ಚರ್ಚೆ ಆರಂಭಿಸಿದ ರಾಹುಲ್ ಗಾಂಧಿ, ವಿದ್ಯಾರ್ಥಿಗಳೇ, ಮೂರ್ಖರೇ ಹಾಗೂ ಅಂಧಭಕ್ತರೇ ಎಂದು ಹೇಳುವ ಮೂಲಕ ಮಾತನ್ನು ಪ್ರಾರಂಭಿಸಿದರು. ಈ ಹೇಳಿಕೆ ಆಡಳಿತ ಪಕ್ಷದವರ ಕೆಂಗಣ್ಣಿಗೆ ಗುರಿಯಾಗಿದ್ದು, ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜುಜು, ರಾಹುಲ್ ಗಾಂಧಿ ಉಪಯೋಗಿಸಿದ ಪದಗಳು ಅಸಾಂವಿಧಾನಿಕವಾಗಿದೆ, ನಾವು ಈ ವಿಷಯದ ಕುರಿತು ಮುಕ್ತ ಚರ್ಚೆಗೆ ನಿರ್ಧರಿಸಿದ್ದು, ವಿರೋಧ ಪಕ್ಷದವರು ಮಾತನಾಡುವಾಗ ಅಡ್ಡಿ ಪಡಿಸುವುದಿಲ್ಲ. ಅದರೆ ಅವರಿಗೆ ಅಸಂವಿಧಾನಿಕ ಪದಗಳನ್ನು ಬಳಸಲು ಯಾವುದೇ ಅವಕಾಶವಿಲ್ಲ, ಇದನ್ನು ನೀವು ತಡೆಯಬೇಕೆಂದು ಸ್ಪೀಕರ್ ಓಂ ಬಿರ್ಲಾ ಅವರಲ್ಲಿ ಮನವಿ ಮಾಡಿದ್ದಾರೆ, (ಏಜನ್ಸೀಸ್).