ತಂತ್ರಜ್ಞಾನಕ್ಕಿಂತ ‘ಥಿಂಕಿಂಗ್’ ಮುಖ್ಯ: ಮೊಬೈಲ್​ ಬಿಟ್ಟು ಪುಸ್ತಕಗಳತ್ತ ಗಮನಹರಿಸಿ; ವಿದ್ಯಾರ್ಥಿಗಳಿಗೆ ಸಿಎಂ ಯೋಗಿ ಆದಿತ್ಯನಾಥ್​ ಕಿವಿಮಾತು! CM Yogi Adityanath

ವಿದ್ಯಾರ್ಥಿಗಳಿಗೆ ಪುಸ್ತಕ ಓದುವಂತೆ ಕಿವಿಮಾತು ಹೇಳುತ್ತಿರುವ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ವಿದ್ಯಾರ್ಥಿಗಳಿಗೆ ಪುಸ್ತಕ ಓದುವಂತೆ ಕಿವಿಮಾತು ಹೇಳುತ್ತಿರುವ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
Published on
ಲಖನೌ: ಶಾಲಾ ಮಕ್ಕಳೊಂದಿಗೆ ನಡೆದ ಸಂವಾದ ಕಾರ್ಯಕ್ರಮದಲ್ಲಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ (CM Yogi Adityanath), ವಿದ್ಯಾರ್ಥಿಗಳು ಮೊಬೈಲ್​ ಬಳಕೆಯನ್ನು ಕಡಿಮೆ ಮಾಡಿ, ಪುಸ್ತಕ ಓದುವ ಹವ್ಯಾಸವನ್ನು ಹೆಚ್ಚಿಸಿಕೊಳ್ಳಬೇಕೆಂದು ಕಿವಿಮಾತು ನೀಡಿದ್ದಾರೆ.
ಶುಕ್ರವಾರ (ಸೆ.4) ರಕ್ಷಾ ಬಂಧನ ಹಬ್ಬದ ನಿಮಿತ್ತ ಆಯೋಜಿಸಲಾಗಿದ್ದ ಸ್ನೇಹ ಬಂಧನ ಕಾರ್ಯಕ್ರಮದಲ್ಲಿ ಮಾತನಾಡಿದ ಮುಖ್ಯಮಂತ್ರಿಗಳು, ಅಧಿಕ ಮೊಬೈಲ್​ ಬಳಕೆಯಿಂದ ದೃಷ್ಟಿ ಸಮಸ್ಯೆ ಉಂಟಾಗುತ್ತದೆ. ಮೊಬೈಲ್ ಕೇವಲ ಡಿಜಿಟಲಿಕರಣದ ಭಾಗವಾಗಿ ಮಾತ್ರ ಇರಬೇಕು. ಮಾಹಿತಿಯ ಮೂಲವಾಗಬಾರದೆಂದು ಹೇಳಿದ್ದಾರೆ.

ತಂತ್ರಜ್ಞಾನಕ್ಕಿಂತ ಥಿಕಿಂಗ್​ ಮುಖ್ಯ!

ಈಗೀನ ಡಿಜಿಟಲ್​ ಜೀನವದಲ್ಲಿ ಮೊಬೈಲ್​ಅನ್ನು ತ್ಯಜಿಸುವುದು ಕಷ್ಟವಿದೆ. ಮೊಬೈಲ್​ ಒಂದೀಡಿ ತಲೆಮಾರನ್ನೇ ಬದಲಿಸಿದೆ. ಆದರೆ ಪ್ರತಿಯೊಂದು ಕೆಲಸಕ್ಕೂ ಮೊಬೈಲ್​ ಬಳಕೆ ಒಳ್ಳೆಯದಲ್ಲ. ನಮ್ಮೆಲ್ಲಾ ನಿರ್ಧಾರ, ಅನಿಸಿಕೆ, ಮಾಹಿತಿ ಕೇವಲ ಒಂದೇ ಮೂಲದಿಂದ ಹೊರಬರುವುದು ಸರಿಯಲ್ಲ. ಹೀಗಾಗಿ ಮೊಬೈಲ್​ ಬಳಕೆ ಆದಷ್ಟು ಕಡಿಮೆ ಮಾಡಿ ಪುಸ್ತಕಗಳನ್ನು ಓದುವುದರಲ್ಲಿ ನಿಮ್ಮನ್ನು ತೊಡಗಿಸಿಕೊಳ್ಳಿ ಎಂದು ಸಿಎಂ ಯೋಗಿ ವಿದ್ಯಾರ್ಥಿಗಳಿಗೆ ತಿಳಿಸಿದ್ದಾರೆ.
ಸೋಷಿಯಲ್​ ಮೀಡಿಯಾನಲ್ಲಿ ಸಿಗುವುದೆಲ್ಲಾ ಸರಿಯಿಲ್ಲ!
ಈಗ ಸೋಷಿಯಲ್​ ಮೀಡಿಯಾ ಖಾತೆ ಇರದ ಜನರೇ ಇಲ್ಲ. ಆದರೆ ಅಲ್ಲಿ ಹರಿದಾಡುವ ಎಲ್ಲಾ ಮಾಹಿತಿಗಳು ಸತ್ಯವಾಗಿರುವುದಿಲ್ಲ. ಕೆಲ ಸಂದರ್ಭದಲ್ಲಿ ತಪ್ಪಾದ ಮಾಹಿತಿಯನ್ನೇ ಹಂಚಿಕೊಳ್ಳಲಾಗಿರುತ್ತದೆ. ಹೀಗಾಗಿ ನಮ್ಮ ಉಪಯೋಗಕ್ಕೆ ಎಷ್ಟು ಬೇಕೋ ಅಷ್ಟೇ ಮೊಬೈಲ್​ಅನ್ನು ಬಳಸಿಕೊಂಡರೆ ಉತ್ತಮ ಎಂದು ಯೋಗಿ ಆದಿತ್ಯನಾಥ್​ ಅಭಿಪ್ರಾಯ ಪಟ್ಟಿದ್ದಾರೆ, (ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net