ಈಗ ಸುಮ್ಮನಿದ್ದರೆ ಮುಂದೆ ಅವಕಾಶ ಸಿಗಲ್ಲ: ಅಯೋಧ್ಯೆ ಮುಗಿಯಿತು, ಈಗ ಮಥುರಾ ಸರದಿ; ಆಗಸ್ಟ್ 9 ಕ್ಕೆ ಸಂತರಿಂದ ಕರಸೇವೆ ಘೋಷಣೆ! Kar Seva in Mathura

ಆಗಸ್ಟ್ 9 ರಂದು ಮಥುರಾದಲ್ಲಿ ಕರಸೇವೆ ನಡೆಸುವುದಾಗಿ ಶ್ರೀ ಚಿತ್ರಗುಪ್ತ ಪೀಠದ ಜಗದ್ಗುರು ಘೋಷಣೆ
ಆಗಸ್ಟ್ 9 ರಂದು ಮಥುರಾದಲ್ಲಿ ಕರಸೇವೆ ನಡೆಸುವುದಾಗಿ ಶ್ರೀ ಚಿತ್ರಗುಪ್ತ ಪೀಠದ ಜಗದ್ಗುರು ಘೋಷಣೆ
Published on

ಪ್ರಮುಖ ಮುಖ್ಯಾಂಶಗಳು

  • ಅಯೋಧ್ಯೆ ಬೆನ್ನಲ್ಲೇ ಈಗ ಮಥುರಾ ಕೃಷ್ಣ ಜನ್ಮಭೂಮಿ ಮುಕ್ತಿಗೆ ಸಂತರ ಮಹಾ ಪ್ಲಾನ್!
  • ಆಗಸ್ಟ್ 9 ರಂದು ಮಥುರಾದಲ್ಲಿ ಕರಸೇವೆ ನಡೆಸುವುದಾಗಿ ಶ್ರೀ ಚಿತ್ರಗುಪ್ತ ಪೀಠದ ಜಗದ್ಗುರು ಘೋಷಣೆ
  • ಕೋರ್ಟ್‌ನಲ್ಲಿ ಮಥುರಾ ಕೃಷ್ಣ ಜನ್ಮಭೂಮಿ ಹಾಗೂ ಶಾಹಿ ಈದ್ಗಾ ಮಸೀದಿ ವಿವಾದದ ವಿಚಾರಣೆ ನಡೆಯುತ್ತಿರುವಾಗಲೇ ಕಾರಸೇವೆಗೆ ಮುಹೂರ್ತ ಫಿಕ್ಸ್
ಮಥುರಾ: ಭಾರತದಲ್ಲಿರುವ ಹಿಂದೂಗಳ ಪ್ರಮುಖ ಅಸ್ಮಿತೆ ಕೇಂದ್ರಗಳೆಂದರೆ ರಾಮಜನ್ಮಭೂಮಿ ಅಯೋಧ್ಯಾ, ಶ್ರೀಕೃಷ್ಣ ಜನ್ಮಭೂಮಿ ಮಥುರಾ ಹಾಗೂ ಮಹಾದೇವನ ಪುಣ್ಯಸ್ಥಳ ಕಾಶಿ. ಈ ಮೂರು ಕ್ಷೇತ್ರಗಳು ಹಿಂದೂಗಳಿಗೆ ಅತ್ಯಂತ ಪವಿತ್ರ ಕ್ಷೇತ್ರಗಳೆಂದು ಜನರಲ್ಲಿ ನಂಬಿಕೆಯಿದೆ. ಸುಮಾರು 500 ಕ್ಕೂ ಹೆಚ್ಚಿನ ವರ್ಷಗಳ ಸಂಘರ್ಷದ ನಂತರ ಅಯೋಧ್ಯೆಯಲ್ಲಿ ಶ್ರೀರಾಮನ ದೇವಸ್ಥಾನ ನಿರ್ಮಾಣವಾದ ನಂತರ ಈಗ ಮತ್ತೆ ಮಥುರಾವನ್ನು ಹಿಂದೂಗಳ ಹತೋಟಿಗೆ ಪಡೆಯುವ ಕೂಗ ಕೇಳಿ ಬರುತ್ತಿದೆ.
ಈ ಹಿನ್ನಲೆಯಲ್ಲಿ ಶ್ರೀ ಕೃಷ್ಣ ಜನ್ಮಭೂಮಿ ಮುಕ್ತಿ ಅಭಿಯಾನದ ಸಂತರು ಆಗಸ್ಟ್​​ 9 ರಂದು ಅಯೋಧ್ಯೆಯಲ್ಲಿ ಮಾಡಿದ ರೀತಿಯಲ್ಲಿಯೇ ಕರಸೇವೆಯನ್ನು (Kar Seva in Mathura) ಮಾಡುವುದಾಗಿ ಘೋಷಿಸಿರುವುದು ದೇಶದಲ್ಲಿ ತಲ್ಲಣವನ್ನು ಸೃಷ್ಟಿಸಿದೆ.

