"ನಾಗರಿಕ ದಂಗೆ" ಸೃಷ್ಟಿಸುವುದೇ ಬಿಜೆಪಿ ಉದ್ದೇಶ: ಅಹಿತಕರ ಘಟನೆ ನಡೆದರೆ ಸರ್ಕಾರವೇ ಹೊಣೆ; CJP ವಕ್ತಾರ ಸೌರವ್​ ದಾಸ್​ ಎಚ್ಚರಿಕೆ! Saurav Das

ದೇಶದಲ್ಲಿ ನಾಗರಿಕ ದಂಗೆಸೃಷ್ಟಿಸಲು ಬಿಜೆಪಿ ಯತ್ನಿಸುತ್ತಿದೆ, ಯಾವುದೇ ಅಹಿತಕರ ಘಟನೆ ನಡೆದರೆ ಸರ್ಕಾರ ಹಾಗೂ ಪೊಲೀಸರೇ ಹೊಣೆ ಎಂದು CJP ವಕ್ತಾರ ಸೌರವ್ ದಾಸ್ ಎಚ್ಚರಿಸಿದ್ದಾರೆ. ವಿವರ ಇಲ್ಲಿದೆ.
The ruling dispensation's objective is to incite civil unrest in the country; the BJP government will be held responsible if any untoward incident occurs, said CJP spokesperson Saurav Das.
ದೇಶದಲ್ಲಿ ನಾಗರಿಕ ಧಂಗೆ ಸೃಷ್ಟಿಸುವುದೇ ಆಡಳಿತಾರೂಢರ ಉದ್ದೇಶ; ಯಾವುದೇ ಅಹಿತಕರ ಘಟನೆ ಸಂಭವಿಸಿದರೆ ಬಿಜೆಪಿ ಸರ್ಕಾರವೇ ಹೊಣೆ ಎಂದ CJP ವಕ್ತಾರ ಸೌರವ್ ದಾಸ್
Published on: 

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಎಸ್​ಐಆರ್​ ಹಾಗೂ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ರಾಜೀನಾಮೆ ಕುರಿತಂತೆ ಪ್ರತಿಭಟನೆ ಬಿಸಿ ಏರುತ್ತಿದೆ. ಇದರ ಬೆನ್ನಲ್ಲೇ, ಸಿಜೆಪಿ ವಕ್ತಾರ ಸೌರವ್ ದಾಸ್ ಕೇಂದ್ರ ಸರ್ಕಾರದ ವಿರುದ್ಧ ಗಂಭೀರ ಸ್ವರೂಪದ ಆರೋಪ ಮಾಡಿದ್ದು, ಕೇಂದ್ರ ಸರ್ಕಾರ ಜನಸಾಮಾನ್ಯರನ್ನು ಪರಸ್ಪರ ಎತ್ತಿಕಟ್ಟಿ ದೇಶದಲ್ಲಿ ದೊಡ್ಡ ಮಟ್ಟದ ಗಲಭೆ ಸೃಷ್ಟಿಸಲು ಹವಣಿಸುತ್ತಿದೆ ಎಂದು ಅವರು ಆರೋಪಿಸಿದ್ದಾರೆ.

ಈ ಕುರಿತು ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಸರಣಿ ಪೋಸ್ಟ್ ಹಂಚಿಕೊಂಡಿರುವ ಸೌರವ್ ದಾಸ್, ದೆಹಲಿ ಪೊಲೀಸರ ನಿಷ್ಕ್ರಿಯತೆಯನ್ನು ತರಾಟೆಗೆ ತೆಗೆದುಕೊಂಡಿದ್ದಲ್ಲದೆ, ಶಾಂತಿಯುತವಾಗಿ ಹೋರಾಟ ನಡೆಸುತ್ತಿರುವ ಯುವಕರ ಮೇಲೆ ದಾಳಿ ನಡೆಯುವ ಸಾಧ್ಯತೆಯಿದೆ ಎಂದು ಆತಂಕ ಹೊರಹಾಕಿದ್ದಾರೆ.

ಜನರ ಮಧ್ಯೆಯೇ ಬೆಂಕಿ ಹಚ್ಚಲು ಯತ್ನ

ಸೋಷಿಯಲ್ ಮೀಡಿಯಾದಲ್ಲಿ ಆಕ್ರೋಶ ಹೊರಹಾಕಿರುವ ಸೌರವ್ ದಾಸ್, "ನಾನು ಈ ಮಾತನ್ನು ಮೊದಲೇ ಹೇಳಿದ್ದೆ, ಈಗಲೂ ಎಚ್ಚರಿಸುತ್ತಿದ್ದೇನೆ. ದೇಶದಲ್ಲಿ ದೊಡ್ಡ ಮಟ್ಟದ ಅಶಾಂತಿ ಸೃಷ್ಟಿಸುವುದೇ ಸರ್ಕಾರದ ಹುನ್ನಾರ. ನಾಗರಿಕರನ್ನು ನಾಗರಿಕರ ವಿರುದ್ಧವೇ ಎತ್ತಿಕಟ್ಟಿ, ಪರಸ್ಪರ ಹೊಡೆದಾಡಿಕೊಳ್ಳುವ ವಾತಾವರಣ ಸೃಷ್ಟಿಸಲು ವ್ಯವಸ್ಥಿತ ಸಂಚು ನಡೆಯುತ್ತಿದೆ ಎಂದು ಆರೋಪಿಸಿದ್ದಾರೆ.

