ಇದೊಂದು ಸುಳ್ಳು, ಕಟ್ಟುಕತೆ, ರಾಜಕೀಯ ಪ್ರೇರಿತ: ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಬ್ರಿಜ್​ ಭೂಷಣ್​ಗೆ ಬಿಗ್​ ರಿಲೀಫ್​; ದೆಹಲಿ ನ್ಯಾಯಾಲಯ ಹೇಳಿದ್ದೇನು? Brij Bhushan Singh

ಬಿಜೆಪಿ ಮಾಜಿ ಸಂಸದ ಬ್ರಿಜ್​ ಭೂಷಣ್​ ಶರಣ್ ಸಿಂಗ್​ ನಿರಪರಾಧಿ
ಬಿಜೆಪಿ ಮಾಜಿ ಸಂಸದ ಬ್ರಿಜ್​ ಭೂಷಣ್​ ಶರಣ್ ಸಿಂಗ್​ ನಿರಪರಾಧಿ
Published on

ಪ್ರಮುಖ ಮುಖ್ಯಾಂಶಗಳು

  • ಕುಸ್ತಿಪಟುಗಳ ಮೇಲೆ ಲೈಂಗಿಕ ಕಿರುಕುಳ ಪ್ರಕರಣ
  • ಬಿಜೆಪಿ ಮಾಜಿ ಸಂಸದ ಬ್ರಿಜ್​ ಭೂಷಣ್​ ಶರಣ್ ಸಿಂಗ್​ ನಿರಪರಾಧಿ
  • ಇದೊಂದು ರಾಜಕೀಯ ಪ್ರೇರಿತ ಪ್ರಕರಣ
ನವದೆಹಲಿ: ಭಾರತ ಕುಸ್ತಿ ಫೆಡರೇಶನ್​ ಮಾಜಿ ಅಧ್ಯಕ್ಷ ಹಾಗೂ ಮಾಜಿ ಬಿಜೆಪಿ ಸಂಸದ ಬ್ರಿಜ್​ ಭೂಷಣ್​ ಶರಣ್ ಸಿಂಗ್ (Brij Bhushan Singh)​​ ಮೇಲೆ ಕೇಳಿಬಂದಿದ್ದ ಲೈಂಗಿಕ ಕಿರುಕುಳ ಪ್ರಕರಣಕ್ಕೆ ತೆರೆ ಬಿದ್ದಿದ್ದು, ವಿಚಾರಣೆ ನಡೆಸಿದ ದೆಹಲಿ ನ್ಯಾಯಾಲಯವು ಈ ಪ್ರಕರಣದಲ್ಲಿ ಬ್ರಿಜ್​ ಭೂಷಣ್​ ಹೆಸರನ್ನು ಖುಲಾಸೆಗೊಳಿಸಿದೆ.
2023 ರಲ್ಲಿ ಭಾರತದ ಕೆಲ ಖ್ಯಾತ ಕುಸ್ತಿಪಟುಗಳು ಅಂದಿನ ಕುಸ್ತಿ ಫೆಡರೇಶನ್​ ಅಧ್ಯಕ್ಷರಾದ ಬ್ರಿಜ್​ ಭೂಷಣ್​ ಅವರಿಂದ ತಮಗೆ ಲೈಂಗಿಕ ಕಿರುಕಳ ಉಂಟಾಗಿದೆ ಎಂದು ನ್ಯಾಯಾಲಯದ ಮೊರೆ ಹೋಗಿದ್ದು, ದೇಶಾದ್ಯಂತ ಚರ್ಚೆಗೆ ಕಾರಣವಾಗಿತ್ತು.

ಇದೊಂದು ರಾಜಕೀಯ ಪ್ರೇರಿತ ಪ್ರಕರಣ!

ಈ ಪ್ರಕರಣದ ವಿಚಾರಣೆ ನಡೆಸಿದ ರೊಸ್​ ಅವೆನ್ಯು ನ್ಯಾಯಾಲಯದ ಹೆಚ್ಚುವರಿ ಮುಖ್ಯ ನ್ಯಾಯಾಂಗ ನ್ಯಾಯಾಧೀಶ ಅಶ್ವಿನಿ ಪನ್ವಾರ್, ಈ ಪ್ರಕರಣದಲ್ಲಿ ಬ್ರಿಜ್​ ಭೂಷಣ್​ ಶರಣ್ ಸಿಂಗ್​ ಹಾಗೂ ಸಹ ಆರೋಪಿ ವಿನೋದ್​ ತೋಮರ್​ ಅವರ ಹೆಸರನ್ನು ಪ್ರಕರಣದಿಂದ ಖುಲಾಸೆಗೊಳಿಸಿ ಆದೇಶಿಸಿದ್ದಾರೆ.
ತೀರ್ಪಿನ ಸಂಪೂರ್ಣ ವಿವರ ಲಭ್ಯವಿಲ್ಲವಾದರೂ, ಬ್ರಿಜ್​ ಭೂಷಣ್​ ಮೇಲೆ ಆರೋಪ ಮಾಡಿದ್ದ ಇಬ್ಬರು ಕುಸ್ತಿಪಟುಗಳು ಮಾಡಿದ್ದ ಆರೋಪ ಸುಳ್ಳೆಂದು, ಲೈಂಗಿಕ ಕಿರುಕುಳ ನಡೆಸಿದ ವ್ಯಕ್ತಿಯ ಜೊತೆ ಉತ್ತಮ ಸಂಬಂಧ ಹೊಂದಿದ್ದಾಗಿ ನ್ಯಾಯಾಲಯ ಗಮನಿಸಿದೆ.

