ವೈದ್ಯರು ಬಾಲಕನ ಗಂಟಲಿನಲ್ಲಿ ಸಿಲುಕಿಕೊಂಡಿದ್ದ ಬಲೂನನ್ನು ಹೊರತೆಗೆದರಾದರೂ, ಅಷ್ಟರಲ್ಲಾಗಲೇ ಕಾಲಮೀರಿ ಹೋಗಿತ್ತು. ಸ್ವಲ್ಪ ಸಮಯದ ಹಿಂದೆಷ್ಟೇ ಆಡುತ್ತಾ, ಹಾಡುತ್ತಾ, ನಗುತ್ತಾ ಎಲ್ಲರೊಂದಿಗೆ ಸಂತೋಷದಿಂದ ಕಾಲ ಕಳೆದ ಮಗು ಅನಿರೀಕ್ಷಿತವಾಗಿ ಸಾವಿಗೀಡಾಗಿದ್ದನ್ನು ಕಂಡು ಪಾಲಕರು ಹಾಗೂ ಕುಟುಂಬದ ಸದಸ್ಯರು ಕಣ್ಣೀರಾಕುತ್ತಾ ದುಃಖದಲ್ಲಿ ಮುಳುಗಿದ್ದಾರೆ.