ಗೆಳತಿ ಮನೆಯಲ್ಲಿ ಚಿನ್ನ ಕದ್ದು ಬಾಯ್​ಫ್ರೆಂಡ್​ಗೆ ಬೈಕ್ ಗಿಫ್ಟ್; ಕೊಯಂಮತ್ತೂರಿನಲ್ಲಿ ಯುವತಿ ಅರೆಸ್ಟ್! Coimbatore Gold Theft

ಕೊಯಮತ್ತೂರಿನಲ್ಲಿ ಗೆಳತಿಯ ಮನೆಯಲ್ಲಿ ಚಿನ್ನ ಕದ್ದು ಬಾಯ್‌ಫ್ರೆಂಡ್‌ಗೆ ಬೈಕ್ ಕೊಡಿಸಿದ ಪ್ರಕರಣ
ಕೊಯಮತ್ತೂರಿನಲ್ಲಿ ಗೆಳತಿಯ ಮನೆಯಲ್ಲಿ ಚಿನ್ನ ಕದ್ದು ಬಾಯ್‌ಫ್ರೆಂಡ್‌ಗೆ ಬೈಕ್ ಕೊಡಿಸಿದ ಪ್ರಕರಣ
Published on
ಕೊಯಂಮತ್ತೂರು​: ತನ್ನ ಬಾಯ್​ಫ್ರೆಂಡ್​ಗೆ ಐಷಾರಾಮಿ ಬೈಕ್​ವೊಂದನ್ನು ಕೊಡಿಸುವ ಸಲುವಾಗಿ ಗೆಳತಿ ಮನೆಯಿಂದ ಚಿನ್ನವನ್ನು ಕಳ್ಳತನ ಮಾಡಿದ ಆರೋಪದ ಹಿನ್ನಲೆ ಯುವತಿಯೊಬ್ಬಳನ್ನು ಬಂಧಿಸಿರುವ ಘಟನೆ ತಮಿಳುನಾಡಿನ ಕೊಯಂಮತ್ತೂರಿ (Coimbatore Gold Theft) ​ನಲ್ಲಿ ವರದಿಯಾಗಿದೆ.
ಮಾಹಿತಿ ಪ್ರಕಾರ, ಬಂಧಿತ ಆರೋಪಿ ಆರ್​. ಜೊಯ್​ ಪ್ರಿನ್ಸಿ (19) ಎರಡನೇ ವರ್ಷದ ಬಿ. ಕಾಂ ವಿದ್ಯಾರ್ಥಿಯಾಗಿದ್ದು, ತನ್ನ ಗೆಳತಿ ಮನೆಯಲ್ಲಿ ಚಿನ್ನವನ್ನು ಕದ್ದಿರುವುದಾಗಿ ತಿಳಿದು ಬಂದಿದೆ.

ಆಗಿದ್ದೇನು?

ಕಳ್ಳತನ ನಡೆದಿರುವ ಮನೆ ಮಾಲೀಕ ತಮಿಳುಸೆಲ್ವನ್​ ಹಾಗೂ ಈ ಪ್ರಿನ್ಸಿ ತಂದೆ ಇಬ್ಬರು ಗೆಳೆಯರಾಗಿದ್ದಾರೆ. ಹಾಗೆಯೇ ಈ ಪ್ರಿನ್ಸಿ ಮತ್ತು ತಮಿಳುಸೆಲ್ವನ್​ ಮಗಳು ಕೂಡ ಗೆಳತಿಯರಾಗಿದ್ದಾರೆ. ಆಗಸ್ಟ್​ 16 ರಂದು ತಮಿಳುಸೆಲ್ವನ್​ ಮನೆಗೆ ಬಂದಿರುವ ಪ್ರಿನ್ಸಿ, ಸುಮಾರು 9 ಚಿನ್ನದ ಅಭರಣಗಳನ್ನು ಕಳ್ಳತನ ಮಾಡಿದ್ದಾಳೆ. ಮನೆಯಲ್ಲಿದ್ದ ಚಿನ್ನ ಕಾಣದಿದ್ದಾಗ, ತಮಿಳುಸೆಲ್ವನ್​ ಪೊಲೀಸರಲ್ಲಿ ದೂರನ್ನು ದಾಖಲಿಸಿದ್ದಾನೆ.
ಬಾಯ್​ಫ್ರೆಂಡ್​ಗೆ ಬೈಕ್​ ಗಿಫ್ಟ್​!
ನಂತರ ಪೊಲೀಸರು ಪ್ರಿನ್ಸಿಯನ್ನು ವಿಚಾರಣೆ ಮಾಡಿದಾಗ, ಚಿನ್ನವನ್ನು ಈ ಪ್ರಿನ್ಸಿಯೇ ಕದ್ದಿರುವುದು ತಿಳಿದು ಬಂದಿದ್ದು, ಕದ್ದ ಚಿನ್ನವನ್ನು ಮಾರಿ ತನ್ನ ಬಾಯ್​ಫ್ರೆಂಡ್​ಗೆ ಬೈಕ್​ವೊಂದನ್ನು ಗಿಫ್ಟ್​ ಮಾಡಿದ್ದಾಗಿ ಒಪ್ಪಿಕೊಂಡಿದ್ದಾಳೆ. ಹಾಗೂ ಈಕೆಯ ಬಾಯ್​ಫ್ರೆಂಡ್​ ಹೊಸ ಬೈಕ್​ ತೆಗೆದುಕೊಂಡಿದ್ದನ್ನು ತನ್ನ ಸೋಷಿಯಲ್​ ಮೀಡಿಯಾನಲ್ಲಿ ಹಂಚಿಕೊಂಡಿದ್ದಾಗಿ ಕೂಡ ತಿಳಿದು ಬಂದಿದೆ.

ಬಾಯ್​​ಫ್ರೆಂಡ್​ ಪರಾರಿ; ಬೆನ್ನುಬಿದ್ದ ಪೊಲೀಸ್​!

ಚಿನ್ನವನ್ನು ಕಳ್ಳತನ ಮಾಡಿ, ಅಂಗಡಿಯಲ್ಲಿ ಮಾರಾಟ ಮಾಡಿ ಬಾಯ್​ಫ್ರೆಂಡ್​ಗೆ ಬೈಕ್​ ಕೊಡಿಸಿದ್ದಾಗಿ ಪ್ರಿನ್ಸಿ ಒಪ್ಪಿಕೊಂಡಿದ್ದಾಳೆ. ಆದರೆ ಇಕೆಯಿಂದ ಬೈಕ್​ ಪಡೆದಿರುವ ಬಾಯ್​​ಫ್ರೆಂಡ್​ ಜನಗನ್​ ಸಿವಾ ಕಣ್ಮರೆಯಾಗಿದ್ದಾಗಿ ತಿಳಿದು ಬಂದಿದೆ. ಸದ್ಯ ಪೊಲೀಸರು ಇತನ ಮೇಲೆ ಕೂಡ ದೂರನ್ನು ದಾಖಲಿಸಿಕೊಂಡಿದ್ದು, ಇವನ ಪತ್ತೇಗಾಗಿ ವಿಶೇಷ ತಂಡವೊಂದನ್ನು ರಚಿಸಿರುವುದಾಗಿ ಪೊಲೀಸ್​ ಇಲಾಖೆ ಮಾಹಿತಿ ನೀಡಿದೆ, (ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net