ತಮ್ಮ ಜೀವನವನ್ನು ಶೂನ್ಯದಿಂದ ನಿರ್ಮಿಸಿಕೊಂಡರು; ದೇಶ ವಿಭಜನೆಯ ಸಂತ್ರಸ್ತರನ್ನು ಸ್ಮರಿಸಿದ ಪ್ರಧಾನಿ ಮೋದಿ | PM Modi
ಪ್ರಧಾನಿ ನರೇಂದ್ರ ಮೋದಿ
Published on:
Copied
Follow Us
ನವದೆಹಲಿ: 80ನೇ ಸ್ವಾತಂತ್ರ್ಯ ದಿನಾಚರಣೆಗೂ ಮುನ್ನ ಶುಕ್ರವಾರ(ಆ. 14) ಪ್ರಧಾನಿ ನರೇಂದ್ರ ಮೋದಿಯವರು(PM Modi), ವಿಭಜನಾ ಭಯಾನಕ ಸ್ಮರಣಾರ್ಥ ದಿನದ ಸಂದರ್ಭದಲ್ಲಿ, ತಮ್ಮ ಜೀವನವನ್ನು ಶೂನ್ಯದಿಂದ ನಿರ್ಮಿಸಿಕೊಂಡರು ಎಂದು ದೇಶ ವಿಭಜನೆಯ ಸಂತ್ರಸ್ತರನ್ನು ಸ್ಮರಿಸಿಕೊಂಡಿದ್ದಾರೆ.
ಈ ಕುರಿತು ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಅವರು, ಈ ದಿನವು ದೇಶದ ಇತಿಹಾಸದ ಅತ್ಯಂತ ನೋವಿನ ಅಧ್ಯಾಯಗಳಲ್ಲಿ ಒಂದನ್ನು ನೆನಪಿಸುತ್ತದೆ, ಇದು ಲೆಕ್ಕವಿಲ್ಲದಷ್ಟು ಜೀವಗಳನ್ನು ಛಿದ್ರಗೊಳಿಸಿತು, ಕುಟುಂಬಗಳನ್ನು ಸ್ಥಳಾಂತರಿಸಿತು. ಮತ್ತು ಅಪಾರ ಮಾನವ ನೋವಿಗೆ ಕಾರಣವಾಯಿತು ಎಂದಿದ್ದಾರೆ.
ನಾವು ವಿಭಜನೆಯ ಭಯಾನಕ ನೆನಪಿನ ದಿನವನ್ನು ಆಚರಿಸುತ್ತೇವೆ. ವಿಭಜನೆಯಿಂದ ಸಂತ್ರಸ್ತರಾದ ಎಲ್ಲರ ಧೈರ್ಯವನ್ನು ನಾವು ಸ್ಮರಿಸುತ್ತೇವೆ. ಇತಿಹಾಸದಲ್ಲಿ ಹಲವಾರು ಜೀವಗಳನ್ನು ಛಿದ್ರಗೊಳಿಸಿದ ಕ್ಷಣ ಅದು... ಕುಟುಂಬಗಳು ಬೇರು ಸಹಿತ ಕಳೆದುಕೊಂಡವು. ಲಕ್ಷಾಂತರ ಜನ ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡರು ಮತ್ತು ಅಪಾರ ನೋವನ್ನು ಸಹಿಸಿಕೊಂಡರು ಎಂದು ಹೇಳಿದ್ದಾರೆ.
