"ಅವರು ನನಗೆ ಹಿರಿಯಣ್ಣನ ಸಮಾನ, ಭಗವಾನ್​ ವಿಷ್ಣುವಿನ ಅವತಾರ" ಮೋದಿ ರಾಜಕೀಯ ಪಯಣಕ್ಕೆ 25 ರ ಸಂಭ್ರಮ; ಭೂತಾನ್​ ಪ್ರಧಾನಿ ಮೆಚ್ಚುಗೆ! Tshering Tobgay

ಸಾರ್ವಜನಿಕ ಆಡಳಿತದಲ್ಲಿ 25 ವರ್ಷ ಪೂರೈಸಿದ ಪ್ರಧಾನಿ ನರೇಂದ್ರ ಮೋದಿಯವರನ್ನು ಭೂತಾನ್ ಪ್ರಧಾನಿ ತ್ಸೆರಿಂಗ್ ಟೋಬ್ಗೆ ಭಗವಾನ್ ವಿಷ್ಣುವಿನ ಅವತಾರ ಹಾಗೂ ಹಿರಿಯಣ್ಣ ಎಂದು ಹಾಡಿ ಹೊಗಳಿದ್ದಾರೆ.
Bhutanese Prime Minister Tshering Tobgay praised Prime Minister Modi—who has completed 25 years in constitutional governance—as "my elder brother and an avatar of Lord Vishnu."
ಸಾಂವಿಧಾನಿಕ ಆಡಳಿತದ 25 ವರ್ಷ ಪೂರೈಸಿದ ಪ್ರಧಾನಿ ಮೋದಿ ಅವರನ್ನು "ನನ್ನ ಹಿರಿಯಣ್ಣ ಹಾಗೂ ಭಗವಾನ್ ವಿಷ್ಣುವಿನ ಅವತಾರ" ಎಂದು ಶ್ಲಾಘಿಸಿದ ಭೂತಾನ್ ಪ್ರಧಾನಿ ತ್ಸೆರಿಂಗ್ ಟೋಬ್ಗೆ.
Published on: 

ಥಿಂಫು: ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಅಧಿಕಾರ ರಾಜಕಾರಣದಲ್ಲಿ 25 ವರ್ಷಗಳನ್ನು ಪೂರೈಸಿದ ಹಿನ್ನಲೆ ದೇಶ ಸೇರಿದಂರೆ ಜಾಗತಿಕ ನಾಯಕರಿಂದ ಪ್ರಶಂಸೆಯ ಮಹಾಪೂರವೇ ಹರಿದು ಬರುತ್ತಿದೆ.

ಈ ಸಂದರ್ಭದಲ್ಲಿ ಭೂತಾನ್​ ದೇಶದ ಪ್ರಧಾನಿ, ತ್ಸೆರಿಂಗ್ ಟೋಬ್ಗೆ (Tshering Tobgay) 2019 ರಲ್ಲಿ ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಿದ ಸನ್ನಿವೇಶವನ್ನು ನೆನಪಿಸಿಕೊಂಡು, ನರೇಂದ್ರ ಮೋದಿ ಭಗವಾನ್​ ವಿಷ್ಣುವಿನ ಅವತಾರ, ಅವರು ನನಗೆ ಹಿರಿಯಣ್ಣನ ಸಮಾನ ಎಂದು ಹೇಳಿದ್ದಾರೆ.

ಮೋದಿ ನನ್ನ ಅಣ್ಣನ ಸಮಾನ!

ಇಂದು ನರೇಂದ್ರ ಮೋದಿ ಅಧಿಕಾರ ರಾಜಕಾರಣದಲ್ಲಿ 25 ವರ್ಷ ಪೂರೈಸಿದ ಹಿನ್ನಲೆ ಭೂತಾನ್​ ಪ್ರಧಾನಿ ತ್ಸೆರಿಂಗ್ ಟೋಬ್ಗೆ, 2019 ರಲ್ಲಿ ಮೋದಿ ಅವರನ್ನು ಭೇಟಿ ಮಾಡಿ ಮಾತನಾಡಿದ್ದ ಸನ್ನಿವೇಶವನ್ನು ಹಂಚಿಕೊಂಡಿದ್ದಾರೆ.

ನಾನು, ಜುಲೈ 27, 2019 ರಂದು ನವದೆಹಲಿಯಲ್ಲಿ ಪ್ರಧಾನಿ ಮೋದಿ ಅವರನ್ನು ಭೇಟಿ ಆಗಿದ್ದೆ. ಅವರನ್ನು ಭೇಟಿ ಮಾಡುವ 10 ತಿಂಗಳ ಹಿಂದಷ್ಟೆ ನಾನು ಅಧಿಕಾರವನ್ನು ಕಳೆದುಕೊಂಡಿದೆ. ಆದರೆ, ನಾನು ಮೋದಿ ಅವರನ್ನು ಭೇಟಿ ಮಾಡಿದಾಗ ಅವರಲ್ಲಿ ನನಗೊಬ್ಬ ಹಿರಿಯಣ್ಣ ದೊರೆತ ಭಾವ ಮೂಡಿತು. ನಿಜಕ್ಕೂ ಅವರೊಬ್ಬ ವಿಷ್ಣುವಿನ ಅವತಾರವೆಂಬಂತೆ ನನಗೆ ಭಾಸವಾಯಿತು ಎಂದು ಬರೆದುಕೊಂಡಿದ್ದಾರೆ.

