ಇದು ನಾರಿ ಶಕ್ತಿ ಬಿಲ್ ಅಲ್ಲ, ಬಿಜೆಪಿ ಶಕ್ತಿ ಬಿಲ್..! ಮಹಿಳಾ ಮೀಸಲಾತಿ ಮಸೂದೆಗೆ ಸಂಜಯ್​ ರಾವತ್​ ವಿರೋಧ! Sanjay Raut on Women Reservation Bill

ಇದು ನಾರಿ ಶಕ್ತಿ ಬಿಲ್​ ಅಲ್ಲ, ಬಿಜೆಪಿ ಶಕ್ತಿ ಬಿಲ್​: ಸಂಜಯ್​ ರಾವತ್​
ಇದು ನಾರಿ ಶಕ್ತಿ ಬಿಲ್​ ಅಲ್ಲ, ಬಿಜೆಪಿ ಶಕ್ತಿ ಬಿಲ್​: ಸಂಜಯ್​ ರಾವತ್​
Published on

ಪ್ರಮುಖ ಮುಖ್ಯಾಂಶಗಳು

  • ಕೇಂದ್ರ ಸರ್ಕಾರದಿಂದ ಮಹಿಳಾ ಮೀಸಲಾಗಿ ಬಿಲ್​ ಮಂಡನೆ
  • ಇದು ನಾರಿ ಶಕ್ತಿ ಬಿಲ್​ ಅಲ್ಲ, ಬಿಜೆಪಿ ಶಕ್ತಿ ಬಿಲ್​: ಸಂಜಯ್​ ರಾವತ್​
  • ವಿರೋಧ ಪಕ್ಷಗಳು ಈ ಮಸೂದೆಯ ವಿರುದ್ಧ ಮತ ಚಲಾಯಿಸಲಿವೆ
ಮಹಾರಾಷ್ಟ್ರ: ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಇಂದಿನಿಂದ (ಏ.16) ಸಂಸತ್ತಿನಲ್ಲಿ ಮಹಿಳಾ ಮೀಸಲಾತಿ ಮತ್ತು ಡಿಲೀಮಿಟೇಶನ್​ ಮಸೂದೆಯನ್ನು ಜಾರಿಗೆ ತರಲು ಮುಂದಾಗಿದ್ದು, ಈ ಮಸೂದೆಯನ್ನು ವಿರೋಧ ಪಕ್ಷಗಳು ತೀವ್ರವಾಗಿ ವಿರೋಧಿಸುತ್ತಿವೆ.
ನಮಗೆ ಮಹಿಳಾ ಮೀಸಲಾತಿ ಬಗ್ಗೆ ಯಾವುದೇ ಆಕ್ಷೇಪವಿಲ್ಲ, ಈ ಮಸೂದೆಯನ್ನು 2023 ರಲ್ಲಿಯೇ ಅಂಗೀಕಾರ ಮಾಡಲಾಗಿದೆ. ಆದರೆ ಈ ಮಸೂದೆಯ ಅಡಿಯಲ್ಲಿ ಡಿಲೀಮಿಟೇಶನ್​ನ್ನು ಸೇರಿಸಲು ಹೋಗುತ್ತಿರುವುದನ್ನು ನಾವು ಒಪ್ಪಲು ಸಾಧ್ಯವಿಲ್ಲ ಎಂದು ಶಿವ ಸೇನಾ (ಉದ್ದವ್​ ಠಾಕ್ರೆ ಬಣ) ಸಂಸದ ಸಂಜಯ್​ ರಾವತ್ (Sanjay Raut on Women Reservation Bill) ​ ಕಿಡಿಕಾರಿದ್ದಾರೆ.

ಇದು ವುಮೆನ್ ಪವರ್​ ಬಿಲ್​ ಅಲ್ಲ; ಬಿಜೆಪಿ ಪವರ್​ ಬಿಲ್​!

ನೀವು ಲೋಕಸಭಾ ಸೀಟ್​ಗಳನ್ನು 800 ಕ್ಕೆ ಹೆಚ್ಚಿಸಿದರೆ, ಮಹಾರಾಷ್ಟ್ರದ ವಿಧಾನಸಭಾ ಸೀಟ್​ಗಳನ್ನು 400 ಕ್ಕೆ ಏರಿಸ ಬೇಕಾಗುತ್ತದೆ. ಇದರ ಅಗತ್ಯವೇನೆಂದ ನನಗೆ ಈ ವರೆಗೆ ಅರ್ಥವಾಗಿಲ್ಲ. ನೀವು ಮಹಿಳೆಯರಿಗೆ ಶೇ.33 ರಷ್ಟು ಮೀಸಲಾತಿ ನೀಡಬೇಕೆಂದು ಬಯಸಿದ್ದರೆ ಇಗಿರುವ 545 ಸಂಸದ ಸ್ಥಾನದಲ್ಲಿಯೇ ಶೇ.33 ಸೀಟ್​ಗಳನ್ನು ಮಹಿಳೆಯರಿಗೆ ನೀಡಿದರೆ ಆಯಿತಪ್ಪ. ಆದರೆ ನೀನು ನಿಮ್ಮ ಮನಸ್ಸಗೆ ಬಂದ ರಾಜನೀತಿ ಮಾಡುತ್ತಿರಿ, ಇದು ಖಂಡಿತವಾಗಿ ನಾರಿ ಶಕ್ತಿ ಬಿಲ್​ ಅಲ್ಲ ಇದು ಬಿಜೆಪಿ ಶಕ್ತಿ ಬಿಲ್​ ಎಂದು ರಾವತ್​ ಹೇಳಿದ್ದಾರೆ.
ನಾವು ಈ ಬಿಲ್​ನ್ನು ಒಪ್ಪುವುದಲ್ಲ
ನಾವು ಈ ಮಸೂದೆಯನ್ನು ಯಾವುದೇ ಕಾರಣಕ್ಕೂ ಒಪ್ಪಲು ಸಾಧ್ಯವಿಲ್ಲ. ನಿನ್ನೆ ನಾವು ಮಲ್ಲಿಕಾರ್ಜುನ್​ ಖರ್ಗೆ ಅವರ ನೇತೃತ್ವದಲ್ಲಿ ಸಭೆ ನಡೆಸಿದ್ದೆವು. ಅದರಲ್ಲಿ ರಾಹುಲ್​ ಗಾಂಧಿ ಮತ್ತು ನಮ್ಮ ಪಕ್ಷದ ಮುಖ್ಯಸ್ಥರಾದ ಉದ್ದವ್​ ಠಾಕ್ರೆ ಸಹ ಹಾಜರಿದ್ದರು. ಅಲ್ಲಿ ನಾವು, ಶಿವಸೇನೆ (ಉದ್ದವ್​ ಬಣ), ಡಿಎಂಕೆ, ಟಿಎಂಸಿ, ಕಾಂಗ್ರೆಸ್​, ಸಿಪಿಐ(ಎಂ) ಮೊದಲಾದ ಪಕ್ಷಗಳು ಈ ಮಸೂದೆಗೆ ವಿರುದ್ಧವಾಗಿ ಮತ ಚಲಾಯಿಸುವುದಾಗಿ ಹೇಳಿಕೆ ನೀಡಿವೆ ಎಂದು ರಾಜ್ಯಸಭಾ ಸಂಸದ ಸಂಜಯ್​ ರಾವತ್​ ತಿಳಿಸಿದ್ದಾರೆ, (ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net