ಹೆಸರು ಕೇಳಿ ಗುಂಡಿಕ್ಕಿದ ಉಗ್ರರು: ಧರ್ಮವನ್ನಾಧರಿಸಿ ಕೊಲೆ ಶಂಕೆ; ಕಣಿವೆ ರಾಜ್ಯದಲ್ಲಿ ಬಲಿಯಾದ ಛತ್ತೀಸ್ಗಢದ ಕಾರ್ಮಿಕರು! Targeted Killings in Jammu And Kashmir
ಹೆಸರು ಕೇಳಿ ಗುಂಡಿಕ್ಕಿ ಛತ್ತೀಸ್ಗಢದ ಇಬ್ಬರು ಕಾರ್ಮಿಕರ ಹತ್ಯೆ
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಕಣಿವೆ ರಾಜ್ಯದಲ್ಲಿ ಉಗ್ರರ ಕೃತ್ಯ
ಹೆಸರು ಕೇಳಿ ಗುಂಡಿಕ್ಕಿ ಛತ್ತೀಸ್ಗಢದ ಇಬ್ಬರು ಕಾರ್ಮಿಕರ ಹತ್ಯೆ
ಧರ್ಮವನ್ನಾಧರಿಸಿ ನಡೆದ ಹತ್ಯೆ ಶಂಕೆ
ಜಮ್ಮು-ಕಾಶ್ಮೀರ: ಛತ್ತೀಸ್ಗಢದಿಂದ ಜಮ್ಮು-ಕಾಶ್ಮೀರಕ್ಕೆ ಕೂಲಿ ಕೆಲಸಕ್ಕೆಂದು ತೆರಳಿದ್ದ ಇಬ್ಬರು ಕಾರ್ಮಿಕರನ್ನು ಅವರ ಧರ್ಮದ ಗುರುತಿನ ಆಧಾರದ ಮೇಲೆ (Targeted Killings in Jammu And Kashmir) ಹತ್ಯೆ ಮಾಡಿರುವ ಘಟನೆ ಕಾಶ್ಮೀರದ ಕುಲ್ಗಮ್ನಲ್ಲಿ ವರದಿಯಾಗಿದೆ.
ಈ ಘಟನೆಯು ಶುಕ್ರವಾರ (ಜು.31) ಸಂಜೆ ಸಮಯದಲ್ಲಿ ನಡೆದಿದ್ದು, ಈ ಕೃತ್ಯವು ಕಳೆದ ವರ್ಷ ಪಹಲ್ಗಾಮ್ನಲ್ಲಿ ಪ್ರವಾಸಿಗರ ಮೇಲೆ ನಡೆದ ದಾಳಿಯ ಮಾದರಿಯಲ್ಲಿ ನಡೆಸಲಾಗಿದೆ ಎಂದು ಆರೋಪಿಸಲಾಗಿದೆ.
ಮೃತ ದುರ್ದೈವಿಗಳನ್ನು ದೀಪಕ್ ರಾತ್ರೇ, ಹಾಗೂ ಬೋಪಿಂದರ್ ಎಂದು ಗುರುತಿಸಲಾಗಿದೆ. ಇವರು ಕೆಲಸ ಮಾಡುತ್ತಿದ್ದ ಸ್ಥಳದಲ್ಲಿ ಇತರ ಧರ್ಮದ ವಲಸೆ ಕಾರ್ಮಿಕರಿದ್ದರೂ ಇವರಿಬ್ಬರನ್ನೇ ಆಯ್ಕೆ ಮಾಡಿ ಭಯೋತ್ಪಾದಕರು ಸಾಯಿಸಿದ್ದಾರೆಂದು ತಿಳಿದು ಬಂದಿದೆ. ಈ ಉಗ್ರದಾಳಿಯನ್ನು ಕುಖ್ಯಾತ ಭಯೋತ್ಪಾದಕ ಸಂಘಟನೆಯಾದ ಲಷ್ಕರ್-ಎ-ತೊಬ್ದಾ ನಡೆಸಿದೆ ಎಂದು ಸೇನಾ ಮೂಲಗಳು ತಿಳಿಸಿವೆ.
ದೀಪಕ್ ರಾತ್ರೇಯನ್ನು ಆಸ್ಪತ್ರೆಗೆ ಸಾಗಿಸುತ್ತಿದ್ದಾಗ ಮಾರ್ಗ ಮಧ್ಯೆಯೇ ಪ್ರಾಣವನ್ನು ಕಳೆದುಕೊಂಡಿದ್ದರೆ, ಬೋಪಿಂದರ್ಗೆ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿರುವುದಾಗಿ ಭದ್ರತಾ ಸಿಬ್ಬಂದಿಗಳು ತಿಳಿಸಿದ್ದಾರೆ.
ಸೇನೆ ಅಲರ್ಟ್; ಮುಂದುವರಿದ ಕಾರ್ಯಾಚರಣೆ!
ಕಳೆದ ಕೆಲ ದಿನಗಳಿಂದ ಕಣಿವೆ ರಾಜ್ಯದಲ್ಲಿ ಮತ್ತೆ ಭಯೋತ್ಪಾದಕತೆ ಹಾಗೂ ಉದ್ವಿಗ್ನ ವಾತಾವರಣ ಹೆಚ್ಚಿದಂತಿದೆ. ಕೆಲ ದಿನಗಳ ಹಿಂದೆ ಪೊಲೀಸ್ ಸಿಬ್ಬಂದಿವೊಬ್ಬನನ್ನು ಲಷ್ಕರ್ ಉಗ್ರರು ಕೊಂದಿದ್ದ ಘಟನೆ ವರದಿಯಾಗಿತ್ತು.
ಈಗ ಹೆಸರನ್ನು ಕೇಳಿ, ಧರ್ಮವನ್ನು ಗುರುತಿಸಿ ವಲಸೆ ಕಾರ್ಮಿಕರನ್ನು ಕೊಲೆ ಮಾಡಿದ ಘಟನೆ ರಾಜ್ಯದಲ್ಲಿ ಮಾತ್ರವಲ್ಲದೇ ದೇಶದಲ್ಲಿ ಉದ್ವಗ್ನ ಪರಿಸ್ಥಿತಿಗೆ ಕಾರಣವಾಗಬಹುದಾಗಿದೆ.
ಈ ಹಿನ್ನಲೆಯಲ್ಲಿ ಭದ್ರತಾ ಸಿಬ್ಬಂದಿಗಳು ಹಾಗೂ ಜಮ್ಮು ಪೊಲೀಸರು ಸಕ್ರೀಯರಾಗಿದ್ದು, ಈ ಕೊಲೆ ಹಿಂದಿರುವ ಗುಂಪು ಯಾವುದು? ಇವರ ಮೇಲೆ ಏಕೆ ದಾಳಿ ನಡೆಸಲಾಯಿತು? ಇದು ವೈಯಕ್ತಿಕ ದ್ವೇಷವೇ? ಅಥವಾ ಕೋಮು ಸೌಹಾರ್ದತೆಯನ್ನು ಹಾಳು ಮಾಡುವ ಉದ್ದೇಶವೇ? ಎಂದು ತನಿಖೆ ಬಳಿಕ ತಿಳಿದು ಬರಬೇಕಿದೆ, (ಏಜನ್ಸೀಸ್).