SIR ವಿರುದ್ಧ ರಣಕಹಳೆ: ಜಂತರ್‌-ಮಂತರ್‌ ಪ್ರತಿಭಟನೆಗೂ ಮುನ್ನವೇ ರಾಹುಲ್‌-ಪ್ರಿಯಾಂಕಾ ಪೊಲೀಸ್ ವಶಕ್ಕೆ! Jantar Mantar Protest

SIR ವಿರೋಧಿಸಿ ನವದೆಹಲಿಯ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ಆರಂಭಿಸುವ ಮುನ್ನವೇ ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿಯವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
Delhi Police detained Congress leaders Rahul Gandhi and Priyanka Gandhi Vadra as they were proceeding to stage a protest at Jantar Mantar.
SIR ವಿರುದ್ಧ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸಲು ಮುಂದಾಗುತ್ತಿದ್ದಂತೆ ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ವಾದ್ರಾ ಅವರನ್ನು ವಶಕ್ಕೆ ಪಡೆದ ದೆಹಲಿ ಪೊಲೀಸರು.
Published on: 

ನವದೆಹಲಿ: ಬುಧವಾರ (ಅ.7) ಚುನಾವಣಾ ಆಯೋಗ ನಡೆಸುತ್ತಿರುವ ಮತದಾರರ ವಿಶೇಷ ತೀವ್ರ ಪರಿಷ್ಕರಣೆ (SIR) ಗೆ ವಿರೋಧ ಹಾಗೂ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಬೇಕೆಂದು ದೆಹಲಿಯ ಜಂತರ್​-ಮಂತರ್​ನಲ್ಲಿ ಪ್ರತಿಭಟನೆ ನಡೆಸುವುದಾಗಿ ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ಕರೆ ನೀಡಿದ್ದರು.

ಆದರೆ, ಈಗ ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಹಾಗೂ ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ಸೇರಿದಂತೆ ಅನೇಕ ಪ್ರತಿಭಟನಾಕಾರರನ್ನು ದೆಹಲಿ ಪೊಲೀಸರು ವಶಕ್ಕೆ ಪಡೆದಿರುವುದಾಗಿ ವರದಿಯಾಗಿದೆ.

ಸಂಸದರನ್ನು ಥಳಿಸುತ್ತಿದ್ದಾರೆ!

ಪೊಲೀಸರಿಂದ ಬಂಧನಕ್ಕೆ ಒಳಗಾಗುತ್ತಿದ್ದ ಸಂದರ್ಭದಲ್ಲಿ ಮಾತನಾಡಿದ ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ, ದೆಹಲಿ ಪೊಲೀಸರು ಸಂಸದರ ಮೇಲೆ ಮನ ಬಂದಂತೆ ಹಲ್ಲೆ ನಡೆಸುತ್ತಿದ್ದು, ನನ್ನ ಮೈತುಂಬಾ ಗಾಯಗೊಳಿಸಿದ್ದಾರೆಂದು ಆರೋಪಿಸಿದ್ದಾರೆ. ಇವರು, ನಮ್ಮನ್ನು ನೆಲದ ಮೇಲೆ ಬಿಸಾಡುತ್ತಿದ್ದು, ಈಗ ಇಲ್ಲಿಂದ ನಮ್ಮನ್ನು ಕರೆದದೊಯ್ಯಲು ಮುಂದಾಗಿದ್ದಾರೆ. ಆದರೆ ನಾವು ಇಲ್ಲಿಂದ ಎಲ್ಲಿಗೂ ಹೋಗುವುದಿಲ್ಲ ಎಂದು ಸಂಸದೆ ಆಕ್ರೋಶ ಭರಿತವಾಗಿ ನುಡಿದಿದ್ದಾರೆ.

ರಾಹುಲ್​ನನ್ನು​ ಎತ್ತಿಕೊಂಡು ಹೋದ ಪೊಲೀಸ್​!

ಇನ್ನು ಪ್ರತಿಭಟನೆ ನೇತೃತ್ವವಹಿಸಿದ್ದ, ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್​ ಗಾಂಧಿಯನ್ನು ದೆಹಲಿ ಪೊಲೀಸರು ಕೈ-ಕಾಲುಗಳನ್ನು ಹಿಡಿದುಕೊಂಡು ಹೋಗಿ ಪೊಲೀಸ್​ ವ್ಯಾನ್​ನಲ್ಲಿ ತುಂಬಿಸಿದ್ದಾರೆ. ಈ ಸಂದರ್ಭದಲ್ಲಿ ರಾಹುಲ್​ ಗಾಂಧಿ ಪೊಲೀಸರ ಕೈಯಿಂದ ತಪ್ಪಿಸಿಕೊಳ್ಳಲು ಮಾಡಿರುವ ವಿಫಲ ಪ್ರಯತ್ನದ ವಿಡಿಯೋಗಳು ಸೋಷಿಯಲ್​ ಮೀಡಿಯಾನಲ್ಲಿ ವೈರಲ್​ ಆಗುತ್ತಿದೆ.

