ಕುಡಿಯೋದು ಬಿಟ್ಟು 8 ವರ್ಷ ಆಯ್ತು! ಮದ್ಯ ಚಟಕ್ಕೆ ದಾಸನಾಗಿದ್ದ ಮಲ್ಯ ಪುತ್ರ ಸಿದ್ಧಾರ್ಥ್ ಓಪನ್ ಟಾಕ್​ ​ Siddharth Mallya on Alcohol

ಮದ್ಯಪಾನಕ್ಕೆ ಗುಡ್ ಬೈ ಹೇಳಿದ ವಿಜಯ್ ಮಲ್ಯ ಪುತ್ರ ಸಿದ್ಧಾರ್ಥ್
ಮದ್ಯಪಾನಕ್ಕೆ ಗುಡ್ ಬೈ ಹೇಳಿದ ವಿಜಯ್ ಮಲ್ಯ ಪುತ್ರ ಸಿದ್ಧಾರ್ಥ್
Published on

ಪ್ರಮುಖ ಮುಖ್ಯಾಂಶಗಳು

  • ನಾನು ಮದ್ಯ ಬಿಟ್ಟು ಎಂಟು ವರ್ಷವಾಯಿತು!
  • ಮದ್ಯಪಾನಕ್ಕೆ ಗುಡ್ ಬೈ ಹೇಳಿದ ವಿಜಯ್ ಮಲ್ಯ ಪುತ್ರ ಸಿದ್ಧಾರ್ಥ್
  • ಮನಸ್ಸು ಮಾಡಿದರೆ ಏನನ್ನು ಸಾಧಿಸಬಹುದು
ವೈರಲ್​: ಕೇವಲ ಭಾರತ ಮಾತ್ರವಲ್ಲ, ಈಡೀ ಪ್ರಪಂಚದಲ್ಲಿ ಮದ್ಯದ ದೊರೆ ಎಂದೇ ಖ್ಯಾತಿಗಳಿಸಿದ ವ್ಯಕ್ತಿ ಎಂದರೆ ಅದು ವಿಜಯ್​ ಮಲ್ಯ. ಕಿಂಗ್​ಫಿಶನ್ ಎಂಬ ಭಾರತೀಯ ಬ್ರಾಂಡ್​ ಮೂಲಕ ಜಾಗತಿಕ ಮದ್ಯ ಮಾರುಕಟ್ಟೆಯನ್ನು ಅಕ್ಷರಶಃ ಆಳಿದ ಉದ್ಯಮಿ ಎಂದರೆ ಅದು ಕನ್ನಡ ನಾಡಿನ ವಿಜಯ್​ ಮಲ್ಯ ಎಂದರೆ ಸುಳ್ಳಲ್ಲ.
ಆದರೆ, ನಂತರದ ದಿನಗಳಲ್ಲಿ ಆರ್ಥಿಕ ದಿವಾಳಿತನ ತಲೆದೂರಿ, ಭಾರತದ ಬ್ಯಾಂಕುಗಳಿಗೆ ಕೋಟ್ಯಾಂತರ ರೂಪಾಯಿ ವಂಚಿಸಿ, ಸದ್ಯ ಮಲ್ಯ ಲಂಡನ್​ ಸೇರಿದ್ದಾರೆ. ಆದರೆ ಈ ಬಾರಿ ವಿಜಯ್​ ಮಲ್ಯ ಬದಲು ಅವರ ಪುತ್ರ ಸಿದ್ಧಾರ್ಥ ಮಲ್ಯ (Siddharth Mallya on Alcohol) ಸೋಷಿಯಲ್​ ಮೀಡಿಯಾನಲ್ಲಿ ಸಕ್ಕತ್​ ಸೌಂಡ್​ ಮಾಡುತ್ತಿದ್ದಾರೆ.

ನಾನು ಎಣ್ಣೆ ಬಿಟ್ಟು 8 ವರ್ಷವಾಯಿತು!