ಲಕ್ಷಾಂತರ ಸಂತರ ಆಗಮನ!

ಈ ಕುರಿತು ಮಾತನಾಡಿರು ಶ್ರೀ ಚಿತ್ರಗುಪ್ತ ಪೀಠದ ಜಗದ್ಗುರು ಡಾ. ಸ್ವಾಮಿ ಸಚ್ಚಿದಾನಂದ, ಆಗಸ್ಟ್​​ 9 ರಂದು ಮಥುರಾದ ಭ್ರಜ್​ನಲ್ಲಿ ಕರಸೇವೆ ನಡೆಯಲಿದೆ ಎಂದು ಘೋಷಿಸಿದ್ದಾರೆ. ಈ ಕಾರ್ಯಕ್ರಮಕ್ಕೆ ದೇಶದ ಮೂಲೆ-ಮೂಲೆಯಿಂದ ಲಕ್ಷಾಂತರ ಸಂತರು ಆಗಮಿಸಲಿದ್ದು, ಶ್ರೀ ಕೃಷ್ಣನ ಜನ್ಮಭೂಮಿಗೆ ಯಾವ ಸ್ಥಾನ ದೊರೆಯಬೇಕೋ ಅದು ದೊರೆಯಲಿದೆ. ಸರ್ಕಾರ ಇದರ ಬಗ್ಗೆ ಮುಂದಿನ ದಿನಗಳಲ್ಲಿ ಚಿಂತನೆ ನಡೆಸಲಿ ಮೊದಲು ನಮ್ಮಿಂದ ಹೋರಾಟ ಆರಂಭವಾಗಲಿದೆ ಎಂದು ಹೇಳಿದ್ದಾರೆ.
ಇದೇ ಸರಿಯಾದ ಸಮಯ!
ಮಾನಸ ದೇವಿ ಟ್ರಸ್ಟ್​ನ ಅಧ್ಯಕ್ಷ ಮಹಾಂತ ರವೀಂದ್ರ ಪುರಿ, ಅಯೋಧ್ಯೆ ಸಮಸ್ಯೆ ಪರಿಹಾರವಾಗಿದೆ, ಈಗ ನಾವು ಮಥುರಾ ಕಡೆ ಗಮನ ಕೊಡಬೇಕು. ಇದೇ ಸರಿಯಾದ ಸಮಯವಾಗಿದ್ದು, ಶ್ರೀ ಕೃಷ್ಣನ ದೇವಸ್ಥಾನ ಮುಥುರಾದಲ್ಲಿ ನಿರ್ಮಾಣವಾಗಲೇ ಬೇಕು. ಈಗ ನಾವು ಸುಮ್ಮನಿದ್ದರೆ, ಮುಂದೆ ನಮಗೆ ಅವಕಾಶ ದೊರೆಯುವುದಿಲ್ಲ ಎಂದು ಅವರು ಹೇಳಿದ್ದಾರೆ.
ಸದ್ಯ ಶ್ರೀ ಕೃಷ್ಣ ಜನ್ಮಭೂಮಿ ಮತ್ತು ಶಾಹಿ ಈದ್ಗಾ ಮಸೀದಿ ನಡುವಿನ ಪ್ರಕರಣವು ಅಲಹಾಬಾದ್​ ಹೈಕೋರ್ಟ್​ ಹಾಗೂ ಸುಪ್ರೀಂ ಕೋರ್ಟ್​ನಲ್ಲಿ ವಿಚಾರಣೆ ನಡೆಯುತ್ತಲೇ ಇದೆ. ಆದರೆ ನಾವೆಲ್ಲಾ ಸನಾತನಿಗಳು ಒಂದಾದರೆ ನಮ್ಮ ಮಥುರಾದಲ್ಲಿ ಕೂಡ ನಮಗೆ ಜಯ ದೊರೆಯಲಿದೆ ಎಂದು ಅವರು ಹೇಳಿದ್ದಾರೆ, (ಏಜನ್ಸೀಸ್​). ​
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net