ಇದೊಂದು ಕೇರಳ ವಿರೋಧಿ ಪ್ರೊಪಗಾಂಡಾ: ದಿ ಕೇರಳ ಸ್ಟೋರಿ 2 ಸಿನಿಮಾವನ್ನು ಬಹಿಷ್ಕರಿಸಲು ಸಿಎಂ ಪಿಣರಾಯಿ ವಿಜಯನ್​ ಕರೆ | The Kerala Story 2

 ದಿ ಕೇರಳ ಸ್ಟೋರಿ 2, ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್
ದಿ ಕೇರಳ ಸ್ಟೋರಿ 2, ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್
Published on

ಪ್ರಮುಖ ಮುಖ್ಯಾಂಶಗಳು

  • ಫೆ. 27 ರಂದು ಬಿಡುಗಡೆಯಾಗಲಿರುವ ದಿ ಕೇರಳ ಸ್ಟೋರಿ 2
  • ಈ ಸಿನಿಮಾ ಕೇರಳ ವಿರೋಧಿ ಮನೋಭಾವ ಹೊಂದಿದೆ : ಪಿಣರಾಯಿ ವಿಜಯನ್​
  • ಈ ಸಿನಿಮಾವನ್ನು ಸಾರ್ವಜನಿಕವಾಗಿ ಬಹಿಷ್ಕರಿಸಲು ಸಿಎಂ ಕರೆ
ಕೇರಳ: ಇತ್ತೀಚೆಗೆ ಬಿಡುಗಡೆಯಾದ ದಿ ಕೇರಳ ಸ್ಟೋರಿ 2 (The Kerala Story 2) ಸಿನಿಮಾದ ಟ್ರೇಲರ್​ಗೆ ಪ್ರತಿಕ್ರಿಯಿಸಿರುವ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್​, ಈ ಸಿನಿಮಾ ಕೇರಳದಲ್ಲಿರುವ ಜಾತ್ಯಾತೀತ ಮನೋಭಾವನೆಯನ್ನು ಹಾಳು ಮಾಡುವ ಉದ್ದೇಶವನ್ನು ಹೊಂದಿದೆ ಎಂದು ಹೇಳಿದ್ದಾರೆ.
ಈ ಸಿನಿಮಾವು ರಾಜ್ಯದಲ್ಲಿ ದ್ವೇಷ ಭಾವನೆಯನ್ನು ಹೆಚ್ಚಸುವ ಮತ್ತು ಜಾತ್ಯತೀತೆಯನ್ನು ಹಾಳುಗೆಡುವುವ ದುರುದ್ದೇಶಪೂರಿತ ಸಿನಿಮಾವಾಗಿದ್ದು, ಇದೊಂದಿ ಪ್ರೊಪಗಾಂಡ ಸಿನಿಮಾ ಎಂದು ಹೇಳಿದ್ದಾರೆ.
ಈ ಸಿನಿಮಾದ ಮೂಲಕ ಕೇರಳ ರಾಜ್ಯದ ಬಗ್ಗೆ ಸುಳ್ಳು, ದ್ವೇಷ ಕೇರಳ ವಿರೋಧಿ ಮನೋಭಾವವನ್ನು ದೇಶದಾದ್ಯಂತ ಹುಟ್ಟಿಸುವ ಉದ್ದೇಶವನ್ನು ಈ ಸಿನಿಮಾ ಹೊಂದಿದೆ ಎಂದು ಕೇರಳ ಮುಖ್ಯಮಂತ್ರಿ ಆಕ್ರೋಶವನ್ನು ಹೊರಹಾಕಿದ್ದಾರೆ. ಈ ಚಲನಚಿತ್ರವು ಬಲವಂತದ ಮತಾಂತರದ ಕುರಿತು ತಪ್ಪು ಮಾಹಿತಿಯನ್ನು ರವಾನೆ ಮಾಡಹೊರಟಿದ್ದು, ಇದರಿಂದಾಗಿ ರಾಜ್ಯದಲ್ಲಿ ಧರ್ಮಿಕ ಅಶಾಂತಿ ಉಂಟಾಗುವ ಸಾಧ್ಯತೆಯಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
ಈ ರೀತಿಯ ಸಿನಿಮಾಗಳು ಸಮಾಜವನ್ನು ಒಡೆಯುವ ಉದ್ದೇಶವನ್ನು ಹೊಂದಿರುತ್ತದೆ, ಪರಸ್ಪರ ಒಪ್ಪಿತ ಮದುವೆಯನ್ನು ಸಹ ಕೋಮುವಾದ ಆಥವಾ ಬಲವಂತದ ಮತಾಂತರ ಎಂದು ತೋರಿಸುವ ಮೂಲಕ ಸಮಾಜದ ಅಧಪತನಕ್ಕೆ ಈ ಸಿನಿಮಾ ಕಾರಣವಾಗಲಿದೆ ಎಂದು ಅವರು ತಮ್ಮ ಎಕ್ಸ್​ ಹಾಗೂ ಫೇಸ್​ಬುಕ್​ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ಈ ರೀತಿಯ ಸಿನಿಮಾಗಳು ರಾಜ್ಯಕ್ಕೆ ಶತ್ರುಗಳಾಗಿದ್ದು, ರಾಜ್ಯದಲ್ಲಿ ನೆಲೆಸಿರುವ ಶಾಂತಿ ಹಾಗೂ ಸುವ್ಯವಸ್ಥೆಯನ್ನು ಹಾಳು ಮಾಡುವದೇ ಇವರ ಉದ್ದೇಶವಾಗಿದ್ದು, ರಾಜ್ಯದ ಜನರ ಮನಶಾಂತಿಯನ್ನು ಹಾಳಿ ಮಾಡಲು ಹೊರಟಿದ್ದಾರೆ ಎಂದು ಕಟುವಾಗಿ ಟೀಕಿಸಿದ್ದಾರೆ.
ಧಾರ್ಮಿಕ ಸಾಮರಸ್ಯದ ನಾಡಾಗಿರುವ ಕೇರಳವನ್ನು ಭಯೋತ್ಪಾದನೆಯ ತವರೆಂದು ಬಿಂಬಸಲು ಈ ಸಿನಿಮಾ ಮುಂದಾಗಿದ್ದು, ಸಾರ್ವಜನಿಕವಾಗಿ ಈ ಸಿನಿಮಾವನ್ನು ಬರ್ಹಿಷ್ಕರಿಸಬೇಕೆಂದು ಕೇರಳ ಮುಖ್ಯಮಂತ್ರಿ ಜನರಿಗೆ ಕರೆ ನೀಡಿದ್ದಾರೆ.
ಸುಳ್ಳು ಪ್ರಚಾರದ ಮೂಲಕ ಕೇರಳದ ಜಾತ್ಯತೀತ ಅಡಿಪಾಯವನ್ನು ದುರ್ಬಲಗೊಳಿಸದಂತೆ ನೋಡಿಕೊಳ್ಳುವುದು ಮತ್ತು ಜಾತ್ಯತೀತತೆ ಮತ್ತು ಸಹೋದರತ್ವದ ಮೌಲ್ಯಗಳನ್ನು ಎತ್ತಿಹಿಡಿಯಲು ನಾವೆಲ್ಲರು ಈ ಸಿನಿಮಾವನ್ನು ತಿರಸ್ಕರಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ಅವರು ಹೇಳಿದ್ದಾರೆ.

