ಯುವಕನ ಕಿಡ್ನಾಪ್: ಜೇಬಲ್ಲಿ ನಯಾಪೈಸೆ ಇಲ್ದಿದ್ರೂ ಆ್ಯಪ್​ನಲ್ಲಿ ಸಾಲ​ ತೆಗೆಸಿ ಮೊಬೈಲ್​ ಸಮೇತ ಹಣ ದೋಚಿದ ಕಿರಾತರು! Money And Phone

ಸಾಲ ನೀಡುವ ಆ್ಯಪ್‌ಗಳ ದುರುಪಯೋಗ ಮತ್ತು ಸೈಬರ್ ಹಾಗೂ ದರೋಡೆ ಅಪರಾಧಗಳು ಯಾವ ಮಟ್ಟಕ್ಕೆ ತಲುಪಿವೆ ಎಂಬುದಕ್ಕೆ ಈ ಘಟನೆಯೇ ಜೀವಂತ ನಿದರ್ಶನವಾಗಿದೆ. ಚೆನ್ನೈನ ಪಲ್ಲಿಕರನೈ ಪ್ರದೇಶದಲ್ಲಿ ನಡೆದ ಈ ಕೃತ್ಯವು ತಮಿಳುನಾಡು ಮಾತ್ರವಲ್ಲದೆ ದೇಶಾದ್ಯಂತ ವ್ಯಾಪಕ ಚರ್ಚೆಗೆ ಗ್ರಾಸವಾಗಿದ್ದು, ಪೊಲೀಸರ ತ್ವರಿತ ಕಾರ್ಯಾಚರಣೆಯಿಂದ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ.
Money And Phone
ಸಾಂದರ್ಭಿಕ ಚಿತ್ರ
Published on: 

ಚೆನ್ನೈ: ತಮಿಳುನಾಡು ರಾಜಧಾನಿ ಚೆನ್ನೈನಲ್ಲಿ ಎಲ್ಲರನ್ನೂ ಆಘಾತಕ್ಕೆ ದೂಡುವ ಘಟನೆಯೊಂದು ನಡೆದಿದೆ. ಕಿಡ್ನಾಪ್​ ಆದ ಯುವಕನ ಬಳಿ ಹಣವಿಲ್ಲದಿರುವುದನ್ನು ಕಂಡು ಆತನ ಹೆಸರಿನಲ್ಲಿ ಮೊಬೈಲ್ ಆ್ಯಪ್ ಮೂಲಕ ಸಾಲ ಪಡೆದು ಫೋನ್​ ಸಮೇತ ಹಣವನ್ನು ( Money And Phone ) ದೋಚಿ ಪರಾರಿಯಾಗಿರುವ ವಿಚಿತ್ರ ಘಟನೆ ಬೆಳಕಿಗೆ ಬಂದಿದೆ.

ಸಾಲ ನೀಡುವ ಆ್ಯಪ್‌ಗಳ ದುರುಪಯೋಗ ಮತ್ತು ಸೈಬರ್ ಹಾಗೂ ದರೋಡೆ ಅಪರಾಧಗಳು ಯಾವ ಮಟ್ಟಕ್ಕೆ ತಲುಪಿವೆ ಎಂಬುದಕ್ಕೆ ಈ ಘಟನೆಯೇ ಜೀವಂತ ನಿದರ್ಶನವಾಗಿದೆ. ಚೆನ್ನೈನ ಪಲ್ಲಿಕರನೈ ಪ್ರದೇಶದಲ್ಲಿ ನಡೆದ ಈ ಕೃತ್ಯವು ತಮಿಳುನಾಡು ಮಾತ್ರವಲ್ಲದೆ ದೇಶಾದ್ಯಂತ ವ್ಯಾಪಕ ಚರ್ಚೆಗೆ ಗ್ರಾಸವಾಗಿದ್ದು, ಪೊಲೀಸರ ತ್ವರಿತ ಕಾರ್ಯಾಚರಣೆಯಿಂದ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ.

