಭಿಷೇಕ್ ಪೊರೆಲ್ ಬಂಧನ
  • ವಿದ್ಯಾರ್ಥಿನಿಯ ನತ್ನ ಫೋಟೊಗಳನ್ನು ಬಳಸಿ ಬ್ಲಾಕ್​ಮೇಲ್​ ಮಾಡಿದ ಆರೋಪ
ಕೊಲ್ಕತ: ಯುವತಿಯೋರ್ವಳ ಮೇಲೆ ಅತ್ಯಾಚಾರ ನಡೆಸಿದ ಆರೋಪದ ಹಿನ್ನಲೆ ಡೆಲ್ಲಿ ಕ್ಯಾಪಿಟಲ್ಸ್​ ತಂಡದ ಓಪನಿಂಗ್​ ಬ್ಯಾಟ್ಸ್​ಮನ್​ ಹಾಗೂ ವಿಕೇಟ್​ ಕೀಪರ್​ ಅಭಿಷೇಕ್​ ಪೊರೆಲ್​ (Abhishek Porel) ನನ್ನು ಪಶ್ಚಿಮ ಬಂಗಾಳ ಪೊಲೀಸರು ಬಂಧಿಸಿದ್ದಾರೆಂದು ವರದಿಯಾಗಿದೆ. 
ಈ ಕುರಿತಂತೆ ಮೊಗ್ರಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಜುಲೈ 20 ರಂದು ಅರ್ಜಿ ವಿಚಾರಣೆ ನಡೆಸಿದ್ದ ಕೊಲ್ಕತ ಹೈ ಕೋರ್ಟ್​, ಅಭಿಷೇಕ್​ ಈ ಪ್ರಕರಣದಲ್ಲಿ ಪ್ರಮುಖ ಆರೋಪಿ ಎಂದು ದೃಢಪಟ್ಟರೆ ಬಂಧಿಸುವಂತೆ ನಿರ್ದೇಶನ ನೀಡಿತ್ತು. 

ಈಗ ಅಭಿಷೇಕ್​ ಈ ಪ್ರಕರಣದಲ್ಲಿ ನೇರ ಸಂಬಂಧ ಹೊಂದಿರುವ ಹಿನ್ನಲೆ ಬಂಧಿಸಲಾಗಿದೆ ಎಂದು ಹೂಗ್ಲಿಯ ಪೊಲೀಸ್​ ವರಿಷ್ಟಾಧಿಕಾರಿ ಕುವರ್​ ಭೂಷಣ್ ಸಿಂಗ್​ ತಿಳಿಸಿದ್ದಾರೆ. 

ಪ್ರಕರಣದ ಹಿನ್ನಲೆ!

ಐಪಿಎಲ್​ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್​ ತಂಡದ ಪರ ಆಡುವ ಅಭಿಷೇಕ್​ ಪೊರೆಲ್​, ತನ್ನ ಮೇಲೆ ಅತ್ಯಾಚಾರ ನಡೆಸಿದ್ದಾಗಿ ವೈದ್ಯಕೀಯ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಯೊಬ್ಬಳು ಆರೋಪಿಸಿದ್ದಾಳೆ.

ಅಭಿಷೇಕ್​ ನನ್ನನ್ನು ಸೋಷಿಯಲ್​ ಮೀಡಿಯಾನಲ್ಲಿ ಪರಿಚಯವಾಗಿದ್ದ. ನನ್ನ ಜೊತೆ ಅವನು ನಿರಂತರವಾಗಿ ಮೆಸೇಜ್​ ಮಾಡುತ್ತಿದ್ದ. ನಂತರದ ದಿನಗಳಲ್ಲಿ ಅವನು ನನ್ನ ನಗ್ನ, ಅರೆ-ನಗ್ನ ಚಿತ್ರಗಳನ್ನು ಹಾಗೂ ವಿಡಿಯೋಗಳನ್ನು ನನ್ನ ಅನುಮತಿ ಇಲ್ಲದೇ ಶೇಖರಿಸಿದ್ದಾನೆ. ಅಂತಯೇ ಅದನ್ನು ಬಳಸಿಕೊಂಡು ನನಗೆ ಬ್ಲಾಕ್​ಮೇಲ್​ ಮಾಡಿದ್ದಾಗಿ ಯುವತಿ ತನ್ನ ದೂರಿನಲ್ಲಿ ತಿಳಿಸಿದ್ದಾಳೆ.


ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅಭಿಷೇಕ್​ ಪೊರೆಲ್​ಗೆ ಸೇರಿದ್ದ ಹಾರ್ಡ್​ಡಿಸ್ಕ್​​, ಪಡೆಡ್ರೈವ್​​, ಲ್ಯಾಪ್​ಟಾಪ್​, ಮೊಬೈಲ್​ ಮೊದಲಾದ ಇಲೆಕ್ಟ್ರಾನಿಕ್​ ಸಾಧನಗಳನ್ನು ಪೊಲೀಸರು ಈಗಾಗಲೇ ವಶಕ್ಕೆ ಪಡೆದಿದ್ದು, ವಿಚಾರಣೆ ನಡೆಸುತ್ತಿದ್ದೆವೆಂದು ಪೊಲೀಸರು ನ್ಯಾಯಾಲಯಕ್ಕೆ ತಿಳಿಸಿದ್ದರು. 

ಈಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊರೆಲ್​ನ ಬಂಧನವಾಗಿದ್ದು, ಮುಂದೆ ಏನಾಗಲಿದೆ ಎನ್ನುವುದಕ್ಕೆ ಕಾಲವೇ ಉತ್ತರಿಸಲಿದೆ, (ಏಜನ್ಸೀಸ್​). 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net