ಅದೇ ಸಮಯದಲ್ಲಿ, ಇದನ್ನು ಮೀರಿ ನಿಂತು ಜನರು ಶೂನ್ಯದಿಂದ ತಮ್ಮ ಬದುಕನ್ನು ಮರುಕಟ್ಟಿಕೊಂಡರು. ಪ್ರತಿಕೂಲತೆಯನ್ನು ಸಾಧನೆಯಾಗಿ ಪರಿವರ್ತಿಸಿ ನಮ್ಮ ರಾಷ್ಟ್ರದ ಪ್ರಗತಿಗೆ ಅಪಾರ ಕೊಡುಗೆ ನೀಡಿದರು. ಅವರ ಜೀವನದ ಪಯಣವು ಮಾನವೀಯತೆಯ ಮನೋಭಾವದ ದೃಢತೆಯನ್ನು ನಮಗೆ ನೆನಪಿಸುತ್ತದೆ. ಈ ದಿನವು ನಮ್ಮ ದೇಶದಲ್ಲಿ ಸಾಮರಸ್ಯ ಮತ್ತು ಭ್ರಾತೃತ್ವವನ್ನು ಕಾಪಾಡಿಕೊಳ್ಳುವ ನಮ್ಮ ಸಂಕಲ್ಪವನ್ನು ಗಾಢವಾಗಿಸಲಿ ಮತ್ತು ವಿಕಸಿತ ಭಾರತವನ್ನು ನಿರ್ಮಿಸುವತ್ತ ಒಟ್ಟಾಗಿ ಶ್ರಮಿಸಲು ನಮಗೆ ಸ್ಫೂರ್ತಿ ನೀಡಲಿ ಎಂದಿದ್ದಾರೆ.
ದೇಶ ವಿಭಜನೆಯ ಸ್ಮರಣಾರ್ಥ ದಿನ
1947ರಲ್ಲಿ ದೇಶ ವಿಭಜನೆಯ ಸಮಯದಲ್ಲಿ ಪ್ರಾಣ ಕಳೆದುಕೊಂಡವರು ಮತ್ತು ಸ್ಥಳಾಂತರಗೊಂಡವರನ್ನು ಗೌರವಿಸಲು ಭಾರತವು ಆಗಸ್ಟ್ 14ರಂದು ವಿಭಜನೆಯ ಭಯಾನಕ ಸ್ಮರಣಾರ್ಥ ದಿನವನ್ನು ಆಚರಿಸುತ್ತದೆ.
ಬ್ರಿಟಿಷ್ ಆಳ್ವಿಕೆಯ ಅಂತ್ಯವನ್ನು ಗುರುತಿಸಲು ಭಾರತವು ಆಗಸ್ಟ್ 15 ರಂದು ಸ್ವಾತಂತ್ರ್ಯ ದಿನವನ್ನು ಆಚರಿಸಿದರೆ, ಆಗಸ್ಟ್ 14ರಂದು ದೇಶ ವಿಭಜನೆಯ ಸ್ಮರಣಾರ್ಥ ದಿನವಾಗಿ ಆಚರಿಸಲಾಗುತ್ತದೆ. ಈ ವಿಭಜನೆಯೂ ಮಾನವ ಇತಿಹಾಸದಲ್ಲಿ ಅತಿದೊಡ್ಡ ಸಾಮೂಹಿಕ ವಲಸೆಗಳಲ್ಲಿ ಒಂದಕ್ಕೆ ಕಾರಣವಾಯಿತು.
ಬ್ರಿಟಿಷ್ ಭಾರತವು ಭಾರತ ಮತ್ತು ಪಾಕಿಸ್ತಾನಗಳಾಗಿ ವಿಭಜನೆಯಾದಾಗ ಅಂದಾಜು 20 ಮಿಲಿಯನ್ ಜನರು ಸ್ಥಳಾಂತರಗೊಂಡರು, ಲಕ್ಷಾಂತರ ಜನರು ತಮ್ಮ ಮನೆಗಳನ್ನು ತೊರೆದು ಪರಿಚಯವಿಲ್ಲದ ಪರಿಸರದಲ್ಲಿ ತಮ್ಮ ಜೀವನವನ್ನು ಪುನರ್ನಿರ್ಮಿಸಿಕೊಳ್ಳಲು ಇದು ಕಾರಣವಾಯಿತು (ಏಜೆನ್ಸೀಸ್).