Also Read
ಪಾರು ಜತೆ ನಟಿಸಲು ಅನೇಕ ನಟರು ಹೆದರುತ್ತಿದ್ದ ಟೈಂನಲ್ಲಿ ಆಕೆ ಪರ ನಿಂತಿದ್ದು ಈ ಇಬ್ಬರು ಮಾತ್ರ: ಶಾಕಿಂಗ್​ ಸಂಗತಿ ಬಿಚ್ಚಿಟ್ಟ ನಿರ್ದೇಶಕ! Parvathy Thiruvothu
Money And Phone

ಬುಧವಾರ ಚೆನ್ನೈನ ಪಲ್ಲಿಕರನೈ ಪ್ರದೇಶದಲ್ಲಿ 21 ವರ್ಷದ ಅಜಯ್ ಎಂಬಾತನ್ನು ದುಷ್ಕರ್ಮಿಗಳ ತಂಡವೊಂದು ಅಪಹರಿಸಿತು. ಬಲವಂತವಾಗಿ ಆಟೋರಿಕ್ಷಾದಲ್ಲಿ ಕೂರಿಸಿಕೊಂಡು ಆ ಗುಂಪು ಕರೆದೊಯ್ದಿದೆ. ಈ ವೇಳೆ ದರೋಡೆಕೋರರು ಯುವಕನ ಬಳಿ ಹಣವನ್ನು ಕೇಳಿದ್ದಾರೆ. ಆದರೆ ತನ್ನ ಬಳಿ ಒಂದು ನಯಾಪೈಸೆಯೂ ಇಲ್ಲ ಎಂದು ಅಜಯ್ ಹೇಳಿದ್ದಾನೆ. ಇದರಿಂದ ಆಕ್ರೋಶಗೊಂಡ ಅಪಹರಣಕಾರರು ಆತನ ಮೇಲೆ ಮನಸೋ ಇಚ್ಛೆ ಹಲ್ಲೆ ನಡೆಸಿದ್ದಾರೆ. ಹಣ ಪಡೆಯಲೇಬೇಕೆಂಬ ದುರುದ್ದೇಶದಿಂದ ದರೋಡೆಕೋರರು ಯುವಕನಿಗೆ ಬೆದರಿಕೆ ಹಾಕಿ, ಆತನ ಮೊಬೈಲ್ ಮೂಲಕವೇ ತಕ್ಷಣ ಸಾಲ ನೀಡುವ ಆ್ಯಪ್ ಒಂದಕ್ಕೆ ಅರ್ಜಿ ಹಾಕುವಂತೆ ಬಲವಂತಪಡಿಸಿದ್ದಾರೆ.

ಅಪಹರಣಕಾರರ ಬೆದರಿಕೆಗೆ ಮಣಿದು ಅಜಯ್ ಮೊಬೈಲ್ ಆ್ಯಪ್‌ನಲ್ಲಿ ಸಾಲಕ್ಕಾಗಿ ಅರ್ಜಿ ಸಲ್ಲಿಸಿದ್ದು, ಕೆಲವೇ ಕ್ಷಣಗಳಲ್ಲಿ ಆತನ ಬ್ಯಾಂಕ್ ಖಾತೆಗೆ ಸಾಲದ ಹಣ ಜಮೆಯಾಗಿದೆ. ಹಣ ಖಾತೆಗೆ ಬರುತ್ತಿದ್ದಂತೆ ಆ ದುಷ್ಟರು, ಯುವಕನನ್ನು ನೇರವಾಗಿ ಹತ್ತಿರದ ಎಟಿಎಂ ಕೇಂದ್ರಕ್ಕೆ ಕರೆದೊಯ್ದಿದ್ದಾರೆ. ಅಲ್ಲಿ ಆತನಿಂದ ಬಲವಂತವಾಗಿ 9,500 ರೂಪಾಯಿ ಹಣವನ್ನು ನಗದು ರೂಪದಲ್ಲಿ ಡ್ರಾ ಮಾಡಿಸಿಕೊಂಡು ಕಸಿದುಕೊಂಡಿದ್ದಾರೆ. ಅಷ್ಟೇ ಅಲ್ಲದೆ, ಅಜಯ್ ಬಳಿ ಇದ್ದ ಬೆಲೆಬಾಳುವ ಮೊಬೈಲ್ ಫೋನ್ ಅನ್ನು ಕೂಡ ಕಿತ್ತುಕೊಂಡು ಸ್ಥಳದಿಂದ ಕಾಲ್ಕಿತ್ತಿದ್ದಾರೆ.

