ನನ್ನ ಕಿವಿಯಲ್ಲಿ 'ಆ ಮಾತು' ಹೇಳ್ತಿದ್ದವನೇ ಈಗ ನನ್ನ ಗಂಡ..ಪತಿ ವಿಜಯ್ ಬಗ್ಗೆ ಭಾವುಕ ಪೋಸ್ಟ್ ಹಂಚಿಕೊಂಡ ರಶ್ಮಿಕಾ | Virosh Wedding

Virosh Wedding
Virosh Wedding
Published on
ಉದಯಪುರ: ದಕ್ಷಿಣ ಭಾರತದ ಚಿತ್ರರಂಗದ ಮೋಸ್ಟ್ ರೋಮ್ಯಾಂಟಿಕ್ ಜೋಡಿ ಎನಿಸಿಕೊಂಡಿದ್ದ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ದಾಂಪತ್ಯ ಜೀವನಕ್ಕೆ (Virosh Wedding) ಗುರುವಾರ (ಫೆ.26) ಕಾಲಿಟ್ಟಿದ್ದು, ಕಳೆದ ಅನೇಕ ವರ್ಷಗಳಿಂದ ಹರಿದಾಡುತ್ತಿದ್ದ ವದಂತಿಗಳಿಗೆ ತೆರೆ ಬಿದ್ದಿದೆ.
ರಾಜಸ್ಥಾನದ ಉದಯಪುರದಲ್ಲಿ ಅದ್ಧೂರಿ ವಿವಾಹವಾಗಿರುವ ಈ ಜೋಡಿ, ಇದೇ ವೇಳೆ ನಟಿ ರಶ್ಮಿಕಾ ಮಂದಣ್ಣ ತಮ್ಮ ಫೇಸ್​ಬುಕ್​ ಖಾತೆಯಲ್ಲಿ ಹಂಚಿಕೊಂಡಿರುವ ಭಾವುಕ ಸಾಲುಗಳು ಸದ್ಯ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿವೆ.

ಇವರೇ ನನ್ನ ಪತಿ..

ನನ್ನ ಪ್ರೀತಿಪಾತ್ರರೇ, ಇವರೇ ನೋಡಿ ನನ್ನ ಪತಿ.. ಮಿಸ್ಟರ್ ವಿಜಯ್ ದೇವರಕೊಂಡ!" ಎಂದು ರಶ್ಮಿಕಾ ತಮ್ಮ ಪೋಸ್ಟ್ ಆರಂಭಿಸಿದ್ದು, ವಿಜಯ್ ಕೇವಲ ಪತಿ ಎಂದು ಮಾತ್ರವಲ್ಲದೆ, ತಮಗೆ ನಿಜವಾದ ಪ್ರೀತಿ ಮತ್ತು ಶಾಂತಿಯ ಅರ್ಥವನ್ನು ಕಲಿಸಿಕೊಟ್ಟ ಗುರು ಎಂದು ಬಣ್ಣಿಸಿದ್ದಾರೆ.
ದೊಡ್ಡ ಕನಸುಗಳನ್ನು ಕಾಣುವುದು ತಪ್ಪಲ್ಲ ಎಂದು ನನಗೆ ದಿನಾ ಹೇಳುತ್ತಿದ್ದ ವ್ಯಕ್ತಿ ಇವರು. ನಾನು ಅಂದುಕೊಂಡಿದ್ದಕ್ಕಿಂತ ಹೆಚ್ಚಿನದನ್ನು ಸಾಧಿಸುವ ಶಕ್ತಿ ನನಗಿದೆ ಎಂದು ಸದಾ ಹುರಿದುಂಬಿಸುತ್ತಿದ್ದರು, ಸ್ನೇಹಿತರೊಂದಿಗೆ ಪ್ರಯಾಣಿಸುವುದನ್ನು ನನಗೆ ತೋರಿಸಿದವರು ಎನ್ನುವುದು ಇದುವರೆಗಿನ ಅತ್ಯುತ್ತಮ ವಿಷಯ, ನನ್ನನ್ನು ನಂಬಿ ನಾನು ಇವರ ಬಗ್ಗೆ ಒಂದು ಪುಸ್ತಕ ಬರೆಯಬಲ್ಲೆ!.
ವಿಜ್ಜು ನಿನ್ನ ಬಗ್ಗೆ ನನಗಿರುವ ಭಾವನೆಗಳನ್ನು ವಿವರಿಸಲು ನನಗೆ ಸದಾ ಪದಗಳ ಕೊರತೆಯಿದೆ, ನಾನು ಯಾವಾಗಲೂ ನಿನಗೆ ಇದನ್ನು ಹೇಳುತ್ತಲೇ ಬಂದಿದ್ದೇನೆ, ನನ್ನ ಸಾಧನೆಗಳು, ಹೋರಾಟಗಳು, ಸಂತೋಷ, ದುಃಖ, ಜೀವನ ಎಲ್ಲವೂ ಈಗ ತುಂಬಾ ಅರ್ಥಪೂರ್ಣವಾಗಿದೆ, ಅದಕ್ಕೆ ಕಾರಣ ನಿನ್ನ ಉಪಸ್ಥಿತಿ. ನಿಮ್ಮ ಹೆಂಡತಿ ಎಂದು ಕರೆಸಿಕೊಳ್ಳಲು ತುಂಬಾ ಸಂತೋಷವಾಗುತ್ತಿದೆ, ಇನ್ನು ಮುಂದೆ ನಾವು ಅತ್ಯುತ್ತಮ ಜೀವನವನ್ನು ನಡೆಸೋಣ! ಐ ಲವ್​ ಯೂ ಎಂದು ರಶ್ಮಿಕಾ ಬರೆದುಕೊಂಡಿದ್ದಾರೆ.

ವಿರೋಶ್​ ವಿವಾಹ

ಅಭಿಮಾನಿಗಳು ಪ್ರೀತಿಯಿಂದ ಕರೆದ ವಿರೋಶ್ ಎಂಬ ಹೆಸರಿನಲ್ಲೇ ಈ ಮದುವೆ ನಡೆದಿದೆ. ಉದಯಪುರದ ಐಟಿಸಿ ಮೆಮೆಂಟೋಸ್ ಹೋಟೆಲ್‌ನಲ್ಲಿ ನಡೆದ ಈ ಖಾಸಗಿ ಸಮಾರಂಭದಲ್ಲಿ ತೆಲುಗು ಮತ್ತು ಕೊಡವ ಸಂಪ್ರದಾಯಗಳೆರಡನ್ನೂ ಪಾಲಿಸಲಾಗಿದೆ.
ಮಾರ್ಚ್ 4ಕ್ಕೆ ಹೈದರಾಬಾದ್‌ನಲ್ಲಿ ಅದ್ದೂರಿ ರಿಸೆಪ್ಷನ್
ಉದಯಪುರದಲ್ಲಿ ಆಪ್ತರು ಮತ್ತು ಕುಟುಂಬದವರ ಸಮ್ಮುಖದಲ್ಲಿ ಮದುವೆಯಾಗಿರುವ ಈ ಜೋಡಿ, ಮಾರ್ಚ್ 4ರಂದು ಹೈದರಾಬಾದ್‌ನಲ್ಲಿ ಚಿತ್ರರಂಗದ ಗಣ್ಯರಿಗಾಗಿ ಬೃಹತ್ ಔತಣಕೂಟವನ್ನು ಆಯೋಜಿಸಿದೆ ಎಂದು ಮೂಲಗಳು ತಿಳಿಸಿವೆ(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net