ಮೂವರು ಸಹೋದರಿಯನ್ನು ಬಲಿ ಪಡೆದ "ಕೊರಿಯನ್​ ಲವ್​ ಗೇಮ್​" ಹಿಂದಿದೆ ಈ ಡೇಜರಸ್​ ಮುಖ....Korean Love Game

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on

ಪ್ರಮುಖ ಮುಖ್ಯಾಂಶಗಳು

  • ಗಾಜಿಯಾಬಾದ್​ನಲ್ಲಿ ಮೂವರು ಸಹೋದರಿಯರ ಆತ್ಮಹತ್ಯೆ
  • ಅಪಾರ್ಟ್​ಮೆಂಟಿನ ಒಂಭತ್ತನೇ ಮಹಡಿಯಿಂದ ಜಗಿದ ಮೂವರು ಸಹೋದರಿಯರು
  • ಇವರ ಸಾವಿಗೆ ಕೊರಿಯನ್​ ಲವ್​ ಗೇಮ್​ ಎನ್ನುವು ಆಟವೇ ಕಾರಣ ಎಂದು ಅನುಮಾನ
  • 2017 ರಲ್ಲಿ ಇದೇ ರೀತಿಯ ಬ್ಲೂವೇಲ್​ ಎಂಬ ಗೇಮ್​ ಮಕ್ಕಳನ್ನು ಬಲಿ ಪಡೆದಿತ್ತು
ಗಾಜಿಯಾಬಾದ್‌: ಗಾಜಿಯಾಬಾದ್‌ನಲ್ಲಿ ಮೂವರು ಸಹೋದರಿಯರ ದುರಂತ ಸಾವುಗಳು ಈದೀಗ ದೇಶದಾದ್ಯಂತ ಸಂಚಲನಕ್ಕೆ ಕಾರಣವಾಗಿದ್ದು, ಈ ಮೂರು ಬಾಲಕಿಯರ ಸಾವಿಗೆ ಕೊರಿಯನ್​ ಪ್ರೇಮ ಆಟ (Korean Love Game) ಎಂಬ ಗೇಮ್​ ಕಾರಣ ಎಂದು ಹೇಳಲಾಗುತ್ತಿದೆ.
ಮೂಲಗಳು ಹೇಳುವಂತೆ ಮೂವರು ಸಹೋದರಿಯರು ಈ ಆಟಕ್ಕೆ ವ್ಯಸನಿಗಳಾಗಿದ್ದು, ಕಳೆದ ಎರಡೂ ವರ್ಷಗಳಿಂದ ಶಾಲೆಗೆ ಹೋಗುವುದನ್ನು ಸಹ ಬಿಟ್ಟಿದ್ದರು ಎಂಬ ಸ್ಪೋಟಕ ಮಾಹಿತಿ ಲಭ್ಯವಾಗಿದೆ. ಈ ಆಟದ ಕೊನೆಯ ಹಂತವಾದ ಎತ್ತರದ ಸ್ಥಳದಿಂದ ಜಿಗಿಯುವ ಟಾಸ್ಕ್​ನ್ನು ಮಾಡಲು ಮುಂದಾದ ಬಾಲಕಿಯರು ಹೆಣವಾಗಿದ್ದಾರೆ.
ಮೃತ ಸಹೋದರಿಯರನ್ನು ವಿಶಿಕಾ (16), ಪ್ರಾಚಿ (14), ಮತ್ತು ಪಖಿ (12) ಎಂದು ಗುರುತಿಸಲಾಗಿದ್ದು, ಬುಧವಾರ (ಫೆ.4) ಬೆಳಗಿನ ಜಾವ 2.15 ಕ್ಕೆ ತಮ್ಮ ಒಂಬತ್ತನೇ ಮಹಡಿಯ ಅಪಾರ್ಟ್‌ಮೆಂಟ್‌ನಿಂದ ಜಿಗಿಯುವ ಮೂಲಕ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನಂತರ ಸ್ಥಳಕ್ಕೆ ಬಂದ ಪೊಲೀಸರಿಗೆ ಅಪ್ಪಾ ನಮ್ಮನ್ನು ಕ್ಷಮಿಸಿ ಎಂಬ ಡೆತ್​ನೋಟ್​ ಸಿಕ್ಕಿದೆ ಎಂಬ ಮಾಹಿತಿಯಿದೆ.

