ನಕ್ಸಲರಿಂದ ಹೆಚ್ಚು ಸಂಕಷ್ಟ ಅನುಭವಿಸಿದ್ದು ಬುಡಕಟ್ಟು ಸಮುದಾಯ: ಹಿಂದಿನ ಸರ್ಕಾರಗಳು ಮೂಕ ಪ್ರೇಕ್ಷಕವಾಗಿದ್ದವು: ಪ್ರಧಾನಿ ಮೋದಿ | PM Modi

ನಕ್ಸಲ್ ಚಟುವಟಿಕೆ ಮತ್ತು ನಕ್ಸಲರಿಂದ ಬುಡಕಟ್ಟು ಸಮುದಾಯಗಳು ಅತಿ ಹೆಚ್ಚು ಸಂಕಷ್ಟ ಅನುಭವಿಸಿವೆ ಎಂದಿರುವ ಪ್ರಧಾನಿ ನರೇಂದ್ರ ಮೋದಿ, ಹಿಂದಿನ ಸರ್ಕಾರಗಳು ಅದನ್ನು ನೋಡಿಕೊಂಡು ಮೂಕ ಪ್ರೇಕ್ಷಕವಾಗಿದ್ದವು ಎಂದು ಹೇಳಿದ್ದಾರೆ.
ನಕ್ಸಲರಿಂದ ಹೆಚ್ಚು ಸಂಕಷ್ಟ ಅನುಭವಿಸಿದ್ದು ಬುಡಕಟ್ಟು ಸಮುದಾಯ: ಹಿಂದಿನ ಸರ್ಕಾರಗಳು ಮೂಕ ಪ್ರೇಕ್ಷಕವಾಗಿದ್ದವು: ಪ್ರಧಾನಿ ಮೋದಿ | PM Modi
Published on: 

ನವದೆಹಲಿ: ನಕ್ಸಲ್ ಚಟುವಟಿಕೆ ಮತ್ತು ನಕ್ಸಲರಿಂದ ಬುಡಕಟ್ಟು ಸಮುದಾಯಗಳು ಅತಿ ಹೆಚ್ಚು ಸಂಕಷ್ಟ ಅನುಭವಿಸಿವೆ ಎಂದಿರುವ ಪ್ರಧಾನಿ ನರೇಂದ್ರ ಮೋದಿ, ಹಿಂದಿನ ಸರ್ಕಾರಗಳು ಅದನ್ನು ನೋಡಿಕೊಂಡು ಮೂಕ ಪ್ರೇಕ್ಷಕವಾಗಿದ್ದವು ಎಂದು ಹೇಳಿದ್ದಾರೆ.

ಬುಡಕಟ್ಟು ಸ್ವಾತಂತ್ರ್ಯ ಹೋರಾಟಗಾರ ಬಿರ್ಸಾ ಮುಂಡಾ ಅವರ 151ನೇ ಜನ್ಮದಿನದ ಅಂಗವಾಗಿ ಭಾನುವಾರ(ನ. 15) ಮಹಾರಾಷ್ಟ್ರದ ಗಡ್ಚಿರೋಲಿಯಲ್ಲಿ ನಡೆದ 'ಜನಜಾತಿಯ ಗೌರವ ದಿವಸ' ಕಾರ್ಯಕ್ರಮವನ್ನು ಉದ್ದೇಶಿಸಿ ವರ್ಚುವಲ್ ಮೂಲಕ ಮಾತನಾಡಿದ್ದಾರೆ.

ಬುಡಕಟ್ಟು ಸಮುದಾಯಗಳು ಯಾವಾಗಲೂ ಅನ್ಯಾಯದ ವಿರುದ್ಧ ಧ್ವನಿ ಎತ್ತಿ ನಿಂತಿವೆ ಎಂದಿರುವ ಅವರು, ಹಿಂದಿನ ಸರ್ಕಾರಗಳು ಆ ಸಮುದಾಯಗಳನ್ನು ತಮ್ಮ ಪಾಡಿಗೆ ತಾವು ಬದುಕಿಕೊಳ್ಳುವಂತೆ ಬಿಟ್ಟುಬಿಟ್ಟಿದ್ದವು. ನಕ್ಸಲರು ಅವರಿಗೆ ಮತದಾನದ ಹಕ್ಕನ್ನು ನಿರಾಕರಿಸುತ್ತಿದ್ದರು ಎಂದು ತಿಳಿಸಿದ್ದಾರೆ.

Also Read
ಶೇಖ್ ಹಸೀನಾರನ್ನು ಬಾಂಗ್ಲಾದೇಶಕ್ಕೆ ವಾಪಸ್ ಕಳಿಸಲು ಭಾರತ ಎರಡು ಷರತ್ತು? ಬಿಬಿಸಿ ವರದಿ ಹೇಳಿದ್ದೇನು? | Sheikh Hasina
ನಕ್ಸಲರಿಂದ ಹೆಚ್ಚು ಸಂಕಷ್ಟ ಅನುಭವಿಸಿದ್ದು ಬುಡಕಟ್ಟು ಸಮುದಾಯ: ಹಿಂದಿನ ಸರ್ಕಾರಗಳು ಮೂಕ ಪ್ರೇಕ್ಷಕವಾಗಿದ್ದವು: ಪ್ರಧಾನಿ ಮೋದಿ | PM Modi

ದೀರ್ಘಕಾಲದಿಂದ ಮೂಲಭೂತ ಸೌಕರ್ಯಗಳ ಕೊರತೆ ಎದುರಿಸುತ್ತಿದ್ದ ಬುಡಕಟ್ಟು ಪ್ರದೇಶಗಳ ಅಭಿವೃದ್ಧಿಗಾಗಿ ನಮ್ಮ ಸರ್ಕಾರವು ವಿಶೇಷ ಪ್ರಯತ್ನಗಳನ್ನು ನಡೆಸಿದೆ. ಮತ್ತು ಇದಕ್ಕಾಗಿ 1 ಲಕ್ಷ ಕೋಟಿ ರೂಪಾಯಿಗೂ ಹೆಚ್ಚು ಹಣವನ್ನು ಮೀಸಲಿಟ್ಟಿದೆ ಎಂದು ಹೇಳಿದ್ದಾರೆ.

ತಮ್ಮ ಸರ್ಕಾರ ಕೈಗೊಂಡ ಬಡತನ ನಿರ್ಮೂಲನಾ ಕ್ರಮಗಳನ್ನು ಉಲ್ಲೇಖಿಸಿದ ಅವರು, ಸ್ವಾತಂತ್ರ್ಯ ನಂತರ ಭಾರತದ ಅತಿದೊಡ್ಡ ಸಾಧನೆಗಳಲ್ಲಿ ಒಂದೆಂದರೆ 50 ಕೋಟಿ ಜನರನ್ನು ತೀವ್ರ ಬಡತನದಿಂದ ಹೊರತಂದಿರುವುದು ಎಂದಿದ್ದಾರೆ.

ಇದೇ ವೇಳೆ ಪ್ರಧಾನಿ ಮೋದಿಯವರು, 246 ಯೋಜನೆಗಳ 3,000 ಕೋಟಿ ರೂ. ಮೌಲ್ಯದ 173 ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಿ, 73 ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿದ್ದಾರೆ (ಏಜೆನ್ಸೀಸ್).