ಎನ್ವಿಡಿಯಾ ಸಿಇಒ ಆಗಿ ಜೆನ್ಸನ್ ಹುವಾಂಗ್ ಮರು ನೇಮಕ?: ಉದ್ಯೋಗಿಗಳ ಒತ್ತಾಯ ಬೆಂಬಲಿಸಿದ ಎಲಾನ್ ಮಸ್ಕ್ | Jensen Huang

ಚೀನಾದ ಸ್ಪೈಯೊಂದಿಗೆ ವಿವಾಹೇತರ ಸಂಬಂಧ ಹೊಂದಿದ ಆರೋಪದ ಮೇಲೆ ಎನ್ವಿಡಿಯಾ ಕಂಪನಿಯ ಸಿಇಒ ಹುದ್ದೆಗೆ ರಾಜೀನಾಮೆ ನೀಡಿರುವ ಜೆನ್ಸನ್ ಹುವಾಂಗ್ ಅವರನ್ನು ಮತ್ತೆ ಅದೇ ಹುದ್ದೆಗೆ ಮರು ನೇಮಕ ಮಾಡಿಕೊಳ್ಳಬೇಕೆಂಬ ಬೇಡಿಕೆಗಳು ಹೆಚ್ಚುತ್ತಿದ್ದು, ಪ್ರಪಂಚದ ನಂ. 01 ಶ್ರೀಮಂತ ಎಲಾನ್ ಮಸ್ಕ್ ಕೂಡ ಈ ಬೇಡಿಕೆಯನ್ನು ಬೆಂಬಲಿಸಿದ್ದಾರೆ.
ಎನ್ವಿಡಿಯಾ ಸಿಇಒ ಆಗಿ ಜೆನ್ಸನ್ ಹುವಾಂಗ್ ಮರು ನೇಮಕ?: ಉದ್ಯೋಗಿಗಳ ಒತ್ತಾಯ ಬೆಂಬಲಿಸಿದ ಎಲಾನ್ ಮಸ್ಕ್ | Jensen Huang
Published on: 

ವಾಷಿಂಗ್ಟನ್​: ಚೀನಾದ ಸ್ಪೈಯೊಂದಿಗೆ ವಿವಾಹೇತರ ಸಂಬಂಧ ಹೊಂದಿದ ಆರೋಪದ ಮೇಲೆ ಎನ್ವಿಡಿಯಾ ಕಂಪನಿಯ ಸಿಇಒ ಹುದ್ದೆಗೆ ರಾಜೀನಾಮೆ ನೀಡಿರುವ ಜೆನ್ಸನ್ ಹುವಾಂಗ್ ಅವರನ್ನು ಮತ್ತೆ ಅದೇ ಹುದ್ದೆಗೆ ಮರು ನೇಮಕ ಮಾಡಿಕೊಳ್ಳಬೇಕೆಂಬ ಬೇಡಿಕೆಗಳು ಹೆಚ್ಚುತ್ತಿದ್ದು, ಪ್ರಪಂಚದ ನಂ. 01 ಶ್ರೀಮಂತ ಎಲಾನ್ ಮಸ್ಕ್ ಕೂಡ ಈ ಬೇಡಿಕೆಯನ್ನು ಬೆಂಬಲಿಸಿದ್ದಾರೆ.

ಅಂತರಾಷ್ಟ್ರೀಯ ಮಾಧ್ಯಮ ವರದಿಗಳ ಪ್ರಕಾರ, ಜೆನ್ಸನ್ ಹುವಾಂಗ್ ಅವರನ್ನು ಮತ್ತೆ ಸಿಇಒ ಆಗಿ ನೇಮಿಸಬೇಕೆಂದು ಎನ್ವಿಡಿಯಾ ಉದ್ಯೋಗಿಗಳು ಒತ್ತಾಯಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಕಂಪನಿಯ ಎಂಜಿನಿಯರ್ ಒಬ್ಬರು ಮಾಡಿದ ವಿನಂತಿಯು ಇತರ ಉದ್ಯೋಗಿಗಳಿಂದ ಬೆಂಬಲವನ್ನು ಪಡೆಯುತ್ತಿದೆ. ಅವರನ್ನು ಮತ್ತೆ ಕಂಪನಿಗೆ ಕರೆತರುವಂತೆ ಅನೇಕ ಜನರು ಕೇಳಿಕೊಂಡಿದ್ದಾರೆ ಎನ್ನಲಾಗಿದೆ.