ಪ್ರಜಾಪ್ರಭುತ್ವದಲ್ಲಿ ತಮ್ಮ ಹಕ್ಕುಗಳಿಗಾಗಿ ಧ್ವನಿ ಎತ್ತುತ್ತಿರುವ ಇಂದಿನ ಯುವ ಪೀಳಿಗೆ ಸಂಪೂರ್ಣ ಶಾಂತಿಯುತ ಮಾರ್ಗದಲ್ಲಿದೆ. ಆದರೆ ಇವರ ಶಾಂತಿಯುತ ಪ್ರತಿಭಟನೆಯನ್ನು ಹತ್ತಿಕ್ಕಲು, ಶಾಂತಿ ಕದಡಲು ಕೆಲ ದುಷ್ಟ ಶಕ್ತಿಗಳು ಹೊಂಚು ಹಾಕುತ್ತಿವೆ ಎಂದು ಅವರು ಕಿಡಿಕಾರಿದ್ದಾರೆ.

Also Read
SIR ವಿರುದ್ಧ ರಣಕಹಳೆ: ಜಂತರ್‌-ಮಂತರ್‌ ಪ್ರತಿಭಟನೆಗೂ ಮುನ್ನವೇ ರಾಹುಲ್‌-ಪ್ರಿಯಾಂಕಾ ಪೊಲೀಸ್ ವಶಕ್ಕೆ! Jantar Mantar Protest
The ruling dispensation's objective is to incite civil unrest in the country; the BJP government will be held responsible if any untoward incident occurs, said CJP spokesperson Saurav Das.

ಮನೆಯಿಂದ ಹೊರಬರುವ ಮುನ್ನವೇ ಅರೆಸ್ಟ್ ಮಾಡಿ!

ಪ್ರತಿಭಟನಾ ಸ್ಥಳದಲ್ಲಿ ಯಾವುದೇ ಕ್ಷಣದಲ್ಲಾದರೂ ಅಹಿತಕರ ಘಟನೆ ನಡೆಯಬಹುದು ಎಂದು ಶಂಕಿಸಿರುವ ದಾಸ್, ದೆಹಲಿ ಪೊಲೀಸರನ್ನು ನೇರವಾಗಿ ಎಚ್ಚರಿಸಿದ್ದಾರೆ. ಬಲಪಂಥೀಯ ಉಗ್ರಗಾಮಿಗಳು ಪ್ರತಿಭಟನಾ ಸ್ಥಳಕ್ಕೆ ನುಗ್ಗಿ ಶಾಂತಿ ಕದಡಲು ಯತ್ನಿಸುತ್ತಿದ್ದಾರೆ. ಅಂತಹವರು ಪ್ರತಿಭಟನೆಯ ಜಾಗಕ್ಕೆ ಕಾಲಿಡದಂತೆ, ಶಾಂತಿಯುತ ಪ್ರತಿಭಟನಾಕಾರರ ಮೇಲೆ ಹಲ್ಲೆ ಅಥವಾ ಪ್ರಾಣಾಪಾಯ ಉಂಟುಮಾಡದಂತೆ ದೆಹಲಿ ಪೊಲೀಸರು ತಕ್ಷಣ ಕ್ರಮ ಕೈಗೊಳ್ಳಬೇಕು, ಎಂದು ಆಗ್ರಹಿಸಿದ್ದಾರೆ.

ಅಂತಹ ಗಲಭೆಕೋರರು ತಮ್ಮ ಮನೆಗಳಿಂದ ಹೊರಡುವ ಮುನ್ನವೇ ಪೊಲೀಸರು ಅವರನ್ನು ಮುನ್ನೆಚ್ಚರಿಕೆ ಕ್ರಮವಾಗಿ ವಶಕ್ಕೆ ಪಡೆಯಬೇಕು. ಯಾವುದೇ ಅಹಿತಕರ ಘಟನೆ ನಡೆಯಲು ಪೊಲೀಸರು ಅವಕಾಶ ನೀಡಬಾರದು ಎಂದು ದೆಹಲಿ ಪೊಲೀಸರಿಗೆ ಟ್ಯಾಗ್ ಮಾಡಿ ಒತ್ತಾಯಿಸಿದ್ದಾರೆ.

ಏನಾದರೂ ಹೆಚ್ಚು ಕಮ್ಮಿಯಾದರೆ ಬಿಜೆಪಿ ಸರ್ಕಾರವೇ ಹೊಣೆ!

ದೆಹಲಿಯಲ್ಲಿ ನಡೆಯುತ್ತಿರುವ ಹೋರಾಟದ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆ ಸಂಭವಿಸಿದರೂ ಅದಕ್ಕೆ ಕೇಂದ್ರದ ಬಿಜೆಪಿ ಸರ್ಕಾರ ಮತ್ತು ದೆಹಲಿ ಪೊಲೀಸರೇ ಹೊಣೆ ಎಂದು ದಾಸ್ ಎಚ್ಚರಿಕೆ ರವಾನಿಸಿದ್ದಾರೆ. "ಪ್ರತಿಭಟನಾ ನಿರತ ಯುವಕರಿಗೆ ಸಣ್ಣ ಗಾಯವಾದರೂ ಅಥವಾ ಯಾವುದಾದರೂ ಹಿಂಸಾಚಾರ ಭುಗಿಲೆದ್ದರೆ ಅದಕ್ಕೆ ಸಂಪೂರ್ಣ ಹೊಣೆಗಾರಿಕೆಯನ್ನು ಸರ್ಕಾರ ಹಾಗೂ ಪೊಲೀಸರೇ ಹೊರಬೇಕಾಗುತ್ತದೆ ಎಂದು ಗುಡುಗಿದ್ದಾರೆ, (ಏಜೆನ್ಸೀಸ್​).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net