ಕಾಂಗ್ರೆಸ್ ನಂಬಿಕೆಗೆ ಅರ್ಹವಲ್ಲದ ಪಕ್ಷ, ಜಾಸ್ತಿ ನಂಬಬೇಡಿ: ಸಿಎಂ ವಿಜಯ್​​​ಗೆ ಎಚ್ಚರಿಸಿದ ರಾಮ್ ಮಾಧವ್ | Ram Madhav

ಕಾಂಗ್ರೆಸ್ ನಂಬಿಕೆಗೆ ಅರ್ಹವಲ್ಲದ ಪಕ್ಷ ಎಂದು ಬಣ್ಣಿಸಿರುವ ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ಮತ್ತು ತಮಿಳುನಾಡಿನ ಉಸ್ತುವಾರಿ ರಾಮ್ ಮಾಧವ್, ಶುಕ್ರವಾರ(ನ. 14) ಮುಖ್ಯಮಂತ್ರಿ ಹಾಗೂ ಟಿವಿಕೆ ಅಧ್ಯಕ್ಷ ಸಿ. ಜೋಸೆಫ್ ವಿಜಯ್ ಅವರಿಗೆ ಕಾಂಗ್ರೆಸ್ ಹೆಚ್ಚು ನಂಬದಂತೆ ಎಚ್ಚರಿಕೆ ನೀಡಿದ್ದಾರೆ.
ಕಾಂಗ್ರೆಸ್ ನಂಬಿಕೆಗೆ ಅರ್ಹವಲ್ಲದ ಪಕ್ಷ, ಜಾಸ್ತಿ ನಂಬಬೇಡಿ: ಸಿಎಂ ವಿಜಯ್​​​ಗೆ ಎಚ್ಚರಿಸಿದ ರಾಮ್ ಮಾಧವ್ | Ram Madhav
Published on: 

ಚೆನ್ನೈ: ಕಾಂಗ್ರೆಸ್ ನಂಬಿಕೆಗೆ ಅರ್ಹವಲ್ಲದ ಪಕ್ಷ ಎಂದು ಬಣ್ಣಿಸಿರುವ ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ಮತ್ತು ತಮಿಳುನಾಡಿನ ಉಸ್ತುವಾರಿ ರಾಮ್ ಮಾಧವ್, ಶುಕ್ರವಾರ(ನ. 14) ಮುಖ್ಯಮಂತ್ರಿ ಹಾಗೂ ಟಿವಿಕೆ ಅಧ್ಯಕ್ಷ ಸಿ. ಜೋಸೆಫ್ ವಿಜಯ್ ಅವರಿಗೆ ಕಾಂಗ್ರೆಸ್ ಹೆಚ್ಚು ನಂಬದಂತೆ ಎಚ್ಚರಿಕೆ ನೀಡಿದ್ದಾರೆ.

ಈ ಕುರಿತು ಚೆನ್ನೈನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿರುವ ಅವರು, ನಿಮಗಿಂತ ಹೆಚ್ಚು ಅನುಕೂಲಕರವಾದ ಅವಕಾಶ ಸಿಕ್ಕರೇ ನಿಮ್ಮನ್ನೇ ಅದು ಕೈಬಿಡಬಹುದು. ಉದಾಹರಣೆಯಾಗಿ ಮಾಜಿ ಸಿಎಂ ಕೆ.ಕಾಮರಾಜ್ ಅವರನ್ನು ಉಲ್ಲೇಖಿಸಿದ ಅವರು, ಇಂದಿರಾ ಗಾಂಧಿಯವರನ್ನು ರಾಷ್ಟ್ರೀಯ ರಾಜಕಾರಣದ ಮುಂಚೂಣಿಗೆ ತರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಆ ಹಿರಿಯ ನಾಯಕನನ್ನೇ ಕಾಂಗ್ರೆಸ್ ಕಡೆಗಣಿಸಿತ್ತು ಎಂದಿದ್ದಾರೆ.

Also Read
ಎನ್ವಿಡಿಯಾ ಸಿಇಒ ಆಗಿ ಜೆನ್ಸನ್ ಹುವಾಂಗ್ ಮರು ನೇಮಕ?: ಉದ್ಯೋಗಿಗಳ ಒತ್ತಾಯ ಬೆಂಬಲಿಸಿದ ಎಲಾನ್ ಮಸ್ಕ್ | Jensen Huang
ಕಾಂಗ್ರೆಸ್ ನಂಬಿಕೆಗೆ ಅರ್ಹವಲ್ಲದ ಪಕ್ಷ, ಜಾಸ್ತಿ ನಂಬಬೇಡಿ: ಸಿಎಂ ವಿಜಯ್​​​ಗೆ ಎಚ್ಚರಿಸಿದ ರಾಮ್ ಮಾಧವ್ | Ram Madhav

ಇಂದು ತಮಿಳುನಾಡು ಸರ್ಕಾರವು ಕಾಂಗ್ರೆಸ್ ಅನ್ನು ಅವಲಂಬಿಸಿದೆ. ವಿಜಯ್ ಇದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಅವರಿಗೆ ಸ್ವಂತದ್ದೆಂದು ಏನೂ ಇಲ್ಲ, ಅವರು ಯಾವಾಗಲೂ ಬೇರೊಂದು ಪಕ್ಷದ ಆಶ್ರಯದಲ್ಲೇ ಬದುಕುತ್ತಾರೆ ಎಂದು ತಿಳಿಸಿದ್ದಾರೆ.

ಇದೇ ವೇಳೆ ಟಿವಿಕೆ ಗೆಲುವಿಗೆ ಬಿಜೆಪಿ ಸಹಾಯ ಮಾಡಿದೆ ಎಂಬ ಆರೋಪಗಳಿಗೆ ಪ್ರತಿಕ್ರಿಯಿಸಿದ ಅವರು, ಇಂತಹ ಹೇಳಿಕೆಗಳು ಜನರ ತೀರ್ಪನ್ನು ಅವಹೇಳನ ಮಾಡುತ್ತವೆ. ಬೇರೆ ಯಾವುದೋ ಬಾಹ್ಯ ಬೆಂಬಲದಿಂದ ಟಿವಿಕೆ ಚುನಾವಣೆಯಲ್ಲಿ ಗೆದ್ದಿದೆ ಎಂದು ಹೇಳುವ ಮೂಲಕ, ಅವರು ತಮಿಳುನಾಡಿನ ಜನರನ್ನು ಮತ್ತು ಅವರ ರಾಜಕೀಯ ವಿವೇಚನೆಯನ್ನು ಅವಮಾನಿಸುತ್ತಿದ್ದಾರೆ. ಆಡಳಿತ ಪಕ್ಷ ಟಿವಿಕೆ ವಿರುದ್ಧ ನಮ್ಮ ಹೋರಾಟ ನಡೆಯಲಿದೆ ಎಂದು ಕಿಡಿಕಾರಿದ್ದಾರೆ (ಏಜೆನ್ಸೀಸ್).