ಪ್ರಬುದ್ಧ ವ್ಯಕ್ತಿಗಳ ನಡುವೆ ಚರ್ಚೆ ನಡೆಯಬೇಕು; ಪ್ರಧಾನಿ ಮೋದಿಯನ್ನು ಡಿಬೆಟ್​ಗೆ ಕರೆದ ರಾಹುಲ್​ ಗಾಂಧಿಗೆ ರಿಜಿಜು ತಿರುಗೇಟು | Kiren Rijiju

ವಿದೇಶಿ ಸಹಾಯದಿಂದ ಪ್ರಧಾನಿಯಾಗಿ, ಅದೇ ವಿದೇಶಿ ನೆರವಿನಿಂದ ಅಧಿಕಾರದಲ್ಲಿ ಉಳಿದಿದ್ದೀರಿ ಬೇಕಾದರೇ ಈ ಬಗ್ಗೆ ಬಹಿರಂಗ ಚರ್ಚೆಗೆ ಬನ್ನಿ ಎಂದು ಪ್ರಧಾನಿ ಮೋದಿಯವರಿಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸವಾಲು ಹಾಕಿದ್ದಾರೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಕೇಂದ್ರ ಸಚಿವ ಕಿರಣ್ ರಿಜಿಜು, ಉನ್ನತಮಟ್ಟದ ಚರ್ಚೆ ಪ್ರಬುದ್ಧ ವ್ಯಕ್ತಿಗಳ ನಡುವೆ ನಡೆಯುತ್ತಿದೆ ಎಂದು ತಿರುಗೇಟು ನೀಡಿದ್ದಾರೆ.
ಕೇಂದ್ರ ಸಚಿವ ಕಿರಣ್ ರಿಜಿಜು ಮತ್ತು ರಾಹುಲ್ ಗಾಂಧಿ
ಕೇಂದ್ರ ಸಚಿವ ಕಿರಣ್ ರಿಜಿಜು ಮತ್ತು ರಾಹುಲ್ ಗಾಂಧಿ
Published on: 

ನವದೆಹಲಿ: ವಿದೇಶಿ ಸಹಾಯದಿಂದ ಪ್ರಧಾನಿಯಾಗಿ, ಅದೇ ವಿದೇಶಿ ನೆರವಿನಿಂದ ಅಧಿಕಾರದಲ್ಲಿ ಉಳಿದಿದ್ದೀರಿ ಬೇಕಾದರೇ ಈ ಬಗ್ಗೆ ಬಹಿರಂಗ ಚರ್ಚೆಗೆ ಬನ್ನಿ ಎಂದು ಪ್ರಧಾನಿ ಮೋದಿಯವರಿಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸವಾಲು ಹಾಕಿದ್ದಾರೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಕೇಂದ್ರ ಸಚಿವ ಕಿರಣ್ ರಿಜಿಜು, ಉನ್ನತಮಟ್ಟದ ಚರ್ಚೆ ಪ್ರಬುದ್ಧ ವ್ಯಕ್ತಿಗಳ ನಡುವೆ ನಡೆಯುತ್ತಿದೆ ಎಂದು ತಿರುಗೇಟು ನೀಡಿದ್ದಾರೆ.

ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಹೇಳಿಕೆ, ಇಸ್ಲಾಮಿಕ್ ಮೂಲಭೂತವಾದಿಗಳು ಜಾತ್ಯತೀತತೆಯ ಬಗ್ಗೆ ಮಾತನಾಡುವ ರೀತಿಯಿದೆ ಎಂದು ವ್ಯಂಗ್ಯವಾಡಿದ್ದಾರೆ. ಮತ್ತು ಇತರರು ವಿದೇಶಿ ಬೆಂಬಲ ಪಡೆಯುತ್ತಿದ್ದಾರೆ ಎಂದು ಆರೋಪಿಸುವುದು ಸ್ವತಃ ತಮಗೇ ಅಪಹಾಸ್ಯ ಮಾಡಿಕೊಂಡಂತೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಈ ಕುರಿತು ಎಕ್ಸ್​ನಲ್ಲಿ ರಾಹುಲ್ ಗಾಂಧಿಯವರ ಪೋಸ್ಟ್​ ಅನ್ನು ರಿಟ್ವೀಟ್ ಮಾಡಿ ಪೋಸ್ಟ್ ಹಾಕಿರುವ ಕಿರಣ್ ರಿಜಿಜು, ಇದು ಇಸ್ಲಾಮಿಕ್ ಮೂಲಭೂತವಾದಿಗಳು ಜಾತ್ಯತೀತತೆಯ ಬಗ್ಗೆ ಮಾತನಾಡುವುದು, ಪ್ರತ್ಯೇಕತಾವಾದಿಗಳು ಭಾರತದ ಧ್ವಜಗಳನ್ನು ಹಿಡಿದುಕೊಳ್ಳುವುದು ಮತ್ತು ಅರಾಜಕತಾವಾದಿಗಳು ಸಂವಿಧಾನದ ಪುಸ್ತಕವನ್ನು ಪ್ರದರ್ಶಿಸುವುದರಂತೆಯೇ ಇದೆ.

