

ನವದೆಹಲಿ: 2024ರಲ್ಲಿ ವಿದ್ಯಾರ್ಥಿಗಳ ದಂಗೆ ಬಳಿಕ ಪ್ರಧಾನಿ ಸ್ಥಾನದಿಂದ ಪದಚ್ಯುತಗೊಂಡು ಬಾರತಕ್ಕೆ ಬಂದು ತಲೆ ಮರೆಸಿಕೊಂಡಿರುವ ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರನ್ನು ಮರಳಿ ಢಾಕಾಗೆ ಗಡಿಪಾರು ಮಾಡಲು ಭಾರತ ಎರಡು ಷರತ್ತುಗಳನ್ನು ವಿಧಿಸಿದೆ ಎಂದು ಬಿಬಿಸಿ ಬಾಂಗ್ಲಾ ವರದಿ ಮಾಡಿದೆ.
ಭಾರತ ಸರ್ಕಾರ ಭಾರತಕ್ಕೆ ಹಾಕಿರುವ ಮೊದಲ ಷರತ್ತು ಎಂದರೆ, ಬಾಂಗ್ಲಾದೇಶ ಸೇನೆಯು ಶೇಖ್ ಹಸೀನಾ ಅವರನ್ನು ವಾಪಸ್ ಕರೆದುಕೊಂಡು ಹೋಗುವ ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕು. ಎರಡನೇಯಾದಾಗಿ ಬಾಂಗ್ಲಾ 2024ರ ದಂದೆಯ ಸಮಯದ ಕೊಲೆ ಆರೋಪಗಳ ಕುರಿತು ಹೊಸ ವಿಚಾರಣೆಯನ್ನು ನಡೆಸಬೇಕು. ಶೇಖ್ ಹಸೀನಾ ಅವರಿಗೆ ತಮ್ಮ ಮರಣದಂಡನೆಯ ವಿರುದ್ಧ ಮೇಲ್ಮನವಿ ಸಲ್ಲಿಸುವ ಅವಕಾಶ ನೀಡಬೇಕೆಂದು ಹೇಳಿದೆ ಎಂದು ವರದಿ ಉಲ್ಲೇಖಿಸಿದೆ.
ಇನ್ನೂ ಇತ್ತೀಚೆಗೆ ಸುದ್ದಿ ಸಂಸ್ಥೆ IANSಗೆ ನೀಡಿದ ಆಡಿಯೋ ಸಂದರ್ಶನದಲ್ಲಿ ಮಾತನಾಡಿರುವ ಶೇಖ್ ಹಸೀನಾ, ಬಂಧನ, ಜೈಲು ಶಿಕ್ಷೆ ಅಥವಾ ಸಾವಿನ ಬೆದರಿಕೆ ನಾನು ದೇಶಕ್ಕೆ ಮರಳವುದನ್ನು ತಡೆಯಲು ಸಾಧ್ಯವಿಲ್ಲ. ನನ್ನ ಜನರಿಂದ ದೂರವಿರುವುದಕ್ಕಿಂತ ತಾಯ್ನಾಡಿನಲ್ಲಿ ಸಾಯುವುದೇ ಲೇಸು ಎಂದು ಹೇಳಿದ್ದಾರೆ.
ನನಗೆ ಅಪಾಯಗಳು ಚೆನ್ನಾಗಿ ಅರ್ಥವಾಗಿವೆ. ನಾನು ಆ ದೇಶಕ್ಕೆ ಕಾಲಿಟ್ಟ ಕ್ಷಣದಲ್ಲೇ ನನ್ನನ್ನು ಬಂಧಿಸಬಹುದು, ಜೈಲಿಗೆ ಕಳುಹಿಸಬಹುದು. ಕೊಲ್ಲಲು ಸಹ ಪ್ರಯತ್ನಿಸಬಹುದು. ಈ ಎಲ್ಲಾ ಸಾಧ್ಯತೆಗಳನ್ನು ನನಗೆ ತಿಳಿದಿದೆ. ಆದರೆ, ನಾನು ಬಹಳ ಹಿಂದೆಯೇ ನನ್ನ ವೈಯಕ್ತಿಕ ಸುರಕ್ಷತೆಯ ಬಗ್ಗೆ ಚಿಂತಿಸುವುದನ್ನು ನಿಲ್ಲಿಸಿದ್ದೇನೆ ಎಂದು ತಿಳಿಸಿದ್ದಾರೆ.
ಮಿಲಿಟರಿ ಆಡಳಿತದ ಹೊರತಾಗಿಯೂ ನಾನು 1981ರಲ್ಲಿ ಬಾಂಗ್ಲಾದೇಶಕ್ಕೆ ಮರಳಿದೆ. ಮಿಲಿಟರಿ ಬೆಂಬಲಿತ ಸರ್ಕಾರವು ನನ್ನನ್ನು ಬಂಧಿಸಬಹುದು ಎಂದು ತಿಳಿದಿದ್ದರೂ ನಾನು 2007ರಲ್ಲಿ ಮತ್ತೆ ಮರಳಿದೆ. ಜೈಲಿಗೆ ಹೋದೆ ಎಲ್ಲವನ್ನೂ ನೋಡಿದ್ದೇನೆ ಎಂದಿದ್ದಾರೆ (ಏಜೆನ್ಸೀಸ್).