ಕೋವಿಡ್​ ಲಸಿಕೆಗಳೇ ನನ್ನ ಅಪ್ಪನನ್ನು ಕೊಂದವು: ಶೇನ್​ ವಾರ್ನ್​ ಸಾವಿನ ಬಗ್ಗೆ ಮನ ಬಿಚ್ಚಿ ಮಾತನಾಡಿದ ಮಗ ಜಾಕ್ಸನ್! Jackson Warne on Shane Warne Death

ನನ್ನ ಅಪ್ಪನ ಸಾವಿಗೆ ಕೋವಿಡ್​ ಲಸಿಕೆಯೆ ಕಾರಣ ಎಂದ ವಾರ್ನ್ ಪುತ್ರ​
ನನ್ನ ಅಪ್ಪನ ಸಾವಿಗೆ ಕೋವಿಡ್​ ಲಸಿಕೆಯೆ ಕಾರಣ ಎಂದ ವಾರ್ನ್ ಪುತ್ರ​
Published on

ಪ್ರಮುಖ ಮುಖ್ಯಾಂಶಗಳು

  • 2022 ರಲ್ಲಿ ಮರಣ ಹೊಂದಿದ್ದ ಆಸ್ಟ್ರೆಲೀಯಾದ ದಿಗ್ಗಜ ಆಟಗಾರ ಶೇನ್​ ವಾರ್ನ್​
  • ನನ್ನ ಅಪ್ಪನ ಸಾವಿಗೆ ಕೋವಿಡ್​ ಲಸಿಕೆಯೆ ಕಾರಣ ಎಂದ ವಾರ್ನ್ ಪುತ್ರ​
  • ಈ ಮಾತನ್ನು ನಾನು ಆ ದಿನ ಹೇಳಿದ್ದರೆ ಸರ್ಕಾರ ನನ್ನ ಮೇಲೆ ಕ್ರಮ ಕೈಗೊಳ್ಳುತ್ತಿತ್ತು
ಮೆಲ್ಬೋರ್ನ್​: ಆಸ್ಟ್ರೆಲೀಯಾದ ಮಾಜಿ ಆಟಗಾರ ಶೇನ್​ ವಾನ್ ಮಾರ್ಚ್​ 4, 2022 ರಂದು ತಮ್ಮ 52 ನೇ ವಯಸ್ಸಿಗೆ ಅಕಾಲಿಕ ಮರಣ ಹೊಂದಿದರು. ಆದರೆ ಈಗ ತಂದೆ ಸಾವಿನ ನಾಲ್ಕು ವರ್ಷಗಳ ನಂತರ ವಾರ್ನ್​ ಮಗ ಜಾಕ್ಸನ್ (Jackson Warne on Shane Warne Death) ತನ್ನ ತಂದೆ ಸಾವಿಗೆ ಕೋವಿಡ್​ ಲಸಿಕೆಯೇ ಕಾರಣ ಎಂಬ ಶಾಕಿಂಗ್​ ಹೇಳಿಕೆ ನೀಡಿದ್ದಾನೆ.