ದರೋಡೆಕೋರರ ಅಮಾನವೀಯ ಕೃತ್ಯದಿಂದ ಮಾನಸಿಕವಾಗಿ ಮತ್ತು ದೈಹಿಕವಾಗಿ ನೊಂದಿದ್ದ ಯುವಕ ಅಜಯ್, ತಕ್ಷಣವೇ ಪಲ್ಲಿಕರನೈ ಪೊಲೀಸ್ ಠಾಣೆಗೆ ತೆರಳಿ ನಡೆದ ಘಟನೆಯ ಕುರಿತು ದೂರು ದಾಖಲಿಸಿದ್ದಾರೆ. ಪ್ರಕರಣದ ಗಂಭೀರತೆಯನ್ನು ಪರಿಗಣಿಸಿದ ಚೆನ್ನೈ ಪೊಲೀಸರು ಕೂಡಲೇ ವಿಶೇಷ ತಂಡವನ್ನು ರಚಿಸಿ ತನಿಖೆ ಕೈಗೊಂಡರು. ಕೇವಲ ಕೆಲವೇ ಗಂಟೆಗಳಲ್ಲಿ ತಾಂತ್ರಿಕ ಸಾಕ್ಷ್ಯಗಳು ಮತ್ತು ಸ್ಥಳೀಯ ಸುಳಿವಿನ ಆಧಾರದ ಮೇಲೆ ಪೊಲೀಸರು ನಾಲ್ವರು ಆರೋಪಿಗಳನ್ನು ಹೆಡೆಮುರಿ ಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.

Also Read
12 ವರ್ಷಗಳ ಬಳಿಕ ಗುರು-ಮಂಗಳ ಯೋಗ: ಈ 3 ರಾಶಿಯವರಿಗೆ ತೆರೆಯಲಿದೆ ಅದೃಷ್ಟದ ಬಾಗಿಲು, ನಿಮ್ದೂ ಇದೇ ರಾಶಿನಾ? Astrology
Money And Phone

ಪಲ್ಲಿಕರನೈ ಪೊಲೀಸ್ ಠಾಣೆಯಲ್ಲಿ ದಾಖಲಾದ ಈ ಪ್ರಕರಣಕ್ಕೆ ಸಂಬಂಧಿಸಿದಂತೆ, ಚೆನ್ನೈ ಮೂಲದ ಸಾಯಿ ಅಬುತಾಕಿರ್ ಅಲಿಯಾಸ್ ಅಬು (18), ಪ್ರಕಾಶ್ ರಾಜ್ (22), ಪೂಬಾಲನ್ (23) ಮತ್ತು ಸಂಜಯ್ (21) ಎಂದು ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ. ಬಂಧಿತ ಎಲ್ಲಾ ಆರೋಪಿಗಳನ್ನು ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯವು ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಮೊಬೈಲ್ ಆ್ಯಪ್‌ಗಳ ಮೂಲಕ ಸುಲಭವಾಗಿ ಸಾಲ ಪಡೆಯುವ ಸೌಲಭ್ಯವನ್ನು ಸಮಾಜಘಾತುಕ ಶಕ್ತಿಗಳು ಯಾವೆಲ್ಲಾ ಕ್ರಿಮಿನಲ್ ಕೃತ್ಯಗಳಿಗೆ ಬಳಸಿಕೊಳ್ಳುತ್ತಿದ್ದಾರೆ ಎಂಬುದಕ್ಕೆ ಈ ಪ್ರಕರಣ ಎಚ್ಚರಿಕೆಯ ಗಂಟೆಯಾಗಿದೆ, (ಏಜೆನ್ಸೀಸ್​).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net