ಆಗಸ್ಟ್ 26 ಕ್ಕೆ ತೆರೆಮೇಲೆ ಟಾಕ್ಸಿಕ್​: ದ್ವಿಪಾತ್ರದಲ್ಲಿ ಮಿಂಚಲು ಸಜ್ಜಾದ ರಾಕಿಂಗ್​ ಸ್ಟಾರ್​; ಯಶ್ ಕಲೆಕ್ಷನ್‌ಗೆ ಬ್ರೇಕ್ ಹಾಕ್ತಾರಾ ಶ್ರದ್ಧಾ ಕಪೂರ್​? Rocking Star Yash in Toxic

ಆಗಸ್ಟ್ 8ಕ್ಕೆ 'ಟಾಕ್ಸಿಕ್' ಸಿನಿಮಾ ರಿಲೀಸ್
ಆಗಸ್ಟ್ 8ಕ್ಕೆ 'ಟಾಕ್ಸಿಕ್' ಸಿನಿಮಾ ರಿಲೀಸ್
Published on

ಪ್ರಮುಖ ಮುಖ್ಯಾಂಶಗಳು

  • ರಾಕಿಂಗ್ ಸ್ಟಾರ್ ಯಶ್ ಅಭಿಮಾನಿಗಳಿಗೆ ಬಿಗ್ ಅಪ್ಡೇಟ್!
  • ಆಗಸ್ಟ್ 8ಕ್ಕೆ 'ಟಾಕ್ಸಿಕ್' ಸಿನಿಮಾ ರಿಲೀಸ್ . ದ್ವಿಪಾತ್ರದಲ್ಲಿ ಯಶ್ ಅಬ್ಬರ!
  • ಬಾಲಿವುಡ್‌ನ ಶ್ರದ್ಧಾ ಕಪೂರ್ ನಟನೆಯ 'ಈಥ' ಚಿತ್ರದಿಂದ ರಾಕಿ ಭಾಯ್‌ಗೆ ಟಫ್ ಕಾಂಪಿಟಿಷನ್
ಸಿನಿಮಾ: ಅಂತೂ, ಇಂತೂ ರಾಕಿಂಗ್​ ಸ್ಟಾರ್​ ಯಶ್​ ಅಭಿಮಾನಿಗಳಿಗೆ ಇವತ್ತು ಸಿಹಿ ಸುದ್ದಿ ದೊರೆತಿದೆ. ಜಗತ್ತೆ ಕಾತುರದಿಂದ ಕಾಯುತ್ತಿದ್ದ ಟಾಕ್ಸಿಕ್​: ಎ ಫೇರಿ ಟೇಲ್​ ಫಾರ್​ ಗ್ರೋನ್​ ಅಪ್ಸ್ (Rocking Star Yash in Toxic)​​ ಸಿನಿಮಾ ಅಗಸ್ಟ್​ 26 ರಂದು ತೆರೆ ಕಾಣಲಿದೆ ಎಂದು ಸಿನಿಮಾ ತಂಡ ಘೋಷಿಸಿದೆ. 
ಈ ಟಾಕ್ಸಿಕ್​ ಸಿನಿಮಾ ಮೊದಲು ಭಾರತೀಯ ಸಿನಿರಂಗವನ್ನು ಧೂಳಿಪಟ ಮಾಡಿದ ಧುರಂಧರ್​ 2 ಗೆ ಠಕ್ಕರ್​ ಕೊಡಲು ಮಾರ್ಜ್​ 19 ರಂದು ಬಿಡುಗಡೆ ಆಗಲಿತ್ತು. ಆದರೆ ಆಗ ಮಧ್ಯಪ್ರಾಚ್ಯದಲ್ಲಿ ಸಂಘರ್ಷ ಪ್ರಾರಂಭವಾದ ಹಿನ್ನಲೆ, ಸಿನಿಮಾವನ್ನು ಜೂನ್​ 4 ಕ್ಕೆ ಮುಂದೂಡಲಾಗಿತ್ತು.
ಅದರೆ ಈ ಸಿನಿಮಾವನ್ನು ಜಾಗತಿಕ ಮಟ್ಟದ ಮಾರ್ಕೆಟಿಂಗ್​ ಸಲುವಾಗಿ ಇನ್ನು ಸಮಯಬೇಕೆಂಬ ಕಾರಣಕ್ಕಾಗಿ, ಸಿನಿಮಾವನ್ನು ಇನ್ನೊಂದು ಸಲ ಮುಂದೂಡಲಾಗಿದ್ದು, ಮುಂದಿನ ದಿನಾಂಕವನ್ನು ತಿಳಿಸಲಾಗುವುದೆಂದು ಹೇಳಿದ್ದರು.