ಎನ್ವಿಡಿಯಾ ಉದ್ಯೋಗಿಗಳ ಒತ್ತಾಯಕ್ಕೆ ಬೆಂಬಲಿಸಿರುವ ಎಲಾನ್ ಮಸ್ಕ್, ಎಕ್ಸ್​ನಲ್ಲಿ ಪೋಸ್ಟ್ ಹಾಕಿದ್ದು, ಜೆನ್ಸನ್ ಹುವಾಂಗ್ ಅವರನ್ನು ಮತ್ತೆ ನೇಮಕ ಮಾಡಿಕೊಳ್ಳಲು ಅರ್ಜಿಗೆ ಸಹಿ ಹಾಕಲಾಗುತ್ತಿದೆ. ನಾನು ಕೂಡ ಅರ್ಜಿಗೆ ಸಹಿ ಹಾಕುತ್ತೇನೆ ಎಂದು ಹೇಳಿದ್ದಾರೆ.

Also Read
ಪ್ರಧಾನಿ ಮೋದಿ ವಿರುದ್ಧ ಫೋನ್ ಟ್ಯಾಪ್ ಆರೋಪ: ರಾಹುಲ್ ಗಾಂಧಿ ಹೇಳಿಕೆಯಿಂದ ಅಂತರ ಕಾಯ್ದುಕೊಂಡ ಆಪ್ತ ಸ್ಯಾಮ್ ಪಿತ್ರೋಡಾ | Sam Pitroda
ಎನ್ವಿಡಿಯಾ ಸಿಇಒ ಆಗಿ ಜೆನ್ಸನ್ ಹುವಾಂಗ್ ಮರು ನೇಮಕ?: ಉದ್ಯೋಗಿಗಳ ಒತ್ತಾಯ ಬೆಂಬಲಿಸಿದ ಎಲಾನ್ ಮಸ್ಕ್ | Jensen Huang

1993ರಲ್ಲಿ ಎನ್ವಿಡಿಯಾ ಕಂಪನಿ ಸಹ ಸ್ಥಾಪಕರಲ್ಲೊಬ್ಬರಾಗಿರುವ ಜೆನ್ಸನ್ ಹುವಾಂಗ್, ಅದನ್ನು ಜಾಗತಿಕ ತಂತ್ರಜ್ಞಾನ ಶಕ್ತಿ ಕೇಂದ್ರವಾಗಿ ಪರಿವರ್ತಿಸಿದ್ದಾರೆ. ಅವರ ಮೂರು ದಶಕಗಳ ನಾಯಕತ್ವವು ಅವರನ್ನು ಎನ್ವಿಡಿಯಾದ ಗುರುತು, ಕಾರ್ಯತಂತ್ರ ಮತ್ತು ಬೆಳವಣಿಗೆಯೊಂದಿಗೆ ನಿಕಟ ಸಂಬಂಧ ಹೊಂದಿದೆ.

ಮತ್ತೊಂದೆಡೆ, ಎನ್ವಿಡಿಯಾ ಕಂಪನಿಯೂ ಮರು ನೇಮಕದ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆದರೆ ಮುಂದಿನ ಸಿಇಒ ಅವರನ್ನು ಹುಡುಕಲು ಪ್ರಯತ್ನಗಳನ್ನು ಪ್ರಾರಂಭಿಸಿದೆ. ಆರ್ಮ್ ಹೋಲ್ಡಿಂಗ್ಸ್ ಸಿಇಒ ರೆನೆ ಹಾಸ್ ಅವರನ್ನು ಸಿಇಒ ಹುಡುಕಾಟದ ಭಾಗವಾಗಿ ಸಂಪರ್ಕಿಸಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ (ಏಜೆನ್ಸೀಸ್).