ನಾನೇಕೆ ವಿಷ್ಣುವಿಗೆ ಹೋಲಿಸಿದೆ?

ಇನ್ನು ನಾನು ಮೋದಿ ಅವರನ್ನು ಸುಮ್ಮನೆ ಭಗವಾನ್ ವಿಷ್ಣುವಿಗೆ ಹೋಲಿಸಿಲ್ಲ, ಅವರು ಸುಮಾರು 12 ವರ್ಷಗಳ ಕಾಲ ಗುಜರಾತಿನ ಮುಖ್ಯಮಂತ್ರಿಗಳಾಗಿ ಮತ್ತು ಭಾರತದ ಪ್ರಧಾನಿಗಳಾಗಿ 12 ವರ್ಷ ಆಡಳಿತ ನಡೆಸುತ್ತಿರುವುದು ಕಡಿಮೆ ಸಾಧನೆಯಲ್ಲ. ಅದು ಭಾರತದಂತಹ ವಿಶಾಲ ದೇಶದಲ್ಲಿ ನಿರಂತರವಾಗಿ ಜನಮನ್ನಣೆ ಪಡೆಯುವುದು ಸುಲಭವಲ್ಲ ಎಂದಿದ್ದಾರೆ.

ಹಾಗೆಯೇ ಅವರ ಆಡಳಿತ ಅವಧಿಯಲ್ಲಿ ತಂತ್ರಜ್ಞಾನ, ಉತ್ಪಾದನೆ, ಆರೋಗ್ಯ, ಸ್ವಚ್ಛತೆ, ವಿದೇಶಿ ಹೂಡಿಕೆ ಮೊದಲಾದ ಕ್ಷೇತ್ರದಲ್ಲಿ ಗಮನಾರ್ಹ ಸಾಧನೆ ತೋರಿದ್ದಾರೆಂದು ಭೂತಾನ್ ಪ್ರಧಾನಿ ಹೊಗಳಿದ್ದಾರೆ.

Also Read
"ಹೊಟ್ಟೆ ತಗೊಂಡು ಓಡಲು ಆಗಲ್ಲ, ನನ್ನನ್ನು ಹೇಗೆ ಹಿಡಿಯುತ್ತಾರೆ?" ಪೊಲೀಸರಿಗೆ ಸವಾಲೆಸೆದ ಯುವತಿ; ಕ್ಷಣಾರ್ಧದಲ್ಲೇ ವಶಕ್ಕೆ ಪಡೆದ ಖಾಕಿ! Viral Video
Bhutanese Prime Minister Tshering Tobgay praised Prime Minister Modi—who has completed 25 years in constitutional governance—as "my elder brother and an avatar of Lord Vishnu."

ಅವರ ಶಿಸ್ತು ಅನುಕರಣೀಯ!

ಹಾಗೇಯ ಪ್ರಧಾನಿ ಮೋದಿ ಒಬ್ಬ ಅತ್ಯಂತ ಶಿಸ್ತು ಬದ್ಧ ವ್ಯಕ್ತಿಯಾಗಿದ್ದಾರೆ. ಅವರ ಆಹಾರ, ಉಡುಪು ಜೊತೆಗೆ ಕೆಲಸ ಮಾಡುವ ರೀತಿ, ಕೊಟ್ಟ ಮಾತಿಗೆ ನಿಲ್ಲುವ ಗುಣ, ತಾಳ್ಮೆ, ಸಂಯಮ ಇವೆಲ್ಲವು ಅವರಿಂದ ಕಲಿತುಕೊಳ್ಳಬೇಕಾದ ಗುಣಗಳಾಗಿವೆ ಎಂದು ಹೇಳಿದ್ದಾರೆ.

ಮೋದಿ ಅಧಿಕಾರಕ್ಕೆ 25 ರ ಸಂಭ್ರಮ!

ನರೇಂದ್ರ ದಾಮೋದರ ದಾಸ್​ ಮೋದಿ ಅಕ್ಟೋಬರ್​ 7, 2001 ರಂದು ಗುಜರಾತಿನ ಮುಖ್ಯಮಂತ್ರಿಗಳಾಗಿ ಅಧಿಕಾರ ರಾಜಕಾರಣಕ್ಕೆ ಎಂಟ್ರಿಕೊಟ್ಟರು. ನಂತರ 2001 ರಿಂದ 2014 ರವರೆಗೆ ಅಧಿಕಾರದಲ್ಲಿದ್ದು, 2014 ರಿಂದ ಪ್ರಸ್ತುತ ಅಂದರೆ ಸುಮಾರು 12 ವರ್ಷದಿಂದ ದೇಶದ ಪ್ರಧಾನಮಂತ್ರಿಯಾಗಿ ಅಧಿಕಾರ ನಡೆಸುತ್ತಿದ್ದಾರೆ. ಆದ್ದರಿಂದ ಇಂದು ಮೋದಿ ಅವರು ಸರ್ಕಾರದ ಮುಖ್ಯಸ್ಥನಾಗಿ ಕಳೆದ 25 ವರ್ಷಗಳಿಂದ ಆಡಳಿತ ನಡೆಸುತ್ತಿದ್ದಾರೆ, (ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net