

ಪ್ರಮುಖ ಮುಖ್ಯಾಂಶಗಳು
ಮಾಹಿತಿ ಪ್ರಕಾರ, ಈ ಘಟನೆಯು ಜುಲೈ 27 ರಂದು ನಡೆದಿದ್ದು, ಈಗ ಈ ಘಟನೆ ವಿಡಿಯೋ ಸೋಷಿಯಲ್ ಮೀಡಿಯಾನಲ್ಲಿ ವೈರಲ್ ಆಗುತ್ತಿದ್ದು, ದೇಶದ ಆರೋಗ್ಯ ವ್ಯವಸ್ಥೆಗೆ ನೆಟ್ಟಿಗರು ಹಿಡಿಶಾಪ ಹಾಕುತ್ತಿದ್ದಾರೆ.
ನಂತರ ಮಾಧ್ಯಮದವರೊಂದಿಗೆ ಮಾತನಾಡಿರುವ ಮೃತನ ತಂದೆ, ಅಂದು ನನ್ನ ಮಗನಿಗೆ ಡಯಾಲಿಸಿಸ್ ಮಾಡಿಸಬೇಕಿತ್ತು. ಆಂಬ್ಯುಲೆನ್ಸ್ಗೆ ಕರೆ ಮಾಡಿದ ಒಂದು ಗಂಟೆ ತಡವಾಗಿ ನಮ್ಮ ಮನೆಗೆ ಬಂದಿದೆ. ಆಸ್ಪತ್ರೆ ತಲುಪಲು ಮೂರು ಕಿ.ಮೀ ಇದ್ದಾಗ ಆಕ್ಸಿಜನ್ ಖಾಲಿಯಾಗಿದ್ದು, ನನ್ನ ಮಗನ ಉಸಿರಾಟದಲ್ಲಿ ವ್ಯತ್ಯಯವಾಗಿದೆ. ಹೀಗಾಗಿ ಅವನು ಆಂಬ್ಯುಲೆನ್ಸ್ನಲ್ಲಿಯೇ ಪ್ರಾಣ ಚೆಲ್ಲಿದ್ದಾನೆಂದು ಹೇಳಿದ್ದಾರೆ. ಅಂದು ನನ್ನ ಮಗನಿಗೆ ಸರಿಯಾಗಿ ಆಕ್ಸಿಜನ್ ದೊರಕ್ಕಿದ್ದರೆ ಇಂದು ಅವನು ಜೀವಂತವಾಗಿರುತ್ತಿದ್ದ ಎಂದು ಕಣ್ಣೀರನ್ನು ಸುರಿಸಿದ್ದಾರೆ.
ಮುಂದುವರಿದ ತನಿಖೆ!
ಈ ಘಟನೆ ರಾಜ್ಯದ್ಯಂತ ಸಾಕಷ್ಟು ವಿವಾದಕ್ಕೆ ಕಾರಣವಾಗುತ್ತಿದ್ದಂತೆ,
ಮುಖ್ಯ ವೈದ್ಯಕೀಯ ಮತ್ತು ಆರೋಗ್ಯ ಅಧಿಕಾರಿ ಡಾ. ಡಿ. ಜೆ. ಮೊಹಂತಿ ಒಂದು ಸಮಿತಿಯನ್ನು ರಚಿಸಿದ್ದು, ಈ ಅವಗಢಕ್ಕೆ ಕಾರಣವೇನು? ಇದರಲ್ಲಿ ಆಂಬುಲೆನ್ಸ್ ಪಾಲೆಷ್ಟು? ಆಕ್ಸಿಜನ್ ಏಕೆ ಸರಿಯಾಗಗಿ ಪೂರೈಕೆಯಾಗಿಲ್ಲ? ಇದಕ್ಕೆ ಹೊಣೆಯಾರು? ಮೊದಲಾದ ಪ್ರಶ್ನೆಗಳಿಗೆ ಉತ್ತರವನ್ನು ಕಂಡುಕೊಳ್ಳಲಾಗುತ್ತಿದ್ದು, ಈ ಘಟನೆಗೆ ಕಾರಣರಾದವರ ಮೇಲೆ ಕಠಿಣ ಕ್ರಮ ಕೈಗೊಳ್ಳುದಾಗಿ ಮೊಹಂತಿ ಭರವಸೆ ನೀಡಿದ್ದಾರೆ,
(ಏಜನ್ಸೀಸ್).