ಈ ಕಾರಣದಿಂದ, ಈ ಪ್ರಕರಣ ಲೈಂಗಿಕ ಕಿರುಕುಳದ ನೆಪದಲ್ಲಿ ದಾಖಲಾದ ರಾಜಕೀಯ ಪ್ರೇರಿತ ಪ್ರಕರಣ ಎನ್ನುವಂತೆ ನ್ಯಾಯಾಲಯ ಭಾವಿಸಿದೆ, ಅಂತಯೇ ಬ್ರಿಜ್​ ಭೂಷಣ್​ ಹಾಗೂ ವಿನೋದ್​ ತೋಮರ್​ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಸಾಬೀತು ಪಡಿಸುವಲ್ಲಿ ಪ್ರಾಸಿಕ್ಯೂಶನ್ ವಿಫಲವಾದ ಹಿನ್ನಲೆ ಈ ರೀತಿಯ ತೀರ್ಪು ಹೊರಬಿದ್ದಿದೆ ಎಂದು ಹೇಳಲಾಗುತ್ತಿದೆ.


ಸಂತ್ರಸ್ತ ಮಹಿಳೆಯರು ಈ ಘಟನೆ ಕುರಿತು ತಮ್ಮ ಮೇಲಾಧಿಕಾರ ಗಮನಕ್ಕೆ ಏಕೆ ಈ ವಿಷಯವನ್ನು ತಿಳಿಸಿಲ್ಲ? ಹಾಗೂ ಎಲ್ಲಾ ಕುಸ್ತಿಪಟುಗಳಿಗೆ ಒಮ್ಮೆಲೇ ಲೈಂಗಿಕ ಕಿರುಕುಳ ನೀಡಲಾಗಿತ್ತೆ? ಎಂಬ ಪ್ರಶ್ನೆಗಳಿಗೆ ಆರೋಪ ಮಾಡಿದವರಿಂದ ಸೂಕ್ತ ಉತ್ತರ ದೊರೆತಿಲ್ಲ ಎಂದು ತಿಳಿದು ಬಂದಿದೆ.

2023 ರಲ್ಲಿ ದಾಖಲಾದ ಪ್ರಕರಣ!

2023 ರಲ್ಲಿ ಅಂದಿನ ಕುಸ್ತಿ ಫೆಡರೇಶನ್​ ಅಧ್ಯಕ್ಷ ಬ್ರಿಜ್​ ಭೂಷಣ್​ ಶರಣ್ ಸಿಂಗ್​ ಒಟ್ಟು ಆರು ಮಹಿಳಾ ಕುಸ್ತಿ ಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆಂಬ ಆರೋಪ ಕೇಳಿಬಂದಿದ್ದು, ಇದರಲ್ಲಿ ಒಬ್ಬಳು ಅಪ್ರಾಪ್ತ ಬಾಲಕಿ ಕೂಡ ಇದ್ದಳೆಂದು ಹೇಳಲಾಗಿತ್ತು.
ನಂತರದ ದಿನಗಳಲ್ಲಿ, ಅಪ್ರಾಪ್ತ ಬಾಲಕಿ ತಮ್ಮ ಆರೋಪವನ್ನು ಹಿಂಪಡೆದ ನಂತರ ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ಆರಂಭವಾಗಿದೆ. ಈ ಪ್ರಕರಣಕ್ಕೆ ಕುರಿತಂತೆ ಭಾರತದ ಖ್ಯಾತ ಕುಸ್ತಿ ಪಟುಗಳಾದ ವಿನೇಶ್​ ಪೊಗಾಟ್​, ಸಾಕ್ಷಿ ಮಲ್ಲಿಕ್​ ಹಾಗೂ ಭಜರಂಗ್​ ಪೂನಿತಾ ಜಂತರ್​​-ಮಂತರ್​ನಲ್ಲಿ 36 ದಿನಗಳ ಪ್ರತಿಭಟನೆ ನಡೆಸಿದ್ದರು.
ಇದರಿಂದ ಬ್ರಿಜ್​ ಭೂಷಣ್​, ತಮ್ಮ ಅಧ್ಯಕ್ಷ ಸ್ಥಾನದ ಜೊತೆಗೆ 2024 ರ ಲೋಕಸಭೆಯ ಟಿಕೆಟ್​ ಅನ್ನು ಕಳೆದುಕೊಳ್ಳಬೇಕಾಯಿತು. ಆದರೆ ಇವರು ಮಾಡುತ್ತಿರುವ ಆರೋಪವೆಲ್ಲಾ ಸುಳ್ಳು, ಇದೊಂದು ಷಡ್ಯಂತ್ರವೆಂದು ಸಿಂಗ್​ ಅಂದಿನಿಂದ ಹೇಳುತ್ತಾ ಬಂದಿದ್ದು, ಇಂದು ಅವರಿಗೆ ಜಯ ಲಭಿಸಿದೆ, (ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net