ಮೂಖ ಪ್ಲಾಸ್ಟಿಕ್ ಡ್ರಮ್ನಲ್ಲಿ ಸಿಕ್ಕಿಹಾಕಿಕೊಂಡ ನಂತರ, ಹಸುವಿಗೆ ಉಸಿರುಗಟ್ಟಲು ಪ್ರಾರಂಭವಾಗಿದೆ. ಈ ದೃಶ್ಯವನ್ನು ಕಂಡ ಪಾದಾಚಾರಿಗಳು ಹಸುವಿನ ನೆರವಿಗೆ ಧಾವಿಸಿದ್ದಾರೆ. ಆದರೆ ಗಾಬರಿಗೊಂಡಿದ್ದ ಹಸು ರಕ್ಷಣೆ ಬಂದವರ ಮೇಲೆ ದಾಳಿಗೆ ಯತ್ನಿಸಿದೆ. ಆದರೂ, ಹಸುವಿನ ರಕ್ಷಣೆಯಲ್ಲಿ ಜನರು ಯಶಸ್ವಿಯಾಗಿದ್ದು, ಪ್ರಾಣಾಪಾಯದಿಂದ ಮೂಕ ಪ್ರಾಣಿಯ ಜೀವವನ್ನು ಕಾಪಾಡುವುದರಲ್ಲಿ ಸಫಲರಾಗಿದ್ದಾರೆ.