ರಾಯನಿಗೆ ಠಕ್ಕರ್​ ಕೊಡಲು ಶ್ರದ್ಧಾ ಸಿದ್ಧ!

ಒಂದು ಕಡೆ ರಾಕಿಂಗ್​ ಸ್ಟಾರ್​ ಯಶ್​ ಅವರ ಟಾಕ್ಸಿಕ್​ ಅಗಸ್ಟ್​ 8 ರಂದು ಬಿಡುಗಡೆಯಾಗುತ್ತಿದ್ದರೆ, ಇನ್ನೊಂದು ಕಡೆ ಬಾಲಿವುಡ್​ನಲ್ಲಿ ತನ್ನದೇ ಆದ ಅಭಿಮಾನಿ ಬಳಗವನ್ನು ಹೊಂದಿರುವ ನಟಿ ಶ್ರದ್ಧಾ ಕಪೂರ್​ ಅವರ ಈಥ (Eetha) ಅಗಸ್ಟ್​ 28 ರಂದು ತೆರೆಕಾಣಲಿದೆ.
ಆದ್ದರಿಂದ ಹಿಂದಿ ಜೋನ್​ನಲ್ಲಿ ಟಾಕ್ಸಿಕ್​ ಕಲೆಕ್ಷನ್​ಗೆ ಈಥ ಸಿನಿಮಾ ಕೊಡಲಿ ಪೆಟ್ಟನ್ನು ಕೊಡಲಿದೆ ಎಂದಿ ಸಿನಿಮಾ ವಿಮರ್ಶಕರು ಹೇಳುತ್ತಿದ್ದಾರೆ. ಹಾಗೆಯೇ ಈಥ ಸಿನಿಮಾ ಮರಾಠಿ ರಂಗಭೂಮಿ ಕಲಾವಿದೆ ವಿಠಬಾಯಿ ನಾರಾಯಣಗಾಂವ್ಕರ್ ಅವರ ಜೀವನಾಧಾರಿತ ಸಿನಿಮಾವಾಗಿದ್ದು, ಇದರಲ್ಲಿ ನಟಿ ಶ್ರದ್ಧಾ ಕಪೂರ್​ ಅವರ ಮನೋಜ್ಞವಾದ ಅಭಿನಯ ಟೀಸರ್​ನಲ್ಲಿ ಮೂಡಿ ಬಂದಿದೆ. 

ಖ್ಯಾತ ನಾಮರೇ ತುಂಬಿರುವ ಸಿನಿಮಾ ಟಾಕ್ಸಿಕ್​

ಟಾಕ್ಸಿಕ್​ ಈ ಸಿನಿಮಾದಲ್ಲಿ ರಾಕಿಂಗ್​ ಸ್ಟಾರ್​ ಯಶ್​ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡರೆ, ನಯನತಾರಾ, ಕಿಯಾರಾ ಅಡ್ವಾಣಿ, ರುಕ್ಮಿಣಿ ವಸಂತ್​, ಹುಮಾ ಖುರೇಶಿ, ತಾರಾ ಸುತಾರಿಯಾ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಸಿನಿಮಾದಲ್ಲಿ ಯಶ್​ ದ್ವಿಪಾತ್ರದಲ್ಲಿ ಮಿಂಚಲಿದ್ದು ಈ ಸಿನಿಮಾ ಅಗಸ್ಟ್​ 26 ರಂದು ತೆರೆಕಾಣಲಿದೆ. ಈ ಸಿನಿಮಾವನ್ನು ಗೀತು ಮೋಹನ್​ ದಾಸ್ ನಿರ್ದೇಶಿಸಿದ್ದಾರೆ, (ಏಜನ್ಸೀಸ್​). 

Related Stories

Boiled Sambar
35 ರಲ್ಲಿ 31 ಕೌನ್ಸಿಲರ್‌ಗಳು ಪಕ್ಷೇತರ, ಕೋರ್ಟ್ ಮೊರೆ, ರಾತ್ರಿ 10 ಗಂಟೆಯವರೆಗೂ ಮತದಾನ!...ಥ್ರಿಲ್ಲರ್ ಸಿನಿಮಾವನ್ನೇ ಮೀರಿಸುವಂತಿದೆ ರಾಜಸ್ಥಾನದ ಚುನಾವಣೆ | Tijara Election
Delhi riots case: Sharjeel Imam granted interim bail to attend a wedding ceremony.
Waris Pathan
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net