ಸೋರಿಕೆಯಾದ ಮಾಹಿತಿಯಲ್ಲಿ ಕೆಲ ನೀಲಿನಕ್ಷೆಗಳು, ಸ್ಥಾವರಕ್ಕೆ ಬೇಕಾದ ಅಗತ್ಯ ವಸ್ತುಗಳನ್ನು ನೀಡುತ್ತಿದ್ದ ಪೂರೈಕೆದಾರರ ವಿವರಗಳು ಡಾರ್ಕ್ ವೆಬ್‌ನಲ್ಲಿ ಹಂಚಿಕೆಯಾಗಿದೆ ಎಂದು ಹೇಳಲಾಗುತ್ತದೆ. ಭಾರತದಲ್ಲರುವ ಏಳು ಅಣು ವಿದ್ಯುತ್ ಸ್ಥಾವರಗಳಲ್ಲಿ ತಮಿಳುನಾಡಿನಲ್ಲಿರುವ ಈ ಕೂಡಂಕುಳಂ ಪರಮಾಣು ವಿದ್ಯುತ್ ಸ್ಥಾವರ ಅತ್ಯಂತ ದೊಡ್ಡದಾಗಿದ್ದು, ಇಲ್ಲಿ ಈ ರೀತಿಯ ಘಟನೆ ನಡೆದಿರುವುದು ಚಿಂತೆಗೆ ಕಾರಣವಾಗಿದೆ.