Also Read
ನಿಮಗೆ ತಾಕತ್ತಿದ್ರೆ ಬನ್ನಿ ಬಹಿರಂಗ ಚರ್ಚೆಗೆ! ಪ್ರಧಾನಿ ನರೇಂದ್ರ ಮೋದಿಗೆ ರಾಹುಲ್​ ಗಾಂಧಿ ಓಪನ್​ ಚಾಲೆಂಜ್ | Rahul Gandhi
ಕೇಂದ್ರ ಸಚಿವ ಕಿರಣ್ ರಿಜಿಜು ಮತ್ತು ರಾಹುಲ್ ಗಾಂಧಿ

ಭಾರತದ ಶತ್ರುಗಳ ಅಜೆಂಡಾಗಳನ್ನು ಮುಂದಿಟ್ಟುಕೊಂಡು, ಇತರರ ಮೇಲೆ ವಿದೇಶಿ ಬೆಂಬಲವಿದೆ ಎಂದು ಆರೋಪಿಸುವುದು ಹಾಸ್ಯಾಸ್ಪದವಾಗಿದೆ. ಉನ್ನತ ಮಟ್ಟದ ಚರ್ಚೆಗಳು ಪ್ರಬುದ್ಧ ವ್ಯಕ್ತಿಗಳ ನಡುವೆ ನಡೆಯುತ್ತವೆ ಎಂದು ಹೇಳಿದ್ದಾರೆ.

ರಾಹುಲ್ ಗಾಂಧಿ ಹೇಳಿದ್ದೇನು?

ಅ.31ರಂದು ಗುಜರಾತ್​ನಲ್ಲಿ ನಡೆದ ರಾಷ್ಟ್ರೀಯ ಏಕ್ತಾ ದಿವಸ್​ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಧಾನಿ ಮೋದಿ, "ಸರ್ಕಾರದ ನೀತಿಗಳನ್ನು ಪ್ರಶ್ನಿಸುವ ಪ್ರಜಾಸತ್ತಾತ್ಮಕ ಜವಾಬ್ದಾರಿಯನ್ನು ಪ್ರತಿಪಕ್ಷಗಳು ಕೈಬಿಟ್ಟು ಪ್ರತಿಬಂಧಕ ಶಕ್ತಿಯಾಗಿ ಮಾರ್ಪಟ್ಟಿವೆ. ದೇಶವನ್ನು ವಿಭಜಿಸಲು ಕೆಲವು ಶಕ್ತಿಗಳು ಪಿತೂರಿ ನಡೆಸುತ್ತಿವೆ. ವಿದೇಶದಲ್ಲಿರುವ ಭಾರತ ವಿರೋಧಿ ಸಂಬಂಧವನ್ನು ಮುಂದುವರೆಸಿ, ಸಾಮಾಜಿಕ ಮಾಧ್ಯಮಗಳ ಮೂಲಕ ವದಂತಿಗಳನ್ನು ಹರಡಲು ಮತ್ತು ಭಾರತದ ಇಮೇಜ್ ಅನ್ನು ಹಾಳುಗೆಡವಲು ಮುಂದಾಗಿದ್ದಾರೆ ಎಂದು ಆರೋಪಿಸಿದ್ದರು.

Also Read
ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧವೇ ಕಾಂಗ್ರೆಸ್​ ಪಾಳಯದಲ್ಲಿ ಬಿಗ್ ಸ್ಕೆಚ್? ಹೊಸ ಬಾಂಬ್​ ಸಿಡಿಸಿದ ಎಚ್‌ಡಿಕೆ! HD Kumaraswamy
ಕೇಂದ್ರ ಸಚಿವ ಕಿರಣ್ ರಿಜಿಜು ಮತ್ತು ರಾಹುಲ್ ಗಾಂಧಿ

ಇದಕ್ಕೆ ಕೌಂಟರ್ ನೀಡಿ ಎಕ್ಸ್​ನಲ್ಲಿ ಪೋಸ್ಟ್ ಹಾಕಿರುವ ರಾಹುಲ್ ಗಾಂಧಿ, ಮಿಸ್ಟರ್​ ಮೋದಿ, ಈ ದೇಶಕ್ಕೆ ಸುಳ್ಳು ಹೇಳುವುದನ್ನು ನಿಲ್ಲಿಸಿ. ನೀವು ಪ್ರಧಾನಿಯಾದದ್ದು ವಿದೇಶಿ ಸಹಾಯದಿಂದ. ಪ್ರಧಾನಿಯಾಗಿ ಮುಂದುವರಿದಿರುವುದೂ ವಿದೇಶಿ ಸಹಾಯದಿಂದಲೇ. ನಿಮ್ಮ ಆರ್ಥಿಕ ವ್ಯವಸ್ಥೆಯು ಸಂಪೂರ್ಣವಾಗಿ ವಿದೇಶಿಯರ ನಿಯಂತ್ರಣದಲ್ಲಿದೆ. ಮತ್ತು ಅವರ ಬೆಂಬಲವನ್ನು ಹೊಂದಿದೆ. ವಿದೇಶಿ ಸಾಮಾಜಿಕ ಜಾಲತಾಣಗಳು ನಿಮಗೆ ಸಂಪೂರ್ಣ ಬೆಂಬಲ ನೀಡುತ್ತಿವೆ.

ಈ ವಿಷಯದ ಕುರಿತು ಮುಕ್ತ ಚರ್ಚೆಗೆ ನಾನು ನಿಮಗೆ ಸವಾಲು ಹಾಕುತ್ತಿದ್ದೇನೆ. ಯಾವುದೇ ವೇದಿಕೆ, ಯಾವುದೇ ಸಮಯವಾಗಲಿ. ಧೈರ್ಯವಿದ್ದರೆ ಬನ್ನಿ. ಆದರೆ ನೀವು ಇದಕ್ಕೆ ಧೈರ್ಯ ಮಾಡಲಾರಿರಿ. ಯಾಕಂದರೆ, ನಿಮ್ಮ ಬಗ್ಗೆ ನನಗೆ ತಿಳಿದಿರುವ ವಿಷಯಗಳನ್ನು ಕಂಡು ನೀವು ಬೆಚ್ಚಿಬಿದ್ದಿದ್ದೀರಿ ಎಂದು ಹೇಳಿದ್ದಾರೆ (ಏಜೆನ್ಸೀಸ್).