ಈ ಕ್ರೀಡಾ ಶೃಂಗಸಭೆಯಲ್ಲಿ ಕೇವಲ ವಿರಾಟ್ ಕೊಹ್ಲಿ ಸಂವಾದ ಮಾತ್ರವಲ್ಲದೆ, ಐಪಿಎಲ್ ಮತ್ತು ಡಬ್ಲ್ಯುಪಿಎಲ್ ಟೂರ್ನಿಗಳ ಆರ್ಥಿಕ ಬೆಳವಣಿಗೆ, ಭಾರತದ ಒಲಿಂಪಿಕ್ಸ್ ಕನಸುಗಳು ಹಾಗೂ ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅಭಿಮಾನಿಗಳ ಅನುಭವವನ್ನು ಮತ್ತಷ್ಟು ವಿಶ್ವದರ್ಜೆಗೆ ಕೊಂಡೊಯ್ಯುವ ಕುರಿತು ಗಂಭೀರ ಚರ್ಚೆಗಳು ನಡೆದವು. ಭಾರತ ಸರ್ಕಾರದ ಕ್ರೀಡಾ ಇಲಾಖೆಯ ಕಾರ್ಯದರ್ಶಿ ಹರಿ ರಂಜನ್ ರಾವ್ (IAS), ಬೆಂಗಳೂರು ನಗರ ಪೊಲೀಸ್ ಕಮಿಷನರ್ ಸೀಮಂತ್ ಕುಮಾರ್ ಸಿಂಗ್ (IPS), ಜಂಟಿ ಪೊಲೀಸ್ ಕಮಿಷನರ್ ವಂಶಿ ಕೃಷ್ಣ (IPS), ಆದಿತ್ಯ ಬಿರ್ಲಾ ಗ್ರೂಪ್‌ನ ಸಂದೀಪ್ ಅಗರ್ವಾಲ್, ಆರ್‌ಸಿಬಿ ಸಿಇಒ ರಾಜೇಶ್ ಮೆನನ್ ಮತ್ತು ಆರ್‌ಸಿಬಿ ಕ್ರಿಕೆಟ್ ನಿರ್ದೇಶಕ ಮೊ ಬೊಬಾಟ್ ಸೇರಿದಂತೆ ಪ್ರಮುಖರು ಭಾಗವಹಿಸಿ ಕ್ರೀಡಾ ಮೂಲಸೌಕರ್ಯ ಹಾಗೂ ಕರಡು ನೀತಿಗಳ ಕುರಿತು ಮಹತ್ವದ ಒಳನೋಟಗಳನ್ನು ಹಂಚಿಕೊಂಡರು.