ಗುರುವಾರ (ಆ.6) ತಮ್ಮ ಇನ್​ಸ್ಟಾಗ್ರಾಮ್​ನಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿರುವ ಸಿದ್ಧಾರ್ಥ ಮಲ್ಯ, ನನ್ನ ಜೀವನದಲ್ಲಿ ಮದ್ಯಪಾನ ಎಂಬ ಅಧ್ಯಾಯ ಕೊನೆಯಾಗಿ ಇಂದು 8 ವರ್ಷವಾಗಿದೆ ಎಂದು ಹೇಳಿದ್ದಾರೆ. ನಾನು ತುಂಬಾ ಚಿಕ್ಕ ವಯಸ್ಸಿನಲ್ಲಿಯೇ ಈ ಚಟಕ್ಕೆ ದಾಸನಾಗಿದ್ದೆ ಹಾಗೂ ಇದರಿಂದ ಬಹಳ ಕಷ್ಟವನ್ನು ನಾನು ಎದುರಿಸಿದ್ದೇನೆಂದು ಸಿದ್ಧಾರ್ಥ ಹಂಚಿಕೊಂಡಿದ್ದಾರೆ.
ನಾನು ಮದ್ಯವನ್ನು ತಯಾರಿಸುವ, ಮಾರಾಟ ಮಾಡುವ ಮನೆಯಲ್ಲೇ ಜನಿಸಿದ ಕಾರಣ, ಸರಾಯಿ ನನಗೆ ಹೊಸದೇನಲ್ಲ, ಆದರೆ ಸಣ್ಣ ವಯಸ್ಸಿನಲ್ಲಿ ಯಾವುದು ಸರಿ? ಯಾವುದು ತಪ್ಪು ಎಂದು ತಿಳಿಯುವ ವಯಸ್ಸು ನಮ್ಮದಾಗಿರುವುದಿಲ್ಲ. ಆದರೆ ನಾನು ಕಳೆದ ಎಂಟು ವರ್ಷಗಳಿಂದ ಒಂದು ತೊಟ್ಟು ಮದ್ಯವನ್ನು ತುಟಿಗೆ ತಾಕಿಸಿಲ್ಲ ಎಂದು ಅವರು ಹೇಳಿದ್ದಾರೆ.

ಮನಸ್ಸು ಮಾಡಬೇಕಷ್ಟೆ!

ನಾನು ಮದ್ಯವನ್ನು ಬಿಡಬೇಕು, ಬಿಟ್ಟು ಸೋಷಿಯಲ್​ ಮೀಡಿಯಾನಲ್ಲಿ ಟ್ರೆಂಡ್​ ಆಗಬೇಕು ಎನ್ನುವ ಉದ್ದೇಶದಿಂದ ಈ ವಿಡಿಯೋವನ್ನು ಹಂಚಿಕೊಳ್ಳುತ್ತಿಲ್ಲ. ಬದಲಾಗಿ, ನನಗೆ ಈ ಮದ್ಯ ಸೇವನೆಯಿಂದ ವಿಪರೀತ ಆತಂಕ, ಹೆದರಿಕೆ ಉಂಟಾಗುತ್ತಿತ್ತು. ಮದ್ಯ ಸೇವನೆ ಮಾಡದೇ ಹೋದರೆ ಹುಚ್ಚು ಹಿಡಿದ ಅನುಭವವಾಗುತ್ತಿತ್ತು.
ಆದರೆ, ನನಗೆ ಒಂದು ದಿನ ಇದನ್ನು ಬಿಡಬೇಕೆಂದು ಅನ್ನಿಸಿತು, ಆದರೆ ಈ ಪಯಣ ಸುಲಭವಾಗಿರಲಿಲ್ಲ, ಹಾಗೂ ಮದ್ಯ ಸೇವನೆಯನ್ನು ಬಿಡುವುದು ಸುಲಭದ ಮಾತೂ ಅಲ್ಲ. ಅದರೆ ಗಟ್ಟಿ ಮನಸ್ಸನ್ನು ಮಾಡಿದರೆ ಏನೂ ಬೇಕಾದರೂ ಸಾಧಿಸಬಹುದು ಎಂದು ಸಿದ್ಧಾರ್ಥ ವಿಡಿಯೋನಲ್ಲಿ ಹೇಳಿದ್ದಾರೆ, (ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net