ಈ ರೀತಿಯ ಘಟನೆ ಭಾರತಕ್ಕೆ ಹೊಸತೇನಲ್ಲ

ಇದೇ ರೀತಿಯ ಅಪಾಯಕಾರಿ ಆಟವೊಂದು 2017 ರಲ್ಲಿ ಭರ್ಜರಿ ಸುದ್ದಿಯ ಜತೆಗೆ ಭಾರಿ ಪ್ರಮಾಣದ ಬಲಿಯನ್ನು ಪಡೆದಿತ್ತು. ಆ ಆಟದ ಹೆಸರು ಬ್ಲೂವೇಲ್​ ಅಥವಾ ನೀಲಿ ತಿಮಿಂಗಿಲ ಸವಾಲು. ಗಾಜಿಯಾಬಾದಿನ ಈ ಸಹೋದರಿತರ ಸಾವು ಈಗ ಎಲ್ಲರಿಗೂ ಬ್ಲೂವೇಲ್​ ಗೇಮ್​ನ್ನು ಮತ್ತೆ ನೆನಪಿಗೆ ತರಿಸಿದೆ. ಆ ಗೇಮ್​ನಲ್ಲಿ ಸಹ ತಮ್ಮನ್ನು ತಾವೇ ದಂಡಿಸಿಕೊಳ್ಳುವ ಚಾಲೆಂಜ್​ಗಳನ್ನು ನೀಡಲಾಗುತ್ತಿತ್ತು. ಆಟದ ಕೊನೆಯ ಹಂತದಲ್ಲಿ ಎತ್ತರದ ಸ್ಥಳದಿಂದ ಜಿಗಿದು ಪ್ರಾಣ ಬಿಟ್ಟರೆ ಆಟ ಕೊನೆಗೊಳ್ಳುತ್ತಿತ್ತು.

ಏನಿದು ಕೊರಿಯನ್ ಪ್ರೇಮ ಆಟ?

ಗಾಜಿಯಾಬಾದ್ ತನಿಖೆಯ ನಿಕಟ ಮೂಲಗಳು ಹೇಳುವಂತೆ ಆಟವು ಅಪರಿಚಿತ ವ್ಯಕ್ತಿಯೊಬ್ಬ ಮಗುವಿನೊಂದಿಗೆ ಸಾಮಾಜಿಕ ಮಾಧ್ಯಮದಲ್ಲಿ ಅಥವಾ ಕೆಲವು ಮೊಬೈಲ್ ಅಪ್ಲಿಕೇಶನ್‌ಗಳ ಮೂಲಕ ಸಂಭಾಷಣೆಯನ್ನು ಪ್ರಾರಂಭಿಸುವುದರೊಂದಿಗೆ ಆಟ ಪ್ರಾರಂಭವಾಗುತ್ತದೆ.
ಈ ವ್ಯಕ್ತಿಯು ಕೊರಿಯನ್ ಅಥವಾ ಕನಿಷ್ಠ ಪಕ್ಷ ವಿದೇಶಿ ಪ್ರಜೆ ಎಂದು ಹೇಳಿಕೊಂಡು ಸ್ನೇಹ ಮತ್ತು ಪ್ರೀತಿಯ ಬಗ್ಗೆ ಮಾತನಾಡುತ್ತಾನೆ. ಇದರ ನಂತರ, ಸ್ವಲ್ಪ ನಂಬಿಕೆಯನ್ನು ಸ್ಥಾಪಿಸಿದ ನಂತರ, ಮಕ್ಕಳಿಗೆ ಒಂದೊಂದೆ ಟಾಸ್ಕ್​ಗಳನ್ನು ನೀಡಲು ಪ್ರಾರಂಭಿಸುತ್ತಾನೆ. ಮೊದ ಮೊದಲ ಸವಾಲುಗಳು ತೀರಾ ಸುಲಭವಾಗಿರುತ್ತವೆ (ಉದಾ: ಮಧ್ಯರಾತ್ರಿ ಏಳುವುದು)
ನಂತರ ಆಟದ ಹಂತಗಳು ಏರಿಕೆಯಾದಂತೆ ಸವಾಲುಗಳ ತೀವ್ರತೆ ಸಹ ಹೆಚ್ಚುತ್ತಾ ಹೋಗುತ್ತದೆ. ಈ ಆಟವನ್ನು ಒಮ್ಮೆ ಪ್ರಾರಂಭಿಸಿದರೆ ಸತತ 50 ದಿನಗಳವರೆಗೆ ಆಟವನನ್ನು ಆಡಲೇ ಬೇಕಾಗುತ್ತದೆ. ಒಂದು ವೇಳೆ ಆಟವನ್ನು ಅರ್ಧಕ್ಕೆ ನಿಲ್ಲಿಸಲು ಮುಂದಾದರೆ ಗೇಮ್ ಮಾಸ್ಟರ್, ಬ್ಲಾಕ್​ಮೇಲ್​ ಮಾಡಲು ಪ್ರಾರಂಭಿಸುತ್ತಾನೆ ಎಂದು ಮೂಲಗಳು ತಿಳಿಸಿವೆ.
ಹೀಗೆ ಗೇಮ್ ಮಾಸ್ಟರ್​ನ ಜಾಲಕ್ಕೆ ಬಿದ್ದವರು ಅವನು ನೀಡುವ ಕ್ರೂರ, ಹಿಂಸಾತ್ಮಕ ಮತ್ತು ಸಹನಿಯವಲ್ಲದ ಎಲ್ಲಾ ಹಂತಗಳನ್ನು ದಾಟಿದ ಮೇಲೆ ಕೊನೆಯ ಹಂತ ಅಂದರೆ 50 ನೇ ದಿನದ ಟಾಸ್ಕ್​ಆಗಿ ಎತ್ತರದ ಸ್ಥಳದಿಂದ ಜಿಗಿಯುವಂತೆ ಆದೇಶಿಸುತ್ತಾನೆ. ಈ ಆದೇಶವನ್ನು ಪಾಲಿಸಿದ ಗಾಜಿಯಾಬಾದ್​ನ ಮೂರು ಸಹೋದರಿಯರು ಇಂದು ನಮ್ಮ ಮುಂದೆ ಹೆಣವಾಗಿದ್ದಾರೆ. ಆದರೆ ಇಲ್ಲಿಯವರೆಗೆ ಈ ಆಟದಿಂದಲೇ ಮೂರು ಸಹೋದರಿಯರ ಪ್ರಾಣ ಹೋಗಿದೆ ಎಂದು ಸಾಬೀತಾಗಿಲ್ಲವಾದರೂ, ತನ್ನ ಮಕ್ಕಳು ಯಾವಾಗ ಕೇಳಿದರೂ, " ನಾವು ಕೊರಿಯನ್​ ಗೇಮ್​, ಆಡುತ್ತಿದ್ದೆವೆ ಅಪ್ಪಾ" ಎಂದು ತನ್ನ ಮಕ್ಕಳು ಹೇಳುತ್ತಿದ್ದರು, ಎಂದು ಮೃತ ಮಕ್ಕಳ ತಂದೆ ಪೊಲಿಸರಿಗೆ ಮಾಹಿತಿ ನೀಡಿದ್ದಾರೆ.

