

ಪ್ರಮುಖ ಮುಖ್ಯಾಂಶಗಳು
ಕೇಂದ್ರ ಸರ್ಕಾರ ಆಮದು ಮಾಡಿಕೊಳ್ಳುವ ಕಚ್ಚಾ ಸಕ್ಕರೆ ಮೇಲೆ ಸುಂಕ ಕಡಿತಮಾಡಲು ಒಪ್ಪಿಕೊಂಡಿದೆ. ಈಗಾಗಲೇ 10 ಲಕ್ಷ ಟನ್ ಸಕ್ಕರೆ ಆಮದಿಗೆ ಅದೇಶ ದೊರೆತಿದೆ. ಇದು ಜಾರಿಯಾದ ದಿನನಿಂದ ಸಕ್ಕರೆ ಬೆಲೆ ತಾನಾಗಿಯೇ ಕಡಿಮೆಯಾಗಲಿದೆ ಎಂದಿದ್ದಾರೆ.
ಆಮದು ಮಾಡಿಕೊಳ್ಳುತ್ತಿದ್ದೆವೆ ಎಂದ ಮಾತ್ರಕ್ಕೆ ನಮ್ಮಲ್ಲಿ ಸಕ್ಕರೆ ದಾಸ್ತಾನು ಕಡಿಮೆಯಾಗಿದೆ ಎಂದಲ್ಲ. 2025-26 ರಲ್ಲಿ ದೇಶೀಯ ತಯಾರಿಕೆ ಸಕ್ಕರೆಯ ಸುಮಾರು 2.79 ಕೋಟಿ ಟನ್ ಸಕ್ಕರೆ ನಮ್ಮ ಬಳಿಯಿದೆ ಎಂದು ತಿಳಿಸಿದ್ದಾರೆ.
ಈ ಸಕ್ಕರೆ ಬಂದ ದಿನದಿಂದ ಕರಾವಳಿ ರಾಜ್ಯಗಳಾದ ಮಹಾರಾಷ್ಟ್ರ, ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ ಹಾಗೂ ಗುಜರಾತ್ ರಾಜ್ಯಗಳಿಗೆ ಬಂದಿಳಿಯಲಿದ್ದು, ಅಲ್ಲಿಂದ ಭಾರತದಾದ್ಯಂತ ಸರಬರಾಜಾಗಲಿದೆ ಎಂದು ಮಾಹಿತಿ ಹಂಚಿಕೊಂಡಿದ್ದಾರೆ.