ಮೆಸ್ಸಿ ಮನೆಯಲ್ಲಿ ಸೂತಕ: ತಂದೆ ಜಾರ್ಜ್ ಮೆಸ್ಸಿ ನಿಧನ, ಕಣ್ಣೀರಿಟ್ಟ ಫುಟ್ಬಾಲ್ ಲೋಕ! Lionel Messi Father Jorge Messi

ಫುಟ್ಬಾಲ್ ತಾರೆ ಲಿಯೋನೆಲ್​ ಮೆಸ್ಸಿ ತಂದೆ ಜಾರ್ಜ್ ಮೆಸ್ಸಿ ನಿಧನ
ಫುಟ್ಬಾಲ್ ತಾರೆ ಲಿಯೋನೆಲ್​ ಮೆಸ್ಸಿ ತಂದೆ ಜಾರ್ಜ್ ಮೆಸ್ಸಿ ನಿಧನ
Published on

ಪ್ರಮುಖ ಮುಖ್ಯಾಂಶಗಳು

  • ಲಿಯೋನೆಲ್ ಮೆಸ್ಸಿ ಮನೆಯಲ್ಲಿ ಶೋಕ ಸಾಗರ
  • ಫುಟ್ಬಾಲ್ ತಾರೆ ಲಿಯೋನೆಲ್​ ಮೆಸ್ಸಿ ತಂದೆ ಜಾರ್ಜ್ ಮೆಸ್ಸಿ ನಿಧನ
  • ಕಣ್ಣೀರಿಟ್ಟ ಕ್ರೀಡಾಲೋಕ
ಅರ್ಜೆಂಟೀನಾ: ಫುಟ್ಬಾಲ್​ ಲೋಕದ ಖ್ಯಾತ ಕ್ರೀಡಾಪಟು ಅರ್ಜೆಂಟೀನಾದ ಲಿಯೋನೆಲ್ ಮೆಸ್ಸಿ ಮನೆಯಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿದ್ದು, ಶನಿವಾರ (ಆ.8) ಅವರ ತಂದೆ ಜಾರ್ಜ್ಮ ಮೆಸ್ಸಿ (Lionel Messi Father Jorge Messi) ತಮ್ಮ 68 ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆಂದು ವರದಿಯಾಗಿದೆ.
ದೀರ್ಘಕಾಲದ ಅನಾರೋಗ್ಯಕ್ಕೆ ಚಿಕಿತ್ಸೆ ಪಡೆಯುತ್ತಿದ್ದ ಮೆಸ್ಸಿ ತಂದೆ ಜಾರ್ಜ್​, ರೊಸಾರಿಯೋದ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆಂದು ತಿಳಿದು ಬಂದಿದೆ.

ಲಿಯೋನೆಲ್​ ಮೆಸ್ಸಿ ಫುಟ್ಬಾಲ್​ ಲೋಕದಲ್ಲಿ, ಉತ್ತುಂಗವನ್ನು ಕಾಣುವಲ್ಲಿ ಅವರ ತಂದೆ ಜಾರ್ಜ್​ ಅವರ ಪಾಲು ಅಪಾರವಾಗಿದ್ದು, ಇಂದು ಮೆಸ್ಸಿ ತಂದೆ ಸಾವಿಗೆ ಫುಟ್ಬಾಲ್​ ಲೋಕ ಕಣ್ಣೀರಿಟ್ಟಿದೆ.

ಕ್ಯಾನ್ಸರ್​ಗೆ ಬಲಿಯಾದ ಜಾರ್ಜ್​?

ಮಾಹಿತಿ ಪ್ರಕಾರ, ಕಳೆದ ಜೂನ್​ನಿಂದ ಜಾರ್ಜ್​ ಅವರ ಆರೋಗ್ಯದಲ್ಲಿ ವ್ಯತ್ಯಾಸ ಕಂಡುಬಂದ ಹಿನ್ನಲೆ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ತಂದೆ ಚಿಕಿತ್ಸೆ ಪಡೆಯುತ್ತಿದ್ದಾರೆಂದು ಮೆಸ್ಸಿ ತಮ್ಮ ಅಭಿಮಾನಿಗಳಿಗೆ ತಿಳಿಸಿದ್ದರು.

ಆದರೆ, ಈಗ ಜಾರ್ಜ್​ ಮೆಸ್ಸಿ ಸಾವಿಗೆ ನಿಖರ ಕಾರಣ ಏನೆಂದು, ಲಿಯೋನೆಲ್​ ಮೆಸ್ಸಿ ಕುಟುಂಬ ಇಲ್ಲಿವರೆಗೆ ಬಹಿರಂಗ ಪಡಿಸಿಲ್ಲ. ಆದರೆ ಮಾಹಿತಿ ಪ್ರಕಾರನ ಜಾರ್ಜ್​ ಕಳೆದ ಕೆಲ ವರ್ಷಗಳಿಂದ ಪ್ಯಾಂಕ್ರಿಯಾಟಿಕ್ ಕ್ಯಾನ್ಸರ್​ಗೆ ತುತ್ತಾಗಿದ್ದು, ಇದಕ್ಕೆ ಚಿಕಿತ್ಸೆ ಪಡೆಯುತ್ತಿದ್ದರೆಂದು ಹೇಳಲಾಗುತ್ತಿದೆ.


ಮೆಸ್ಸಿ ಮಾರ್ಗದರ್ಶಕರಾಗಿದ್ದ ಜಾರ್ಜ್​!

ಲಿಯೋನೆಲ್​ ಮೆಸ್ಸಿ ಈಗ ವಿಶ್ವವಿಖ್ಯಾತ ಫುಟ್ಬಾಲ್​ ತಾರೆಯಾಗಿರಬಹುದು, ಆದರೆ ಅವರ ಆರಂಭಿಕ ದಿನಗಳಲ್ಲಿ ಅವರ ತಂದೆಯೇ ಅವರ ಮಾರ್ಗದರ್ಶಕರಾಗಿದ್ದರು. ಯಾವ ಕ್ಲಬ್​ಗೆ ಆಡಬೇಕು? ಎಷ್ಟು ಹಣ ಪಡೆಯಬೇಕು? ಮೊದಲಾದ ಮ್ಯಾನೆಜ್​ಮೆಂಟ್​ಗಳನ್ನು ಅವರ ತಂದೆಯವರೇ ನೋಡಿಕೊಳ್ಳುತ್ತಿರೆಂದು ಹೇಳಲಾಗುತ್ತಿದೆ, (ಏಜನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net