ಏನಿದು ಬ್ಲೂವೇಲ್​ ಗೇಮ್​?

ರಷ್ಯಾ ನಿರ್ಮಿತ ಸಾಹಸಮಯ ಆಟ ಎಂದು ನಂಬಲಾಗಿರುವ ನೀಲಿ ತಿಮಿಂಗಿಲ ಸವಾಲು ಸಹ 2017 ರ ಸಮಯದಲ್ಲಿ ಭಾರತದಲ್ಲಿ ಅನೇಕ ಮಕ್ಕಳ ಸಾವಿಗೆ ಕಾರಣವಾಗಿತ್ತು. ಈ ಆಟವು ಸಹ 50 ಹಂತಗಳನ್ನು ಹೊಂದಿದ್ದು, 50 ನೇ ಹಂತದ ಸವಾಲಾಗಿ ಎತ್ತರದ ಸ್ಥಳದಿಂದ ಜಿಗಿಯುವ ಆದೇಶವನ್ನು ನೀಡಲಾಗುತ್ತಿತ್ತು. ಒಂದು ವೇಳೆ ಜಿಗಿಯದ ಪಕ್ಷದಲ್ಲಿ ಆಟ ಆಡುತ್ತಿದ್ದ ಮಗುವಿನ ಅಶ್ಲೀಲ ಚಿತ್ರಗಳನ್ನು ಹರಿಬಿಡುವುದಾಗಿ, ಅವರ ತಂದೆ-ತಾಯಿಯರನ್ನು ಸಾಯಿಸುವುದಾಗಿ ಬ್ಲಾಕ್​ಮೇಲ್​ ಮಾಡಲಾಗುತ್ತಿತ್ತು.
2017 ರಲ್ಲಿ ಮುಂಬೈನಲ್ಲಿ 15 ವರ್ಷದ ಬಾಲಕನೊಬ್ಬ ಕಟ್ಟಡವೊಂದರ 14 ನೇ ಮಹಡಿಯಿಂದ ಹಾರಿ ಸಾವನ್ನಪ್ಪಿದನು. ಆ ಹುಡುಗನ ಸಾವಿನ ಕುರಿತು ವಿಚಾರಣೆ ನಡೆಸಿದ ಪೊಲೀಸರು ಈ ಬ್ಲೂವೇಲ್​ ಆಟದ ಜಾಲವನ್ನು ಬೇದಿಸಿದರು,(ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net