ಸರ್ಕಾರದ ಮೇಲಿದೆ ಜಾಕ್ಸನ್ ಸಿಟ್ಟು

ಇತ್ತೀಚೆಗೆ 2 ವರ್ಲ್ಡ್ಸ್ ಕೊಲೈಡ್ ಎಂಬ ಪಾಡ್‌ಕ್ಯಾಸ್ಟ್‌ನಲ್ಲಿ ಮನ ಬಿಚ್ಚಿ ಮಾತನಾಡಿದ ಜಾಕ್ಸನ್, ತನ್ನ ತಂದೆಯ ಸಾವಿಗೆ ಕೋವಿಡ್ ಲಸಿಕೆಗಳೇ ಕಾರಣವಾಗಿರಬಹುದು ಎಂಬ ಸಂಶಯ ವ್ಯಕ್ತಪಡಿಸಿದ್ದಾರೆ. ನನ್ನ ತಂದೆ ಸಾವನ್ನಪ್ಪಿದ ಸುದ್ದಿ ಕೇಳಿದ ತಕ್ಷಣ ಫೋನ್ ಕೆಳಗಿಟ್ಟು ನಾನು ಮೊದಲು ಬೈದಿದ್ದು ಸರ್ಕಾರವನ್ನು ಅಪ್ಪನ ಸಾವಿಗೆ ಲಸಿಕೆಯೇ ಕಾರಣ ಎಂದು ನನಗೆ ಅಂದೇ ಅನ್ನಿಸಿತ್ತು ಎಂದು ಆಕ್ರೋಶ ಹೊರಹಾಕಿದ್ದಾರೆ.
ಲಸಿಕೆ ಪಡೆಯಲು ವಾರ್ನ್‌ಗೆ ಇಷ್ಟವಿರಲಿಲ್ಲ!
ಜಾಕ್ಸನ್ ಹೇಳುವ ಪ್ರಕಾರ, ಶೇನ್ ವಾರ್ನ್ ಅವರಿಗೆ ಕೋವಿಡ್ ಲಸಿಕೆ ತೆಗೆದುಕೊಳ್ಳುವುದು ಇಷ್ಟವಿರಲಿಲ್ಲವಂತೆ. ಅಪ್ಪನಿಗೆ ಲಸಿಕೆ ಮೇಲೆ ನಂಬಿಕೆ ಇರಲಿಲ್ಲ. ಆದರೆ ಕೆಲಸದ ನಿಮಿತ್ತ ಅನಿವಾರ್ಯವಾಗಿ ಅವರು 3 ಅಥವಾ 4 ಡೋಸ್ ಲಸಿಕೆಗಳನ್ನು ಪಡೆದಿದ್ದರು. ಅವರಿಗೆ ಮೊದಲೇ ಕೆಲವು ಸಣ್ಣಪುಟ್ಟ ಆರೋಗ್ಯ ಸಮಸ್ಯೆಗಳಿದ್ದವು ನಿಜ. ಆದರೆ ಈ ಲಸಿಕೆಗಳು ಆ ಸಮಸ್ಯೆಗಳನ್ನು ಉಲ್ಬಣಗೊಳಿಸಿ ಮೇಲ್ಮೈಗೆ ತಂದವು ಎಂದು ನಾನು ಬಲವಾಗಿ ನಂಬುತ್ತೇನೆ ಎಂದು ಜಾಕ್ಸನ್ ಹೇಳಿದ್ದಾರೆ.

ಕೋಪ ತರಿಸುವ ಆ ಸತ್ಯ!

ತಮ್ಮ ತಂದೆಯ ಸ್ಮಾರಕ ಸಮಾರಂಭದಲ್ಲಿ ಈ ವಿಚಾರವನ್ನು ಬಹಿರಂಗವಾಗಿ ಹೇಳಲು ಜಾಕ್ಸನ್ ನಿರ್ಧರಿಸಿದ್ದರಂತೆ. ಆದರೆ ಅಂದಿನ ಪರಿಸ್ಥಿತಿ ಗಮನಿಸಿ ಅವರು ಸುಮ್ಮನಾಗಿದ್ದರು. ನಾನೇನಾದರೂ ಅಂದು ಈ ಬಗ್ಗೆ ಮಾತನಾಡಿದ್ದರೆ ಇವತ್ತು ಪರಿಸ್ಥಿತಿಯೇ ಬೇರೆ ಇರುತ್ತಿತ್ತು.
ಮೊದಲೆಲ್ಲಾ ಹೃದಯಾಘಾತದಿಂದ ಸಾಯುವವರ ಸಂಖ್ಯೆ ಇಷ್ಟೊಂದು ಇರಲಿಲ್ಲ. ಅಪ್ಪ ಚೆನ್ನಾಗಿಯೇ ಇದ್ದರು, ಆದರೆ ಲಸಿಕೆ ಪಡೆದ ಮೇಲೆ ಎಲ್ಲವೂ ಬದಲಾಯಿತು. ಇದರ ಬಗ್ಗೆ ಹೆಚ್ಚು ಯೋಚಿಸಿದರೆ ನನಗೆ ಸಿಟ್ಟು ಬರುತ್ತದೆ, ಆ ಸಿಟ್ಟು ಯಾರಿಗೂ ಒಳ್ಳೆಯದಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ, (ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net