ಸಿನಿಮಾದ ಬಗ್ಗೆ

2023 ರಲ್ಲಿ ತೆರೆಕಂಡಿದ್ದ ದಿ ಕೇರಳ ಸ್ಟೋರಿ ಸಿನಿಮಾದಲ್ಲಿ ಹೇಗೆ ಬಲವಂತದ ಮತಾಂತರ ನಡೆಯುತ್ತದೆ ಮತ್ತು ಮತಾಂತರಗೊಂಡ ಮಹಿಳೆಯರನ್ನು ಹೇಗೆ ಭಯೋತ್ಪಾದನೆಗೆ ಬಳಸಲಾಗುತ್ತದೆ ಎಂಬುದರ ಕುರಿತು ಸಿನಿಮಾ ನಿರ್ಮಾಣವಾಗಿತ್ತು.
ಈ ಸಿನಿಮಾದಲ್ಲಿ ಅದಾ ಶರ್ಮಾ, ಸೋನಿಯಾ ಬಲಾನಿ, ಯೋಗಿತಾ ಬಿಹಾನಿ ಮತ್ತು ಸಿದ್ಧಿ ಇದ್ನಾನಿ ನಟಿಸಿದ್ದರು. ನಿಷೇಧಗಳು ಮತ್ತು ವಿವಾದಗಳ ಹೊರತಾಗಿಯೂ ಈ ಸಿನಿಮಾ ಸುಮಾರು 300 ಕೋಟಿಗೂ ಹೆಚ್ಚಿನ ಹಣವನ್ನು ಗಳಿಸಿತ್ತು.
ಈಗ ಈ ಸಿನಿಮಾದ ಎರಡನೇ ಭಾಗ ತೆರೆಕಾಣಲು ಸಿದ್ಧವಾಗಿದ್ದು, ಸದ್ಯ ಈ ಸಿನಿಮಾದ ಟ್ರೇಲರ್​ ಪರ - ವಿರೋಧದ ಚರ್ಚೆಗೆ ವೇದಿಕೆಯಾಗಿದೆ. ದಿ ಕೇರಳ ಸ್ಟೋರಿ 2 ಸಿನಿಮಾವು ಫೆಬ್ರವರಿ 27 ರಂದು ಬಿಡುಗಡೆಯಾಗಲಿದ್ದು, ಉಲ್ಕಾ ಗುಪ್ತಾ, ಐಶ್ವರ್ಯ ಓಜಾ ಮತ್ತು ಅದಿತಿ ಭಾಟಿಯಾ ಪ್ರಮುಖ ಪಾತ್ರಗಳಲ್ಲಿ ನಟಿಸಲಿದ್ದಾರೆ,(ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net