Also Read
"ಅವರು ನನಗೆ ಹಿರಿಯಣ್ಣನ ಸಮಾನ, ಭಗವಾನ್​ ವಿಷ್ಣುವಿನ ಅವತಾರ" ಮೋದಿ ರಾಜಕೀಯ ಪಯಣಕ್ಕೆ 25 ರ ಸಂಭ್ರಮ; ಭೂತಾನ್​ ಪ್ರಧಾನಿ ಮೆಚ್ಚುಗೆ! Tshering Tobgay
Delhi Police detained Congress leaders Rahul Gandhi and Priyanka Gandhi Vadra as they were proceeding to stage a protest at Jantar Mantar.

ಜಂತರ್​-ಮಂತರ್​ ಹೋರಾಟ ಘೋಷಿಸಿದ ರಾಗಾ!

ಮುಖ್ಯ ಚುನಾವಣಾ ಆಯುಕ್ತ ಭೇಟಿಗಾಗಿ ಆಗ್ರಹಿಸಿ ಸುಮಾರು 8 ಗಂಟೆಗಳ ಕಾಲ ಧರಣಿ ನಡೆಸಿ ಘಲ ದೊರೆಯದ ಹಿನ್ನಲೆ, ದೆಹಲಿಯ ಜಂತರ್​-ಮಂತರ್​ನಲ್ಲಿ ಕೇಂದ್ರ ಚುನಾವಣಾ ಆಯೋಗ ಹಾಗೂ ಮುಖ್ಯ ಚುನಾವಣಾ ಆಯುಕ್ತರ ರಾಜೀನಾಮೆ ಆಗ್ರಹಿಸಿ ಪ್ರತಿಭಟನೆ ನಡೆಸುವುದಾಗಿ ರಾಹುಲ್​ ಗಾಂಧಿ ಘೋಷಿಸಿದ್ದಾರೆ.

ದೇಶದಲ್ಲಿ ಚುನಾವಣಾ ಆಯೋಗ ನಡೆಸುತ್ತಿರುವ ಎಸ್​ಐಆರ್​ ಪ್ರಕ್ರಿಯೆಯನ್ನು ತಕ್ಷಣವೇ ನಿಲ್ಲಿಸಬೇಕು ಹಾಗೂ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಬೇಕು ಎನ್ನವುದು ಈ ಪ್ರತಿಭಟನೆಯ ಪ್ರಮುಖ ಉದ್ದೇಶವಾಗಿದೆ ಎಂದು ರಾಹುಲ್​ ಗಾಂಧಿ ಹೇಳಿದ್ದಾರೆ.

300 ಕ್ಕೂ ಹೆಚ್ಚಿನ ಎಂಪಿ, ಎಂಎಲ್​ಎಗಳು ಮುಖ್ಯ ಚುನಾವಣಾ ಆಯುಕ್ತರು ತಮ್ಮ ಹುದ್ದೆಗೆ ರಾಜೀನಾಮೆ ನೀಡಬೇಕು ಮತ್ತು ಚುನಾವಣಾ ಆಯೋಗದ ಎದುರಿಗೆ ಪ್ರತಿಭಟನೆ ನಡೆಸಲು ಅವಕಾಶ ನೀಡಬೇಕೆಂದು ನಾವು ಒತ್ತಾಯ ಮಾಡಿದ್ದೆವು. ಆದರೆ ಈ ಕುರಿತು ಸಕಾರಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗದ ಹಿನ್ನಲೆ, ಜಂತರ್​-ಮಂತರ್​ನಲ್ಲಿ ಪ್ರತಿಭಟನೆ ಮುಂದುವರಿಸುವುದಾಗಿ ರಾಹುಲ್​ ಗಾಂಧಿ ತಿಳಿಸಿದ್ದಾರೆ, (ಏಜೆನ್ಸೀಸ್​).

Related Stories

Visuals of female police officers detaining a young woman who mocked the police.
ರಾಹುಲ್ ಗಾಂಧಿಯವರನ್ನು ಪೊಲೀಸರು ವಶಕ್ಕೆ ಪಡೆದಿರುವುದು.
ಸಿಇಸಿ ರಾಜೀನಾಮೆಗೆ ಪಟ್ಟು; ದೆಹಲಿಯಲ್ಲಿ ಇಂಡಿಯಾ ಮೈತ್ರಿಕೂಟದಿಂದ ಭಾರಿ ಪ್ರತಿಭಟನೆ: ಬ್ಯಾರಿಕೇಡ್ ಹತ್ತಿ ಪ್ರತಿಭಟಿಸಿದ ರಾಹುಲ್ ಗಾಂಧಿ | INDIA bloc
Tussle between the Election Commission and Rahul Gandhi over the Form 6 and SIR process controversy.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net