ದೇಶದೊಳಗೆ ತೀವ್ರ ನೀರಿನ ಬಿಕ್ಕಟ್ಟು ಮತ್ತು ರಾಜಕೀಯ ಅಸ್ಥಿರತೆ ಎದುರಿಸುತ್ತಿದ್ದರೂ, ಪಾಕಿಸ್ತಾನದ ರಕ್ಷಣಾ ಸಚಿವ ಖ್ವಾಜಾ ಆಸಿಫ್ ಶನಿವಾರ ಅಲ್ಲಿನ ಪ್ರಮುಖ ಟಿವಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಭಾರತದ ವಿರುದ್ಧ ವಿಷ ಕಾರಿದ್ದರು. ನಮ್ಮ ರಾಷ್ಟ್ರೀಯ ಭದ್ರತೆಗೆ ಧಕ್ಕೆಯಾಗುತ್ತಿದೆ ಎಂದು ನಮಗೆ ಅನ್ನಿಸಿದ ಕ್ಷಣವೇ, ಅದರಲ್ಲೂ ನೀರು ನಮ್ಮ ರಾಷ್ಟ್ರೀಯ ಭದ್ರತೆಯ ಪ್ರಮುಖ ಭಾಗವಾಗಿದೆ, ನಾವು ಭಾರತದ ವಿರುದ್ಧ ಖಂಡಿತವಾಗಿಯೂ ಯುದ್ಧಕ್ಕೆ ಸಿದ್ಧವಾಗುತ್ತೇವೆ. ಭಾರತವು ಸಿಂಧೂ ನದಿ ನೀರು ಹಂಚಿಕೆಗೆ ಆತಂಕಕಾರಿ ವೇಗದಲ್ಲಿ ಅಡ್ಡಿಪಡಿಸುತ್ತಿದೆ ಎಂಬ ಸಾಕ್ಷ್ಯ ಸಿಕ್ಕರೆ ನಾವು ಮಿಲಿಟರಿ ಕ್ರಮ ಕೈಗೊಳ್ಳಲಿದ್ದೇವೆ ಎಂದು ಗುಡುಗಿದ್ದರು.